ರಣಜಿ ಕ್ರಿಕೆಟ್ : ಕರ್ನಾಟಕಕ್ಕೆ ದೆಹಲಿ ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

vinay--kumar

ಕೋಲ್ಕತ್ತಾ, ಅ. 19- ಪ್ರಸಕ್ತ ರಣಜಿ ಋತುವಿನ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿರುವ ವಿನಯ್‍ಕುಮಾರ್ ನಾಯಕತ್ವದ ಕರ್ನಾಟಕ ತಂಡ ನಾಳೆಯಿಂದ ನಡೆಯಲಿರುವ ಪಂದ್ಯ ಗೆಲುವತ್ತ ಚಿತ್ತ ಹರಿಸಿದೆ.ಮೊದಲ ಪಂದ್ಯದಲ್ಲಿ ಮಿಂಚಿರುವ ಆರ್.ಸಮರ್ಥ್ ರ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದರೂ ಕೂಡ ರಾಬಿನ್ ಉತ್ತಪ್ಪ , ಮಯಾಂಕ್ ಅಗರ್‍ವಾಲ್ ಅವರು ತಮ್ಮ ಎಂದಿನ ಹೋರಾಟ ಪ್ರದರ್ಶಿಸಿದರೆ ರಾಜ್ಯ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶ ಕಾಣಬಹುದು.ಬೌಲಿಂಗ್ ವಿಭಾಗದಲ್ಲೂ ಕೂಡ ವಿನಯ್‍ಕುಮಾರ್, ಶ್ರೇಯಾಸ್ ಗೋಪಾಲ್, ಅಭಿಮನ್ಯು ಮಿಥನ್‍ರಂತಹ ಅನುಭವಿಗಳನ್ನು ಹೊಂದಿರುವ ಕರ್ನಾಟಕ ತಂಡ ಎದುರಾಳಿ ತಂಡಕ್ಕೆ ಅಪಾಯವಾಗಿ ಪರಿಣಿಸಲಿದ್ದಾರೆ.

ದೆಹಲಿಗೆ ಗೌತಮ್- ಇಶಾಂತ್ ಬಲ:
ಕರ್ನಾಟಕ ತಂಡದಷ್ಟೇ ಸಮರ್ಥ ತಂಡವೆನಿಸಿಕೊಂಡಿರುವ ದೆಹಲಿ ತಂಡಕ್ಕೆ ಅನುಭವಿ ಆಟಗಾರರಾದ ಗೌತಮ್‍ಗಂಭೀರ್ ಹಾಗೂ ಇಶಾಂತ್ ಶರ್ಮಾ ಆಡಲಿರುವುದರಿಂದ ಆ ತಂಡದ ಬಲ ಮತ್ತಷ್ಟು ಹೆಚ್ಚಿದೆ.ಆಸ್ಸಾಮ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ದೆಹಲಿಗೆ ನಾಯಕ ಉನ್ಮುಕ್ತ್ ಚಾಂದ್, ಎನ್.ರಾಣಾ, ಆರ್.ಆರ್.ಪಂತ್, ಮಿಲಂದ್ ಕುಮಾರ್‍ರ ಬ್ಯಾಟಿಂಗ್ ಶಕ್ತಿ ಹಾಗೂ ಪವೀಂದರ್ ಅವಾನಾ, ಸಾಂಗ್ವಾನ್‍ರ ಬೌಲಿಂಗ್ ಬಲವಿದ್ದು ಕರ್ನಾಟಕ ವಿರುದ್ಧದ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin