ರಣಜಿ ಕ್ರಿಕೆಟ್ ತಂಡ ಸೇರಿದ ರಾಹುಲ್, ನಾಯರ್ : ಕರ್ನಾಟಕಕಕ್ಕೆ ಬಂತು ಆನೆಬಲ

ಈ ಸುದ್ದಿಯನ್ನು ಶೇರ್ ಮಾಡಿ

Rahul-and-Nair

ವಿಶಾಖಪಟ್ಟಣಂ,ಡಿ.22- ಈ ಬಾರಿಯ ರಣಜಿ ಕಪ್ ಗೆಲ್ಲುವ ಫೇವರೇಟ್ ತಂಡವೆಂದೇ ಬಿಂಬಿಸಿಕೊಂಡಿರುವ ವಿನಯ್‍ಕುಮಾರ್ ನಾಯಕತ್ವದ ಕರ್ನಾಟಕ ತಂಡವು ಅಭಿನವ್ ಮುಕುಂದ್ ಸಾರಥ್ಯದ ತಮಿಳುನಾಡು ತಂಡವನ್ನು ಕ್ವಾಟರ್‍ಫೈನಲ್‍ನಲ್ಲಿ ಎದುರಿಸುತ್ತಿದ್ದು ಸೆಮಿಫೈನಲ್‍ಗೇರಲು ಉತ್ಸುಕವಾಗಿದೆ.

ರಾಹುಲ್- ಕರುಣ್ ಆನೆಬಲ:

ಇಂಗ್ಲೆಂಡ್ ವಿರುದ್ಧದ 5ನೆ ಪಂದ್ಯದಲ್ಲಿ ಶತಕ ಗಳಿಸಿದ ಕೆ.ಎಲ್.ರಾಹುಲ್ (199 ರನ್) ಹಾಗೂ ಚೊಚ್ಚಲ ತ್ರಿಶತಕ ಗಳಿಸಿದ ಕರುಣ್ ನಾಯರ್ (303*)ರು ಕರ್ನಾಟಕ ತಂಡವನ್ನು ಕೂಡಿಕೊಂಡಿರುವುದು ವಿನಯ್ ಕುಮಾರ್ ಪಡೆಗೆ ಆನೆ ಬಲ ಬಂದಂತಾಗಿದೆ.

ಬ್ಯಾಟ್ಸ್‍ಮನ್‍ಗಳ ವೈಭವ:

ಕರ್ನಾಟಕ ಹಾಗೂ ತಮಿಳುನಾಡು ತಂಡಗಳಲ್ಲಿ ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಆಟಗಾರರೇ ಹೆಚ್ಚಾಗಿರುವುದರಿಂದ ಸಾಮಾನ್ಯವಾಗಿಯೇ ನಾಳೆಯ ಪಂದ್ಯದಲ್ಲಿ ರನ್‍ಗಳ ಹೊಳೆಯೇ ಸುರಿಯುವ ನಿರೀಕ್ಷೆ ಇದೆ.  ಪ್ರಸಕ್ತ ರಣಜಿ ಆರಂಭದಿಂದಲೂ ಉತ್ತಮ ಹಾಗೂ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿರುವ ಕರ್ನಾಟಕದ ಆರ್.ಸಮರ್ಥ್ (8 ಪಂದ್ಯಗಳಿಂದ 1 ಶತಕ , 4 ಅರ್ಧಶತಕ, 681 ರನ್, 235 ಗರಿಷ್ಠ) ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ಪಾತ್ರ ವಹಿಸಿದ್ದರೆ, ತಮಿಳುನಾಡಿನ ಪಾಳೆಯದಲ್ಲಿ ಕೆ.ಎಂ.ಗಾಂಧಿ 8 ಪಂದ್ಯ, 709 ರನ್, 3 ಶತಕ, 2 ಅರ್ಧಶತಕ, 202 ಶ್ರೇಷ್ಠ), ನಾಯಕ ಅಭಿನವ್ ಮುಕುಂದ್ (8 ಪಂದ್ಯ, 672 ರನ್, 3 ಶತಕ, 3 ಅರ್ಧಶತಕ)ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (8 ಪಂದ್ಯ, 592 ರನ್, 1 ಶತಕ, 5 ಅರ್ಧಶತಕ) ತಮ್ಮ ಬ್ಯಾಟಿಂಗ್ ವೈಭವವನ್ನು ಮೆರೆದಿದ್ದಾರೆ.

