ರಜಿನಿ ಹೊಸ ಚಿತ್ರಕ್ಕೆ ಅಳಿಯನೇ ಪ್ರೊಡ್ಯುಸರ್

ಈ ಸುದ್ದಿಯನ್ನು ಶೇರ್ ಮಾಡಿ

Rajini
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾಗಳು ಒಂದು ವರ್ಷದ ಮುನ್ನವೇ ದೇಶದಲ್ಲಿ, ಅಷ್ಟೇ ಏಕೆ ವಿದೇಶಗಳಲ್ಲೂ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತವೆ. ಈಗ ಬಂದಿರುವ ಹೊಸ ಸುದ್ದಿ ಎಂದರೆ ರಜನಿ ಚಿತ್ರಕ್ಕೆ ಅವರ ಅಳಿಯ ಮತ್ತು ನಟ ಧನುಷ್ ನಿರ್ಮಾಪಕನಾಗಲಿದ್ದಾನೆ.  ನಮ್ಮ ಮುಂದಿನ ಪ್ರೊಡಕ್ಷನ್‌ನಲ್ಲಿ ರಜನಿಕಾಂತ್ ನಟಿಸಲಿದ್ದಾರೆ ಎಂಬುದನ್ನು ಪ್ರಕಟಿಸಲು ನನಗೆ ತುಂಬಾ ಹೆಮ್ಮೆ ಮತ್ತು ಗೌರವ ಎನಿಸುತ್ತದೆ ಎಂದು ಧನುಷ್ ಟ್ವೀಟ್ ಮಾಡಿದ್ಧಾನೆ. ಕಬಾಲಿ ಚಿತ್ರದ ಡೈರೆಕ್ಟರ್ ರಂಜಿತ್‌ಗೆ ಮತ್ತೆ ರಜನಿ ಸಿನಿಮಾ ನಿರ್ದೇಶಿಸಲು ಕ್ಯಾಪ್ಟನ್ ಸೀಟ್ ಬಿಟ್ಟುಕೊಟ್ಟಿದ್ದಾನೆ ಧನುಷ್.

ಕಬಾಲಿ ಮೂಲಕ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿರುವ ಸ್ಟೈಲ್‌ಕಿಂಗ್ ಮುಂದಿನ ಚಿತ್ರ 2.0. ಈ ವೈಜನಿಕ-ಕಾಲ್ಪನಿಕ ಚಿತ್ರದಲ್ಲಿ ರಜಿನಿ ಈಗ ಬ್ಯುಸಿ. ಈ ಪ್ರಾಜೆಕ್ಟ್ ಪೂರ್ಣಗೊಂಡ ಮೇಲೆ ರಜನಿ ತಮ್ಮ ಆಳಿಯ ನಿರ್ಮಿಸುವ ಸಿನಿಮಾದಲ್ಲಿ ಮಿಂಚಲಿದ್ದಾರೆ. ಆರ್ ಮತ್ತು ಆರ್ ಜೋಡಿ ಕಬಾಲಿಯಲ್ಲಿ ಮೋಡಿ ಮಾಡಿತ್ತು. ಈ ಕಾಂಬಿನೇಷನ್‌ನ ಮುಂದಿನ ಸಿನಿಮಾದ ಕಥೆ ಏನು ? ರಜನಿ ಹೊಸ ಲುಕ್-ಗೆಟಪ್ ಹೇಗಿರುತ್ತದೆ ? ಇತ್ಯಾದಿ ಪ್ರಶ್ನೆಗಳ ಬಗ್ಗೆ ಅಭಿಮಾನಿಗಳು ಈಗಿನಿಂದಲೇ ತಲೆಕೆಡಿಸಿಕೊಂಡಿದ್ದಾರೆ. ಒಂದೊಂದು ಚಿತ್ರದಲ್ಲೂ ವೈವಿಧ್ಯಮಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆರ್‌ಕೆಯನ್ನು ನೋಡಲು ಅಭಿಮಾನಿಗಳು ಮುಂದಿನ ವರ್ಷದವರೆಗೆ ಕಾತುರದಿಂದ ಕಾಯಬೇಕು.

► Follow us on –  Facebook / Twitter  / Google+

Facebook Comments

Sri Raghav

Admin