ರಣಜಿ ಕ್ರಿಕೆಟ್ : ಫೈನಲ್‍ಗೇರಿದ ಗುಜರಾತ್

ಈ ಸುದ್ದಿಯನ್ನು ಶೇರ್ ಮಾಡಿ

Ranaji

ನಾಗ್ಪುರ, ಜ. 4– ಜಸ್‍ಪ್ರೀತ್ ಬೂಮ್ರಾರ ಬೌಲಿಂಗ್ ದಾಳಿ ಎದುರು 111 ರನ್‍ಗಳಿಗೆ ಸರ್ವಪತನಗೊಂಡಿರುವ ಜಾರ್ಖಂಡ್‍ನ ಫೈನಲ್‍ಗೇರುವ ಕನಸು ಛಿದ್ರಗೊಂಡಿದೆ. ದ್ವಿತೀಯ ಇನ್ನಿಂಗ್ಸ್‍ನಲ್ಲಿ ಗೆಲ್ಲಲು 234 ರನ್‍ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಜಾರ್ಖಂಡ್‍ನ ಆರಂಭಿಕ ಬ್ಯಾಟ್ಸ್‍ಮನ್‍ಗಳು ಶೂನ್ಯ ಸಂಪಾದನೆ ಮಾಡಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದಾಗಲೇ ಜಾರ್ಖಂಡ್ ಸೋಲಿನ ಭೀತಿ ಎದುರಿಸಿತು.

ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ವಿರಾಟ್ ಸಿಂಗ್ (17 ರನ್, 2ಬೌಂಡರಿ), ನಾಯಕ ಸೌರವ್ ತಿವಾರಿ (17 ರನ್, 3 ಬೌಂಡರಿ), ವಿಕೆಟ್ ಕೀಪರ್ ಇಶಾನ್ ಸಿಂಗ್ (19ರನ್, 1 ಸಿಕ್ಸರ್) ಹಾಗೂ ಕುಶಾಲ್ ಸಿಂಗ್ (24 ರನ್, 3 ಬೌಂಡರಿ, 1 ಸಿಕ್ಸರ್) ಪ್ರತಿರೋಧ ತೋರಿದರೂ ಕೂಡ ಜಾರ್ಖಂಡ್ 41 ಓವರ್‍ಗಳಲ್ಲಿ 111 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ 123 ರನ್‍ಗಳ ಅಂತರದಿಂದ ಸೋಲು ಕಾಣುವ ಮೂಲಕ ಫೈನಲ್‍ಗೇರುವ ಕನಸು ಛಿದ್ರಗೊಂಡಿತು.

1950-51ರ ಫೈನಲ್‍ಗೇರಿದ ಗುಜರಾತ್:

ರಣಜಿ ಇತಿಹಾಸದಲ್ಲೇ ಒಂದೇ ಒಂದು ಬಾರಿ ಫೈನಲ್‍ಗೇರಿದರೂ ಹೋಲ್ಕರ್ ತಂಡದ ವಿರುದ್ಧ ಗುಜರಾತ್ ತಂಡವು ಸೋಲು ಕಂಡಿತು. ಆದರೆ ಪ್ರಸಕ್ತ ನಡೆಯುತ್ತಿರುವ ರಣಜಿ ಫೈನಲ್‍ನಲ್ಲಿ ಪಾರ್ಥಿವ್ ಪಟೇಲ್ ನಾಯಕತ್ವದಲ್ಲಿ ರಣಜಿ ಚಾಂಪಿಯನ್ಸ್ ಆಗುವ ಹುಮ್ಮಸ್ಸಿನಲ್ಲಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಮುಖಭಂಗ:

ಜಾರ್ಖಂಡ್ ಸೋಲು ಒಂದು ಮೂಲದ ಪ್ರಕಾರ ಭಾರತದ ಸೀಮಿತ ಓವರ್‍ಗಳ ನಾಯಕ ಮಹೇಂದ್ರಸಿಂಗ್ ಧೋನಿಗೆ ಮುಖಭಂಗವಾದಂತಿದೆ. ಜಾರ್ಖಂಡ್ ತಂಡದ ತರಬೇತಿದಾರನ ಕಾರ್ಯ ನಿರ್ವಹಿಸಿದ್ದ ಧೋನಿ ಶತಾಯಗತಾಯ ತಂಡವನ್ನು ಫೈನಲ್‍ಗೇರಿಸುವ ತವಕದಲ್ಲಿದ್ದರೂ ಅವರ ಆಸೆಗೆ ಗುಜರಾತ್‍ನ ವೇಗದ ಬೌಲರ್ ಜಸ್‍ಪ್ರೀತ್ ಬೂಮ್ರಾ ಹಾಗೂ ಆರ್.ಪಿ.ಸಿಂಗ್ ತಣ್ಣೀರೆರಚಿದರು.
ಸ್ಕೋರ್ ವಿವರ:

ಗುಜರಾತ್ ಮೊದಲ ಇನ್ನಿಂಗ್ಸ್ 390, ಎರಡನೆ ಇನ್ನಿಂಗ್ಸ್ 252, ಜಾರ್ಖಂಡ್ ಮೊದಲ ಇನ್ನಿಂಗ್ಸ್ 408, ದ್ವಿತೀಯ ಇನ್ನಿಂಗ್ಸ್ 111

Facebook Comments

Sri Raghav

Admin