ಬೌಲಿಂಗ್‍ನಲ್ಲೂ ಶ್ರೇಷ್ಠ ಪ್ರದರ್ಶನ:

ಎರಡು ತಂಡಗಳಲ್ಲೂ ಸರ್ವಶ್ರೇಷ್ಠ ಬೌಲರ್‍ಗಳ ದಂಡೇ ಹೆಚ್ಚಾಗಿದ್ದು ಯಾವುದೇ ಕ್ಷಣದಲ್ಲಾದರೂ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಕಡಿವಾಣ ಹಾಕುವ ಸಾಮಥ್ರ್ಯ ಹೊಂದಿದ್ದಾರೆ.

ವೇಗಿಗಳ ಬಲ:

ಕರ್ನಾಟಕದ ತಂಡದಲ್ಲಿರುವ ಪ್ರಮುಖ ವೇಗಿಗಳಾದ ವಿನಯ್‍ಕುಮಾರ್ (27 ವಿಕೆಟ್), ಶ್ರೀನಾಥ್ ಅರವಿಂದ್ (26 ವಿಕೆಟ್) ಹಾಗೂ ಕೆ.ಗೌತಮ್ (27 ವಿಕೆಟ್) ತಮ್ಮ ಬೌಲಿಂಗ್ ಮೊನಚನ್ನು ಪ್ರದರ್ಶಿಸಿ ತಂಡವನ್ನು ಕ್ವಾಟರ್‍ಫೈನಲ್ ಹಂತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.  ತಮಿಳುನಾಡಿನ ಪರ ವಿಘ್ನೇಶ್ (32 ವಿಕೆಟ್), ಅಶ್ವಿನ್ ಕ್ರಿಸ್ಟ್ (27 ವಿಕೆಟ್) ಕೂಡ ತಮ್ಮ ಬೌಲಿಂಗ್ ಮೊನಚಿನಿಂದ ತಂಡಕ್ಕೆ ಗೆಲುವು ತಂದುಕೊಟ್ಟಿದ್ದು ಈಗ ಕ್ವಾಟರ್‍ಫೈನಲ್‍ನಲ್ಲಿ ಕರ್ನಾಟಕದ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಲು ಕಾತರದಿಂದಿದ್ದಾರೆ.

ತಮಿಳುನಾಡಿಗೆ ಆರಂಭಿಕ ಆಘಾತ:

ಸರಣಿಯ ಪ್ರಮುಖ ಪಂದ್ಯವೆಂದೇ ಬಿಂಬಿಸಿಕೊಂಡಿರುವ ಕ್ವಾಟರ್‍ಫೈನಲ್ ಪಂದ್ಯದಿಂದ ತಮಿಳುನಾಡಿನ ಶ್ರೇಷ್ಠ ಆಟಗಾರರಾದ ಆರ್.ಅಶ್ವಿನ್ ಹಾಗೂ ಮುರಳಿ ವಿಜಯ್ ಅವರು ಗಾಯದಿಂದ ನಾಳೆಯ ಪಂದ್ಯವನ್ನು ಆಡುವ ನಿರ್ಧಾರದಿಂದ ದೂರ ಸರಿದಿರುವುದರಿಂದ ತಮಿಳುನಾಡಿಗೆ ಆರಂಭಿಕ ಆಘಾತವಾಗಿದೆ. ವಿಶಾಖಪಟ್ಟಣದಲ್ಲಿ ನಡೆಯುವ ಕ್ವಾಟರ್‍ಫೈನಲ್ ಪಂದ್ಯವು ಎರಡು ಮದಗಜಗಳ ನಡೆಯುವ ಹೋರಾಟವೆಂದೇ ಬಿಂಬಿಸಿಕೊಂಡಿದ್ದು ಸೆಮಿಫೈನಲ್‍ಗೇರುವ ತಂಡ ಯಾವುದೆಂದು ಅಪಾರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin