ರಣಜಿ ಆಡ್ತಾರಂತೆ ಅಶ್ವಿನ್, ಜಡೇಜಾ

ಈ ಸುದ್ದಿಯನ್ನು ಶೇರ್ ಮಾಡಿ

Ashwin--02

ನವದೆಹಲಿ, ಅ.1 – ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆಯುವ ಅಂತಿಮ ಏಕದಿನ ಪಂದ್ಯದ ಬಳಿಕ ಈಗ ಕ್ರೀಡಾಭಿಮಾನಿಗಳ ಚಿತ್ತ ರಣಜಿ ಟ್ರೋಫಿಯತ್ತ ನೆಟ್ಟಿದೆ. ಈ ಬಾರಿಯ ರಣಜಿ ಸರಣಿಯನ್ನು ಮತ್ತಷ್ಟು ರಂಗು ರಂಗಾಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್, ರವೀಂದ್ರಾ ಜಡೇಜಾ, ಚೇತೇಶ್ವರ ಪೂಜಾರ, ಮುರಳಿ ವಿಜಯ್ ಅವರು ತಮ್ಮ ತಮ್ಮ ರಾಜ್ಯಗಳ ತಂಡಗಳನ್ನು ಪ್ರತಿನಿಧಿಸುವ ಸೂಚನೆ ನೀಡಿದ್ದಾರೆ.
ಆಸ್ಟ್ರೇಲಿಯಾ ಸರಣಿಯಿಂದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‍ಗೆ ರೆಸ್ಟ್ ನೀಡಿದ್ದರೆ, ರವೀಂದ್ರ ಜಡೇಜರನ್ನು ಎರಡು ಪಂದ್ಯಗಳಿಗೆ ಆಯ್ಕೆ ಮಾಡಿಕೊಂಡರೂ ಅಂತಿಮ 11ರಲ್ಲಿ ಸ್ಥಾನ ಕಲ್ಪಿಸಿರಲಿಲ್ಲ , ಪೂಜಾರ ಹಾಗೂ ಮುರಳಿ ವಿಜಯ್ ಟೆಸ್ಟ್ ಸ್ಪೆಷಾಲಿಸ್ಟ್‍ಗಳಾಗಿದ್ದಾರೆ.

ಮೂಲಗಳ ಪ್ರಕಾರ ಅಶ್ವಿನ್ ಹಾಗೂ ಮುರಳಿ ವಿಜಯ್ ಈಗಾಗಲೇ ತಮಿಳುನಾಡಿನ ಕ್ರಿಕೆಟ್ ಸಂಸ್ಥೆಯೊಂದಿಗೆ ಚರ್ಚೆ ನಡೆಸಿದ್ದರೆ, ಚೇತೇಶ್ವರ ಪೂಜಾರ ಹಾಗೂ ರವೀಂದ್ರ ಜಡೇಜ ಈಗಾಗಲೇ ಪ್ರಕಟಿಸಿರುವ ಸೌರಾಷ್ಟ್ರ ತಂಡದಲ್ಲಿ ಸ್ಥಾನ ಪಡೆದಿದ್ದು , ಅಕ್ಟೋಬರ್ 6 ರಂದು ನಡೆಯಲಿರುವ ಹರಿಯಾಣದ ವಿರುದ್ಧ ಪಂದ್ಯದಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ.

ಅಶ್ವಿನ್, ಜಡೇಜ ಕಾತರ:

ಏಕದಿನ ಸರಣಿಯಿಂದ ದೂರ ಉಳಿದಿದ್ದರೂ ಕೂಡ ಅಕ್ಟೋಬರ್ 7 ರಿಂದ ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ 3 ಟ್ವೆಂಟಿ-20 ಸರಣಿಗಾಗಿ ಪ್ರಕಟಿಸಲಿರುವ ತಂಡದಲ್ಲಿ ನಮ್ಮನ್ನು ಪರಿಗಾಣಿಸುತ್ತಾರೆ ಎಂಬ ಕಾತರದಲ್ಲಿ ಅಶ್ವಿನ್, ಜಡೇಜರವರಿದ್ದಾರೆ.  ಒಂದು ವೇಳೆ 15ರ ತಂಡದಲ್ಲಿ ಸ್ಥಾನ ದೊರೆಯದಿದ್ದರೆ ರಣಜಿಯಲ್ಲಿ ಮುಂದುವರೆಯುವ ನಿರ್ಧಾರ ಮಾಡಿದ್ದಾರೆ.

Facebook Comments

Sri Raghav

Admin