ರಣಜಿ ಟ್ರೋಫಿ : ದೆಹಲಿ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿದ ಕರ್ನಾಟಕ

ಈ ಸುದ್ದಿಯನ್ನು ಶೇರ್ ಮಾಡಿ

Ranji-01

ಕೋಲ್ಕತ್ತಾ, ಅ. 22– ಕರ್ನಾಟಕದ ಯುವ ಬೌಲರ್ ಗೌತಮ್‍ರ ಬೌಲಿಂಗ್ ದಾಳಿ ಎದುರು ಎಡವಿದ ದೆಹಲಿ 164 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ ಇನ್ನಿಂಗ್ಸ್ ಹಾಗೂ 250 ರನ್‍ಗಳಿಂದ ಸೋಲು ಕಂಡಿದೆ. ಕರ್ನಾಟಕ ವಿರುದ್ಧದ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ 90 ರನ್‍ಗಳಿಗೆ ಸರ್ವಪತನ ಕಂಡಿದ್ದ ದೆಹಲಿ ದ್ವಿತೀಯ ಇನ್ನಿಂಗ್ಸ್‍ನಲ್ಲಿ ಗೆಲ್ಲಲು 334 ರನ್‍ಗಳ ಬೃಹತ್ ಸವಾಲನ್ನು ಎದುರಿಸಿತ್ತು. ಮೂರನೆ ದಿನವಾದ ಇಂದು ಕ್ರೀಸ್‍ಗೆ ಇಳಿದ ಗೌತಮ್ ಗಂಭೀರ್ ಹಾಗೂ ಉನ್ಮುಕ್ತ್ ಚಾಂದ್ ಎಚ್ಚರಿಕೆಯ ಆಟಕ್ಕೆ ಮುಂದಾದರು ಆದರೆ ಗಂಭೀರ್ 2 ರನ್ ಗಳಿಸಿ ಅಭಿಮನ್ಯು ಮಿಥುನ್‍ರ ಬೌಲಿಂಗ್‍ನಲ್ಲಿ ರಾಬಿನ್ ಉತ್ತಪ್ಪಗೆ ಕ್ಯಾಚ್ ನೀಡಿ ಹೊರ ನಡೆದ ನಂತರ ಬಂದ ಧ್ರುವ ಶೌರ್ಯ ಕೂಡ ಖಾತೆಯನ್ನೇ ತೆರೆಯದೆ ಅಭಿಮನ್ಯುಗೆ ಕ್ಲೀನ್ ಬೌಲ್ಡಾದರು.

ಚಾಂದ್- ರಾಣಾ ಆಸರೆ:

11 ರನ್‍ಗಳಿಗೆ ಪ್ರಮುಖ ಎರಡು ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನವದೆಹಲಿ ಮೂರನೇ ವಿಕೆಟ್‍ಗೆ ಜೊತೆಗೂಡಿದ ಉನ್ಮುಕ್ತ್‍ಚಾಂದ್ ಹಾಗೂ ನಿತೀಶ್ ರಾಣಾ 50 ರನ್‍ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು. ಈ ಜೋಡಿಯು ಅಪಾಯಕಾರಿಯಾಗಿ ಪರಿಣಿಸಿದ್ದಾಗಲೇ ಗೌತಮ್ ತಮ್ಮ ಬೌಲಿಂಗ್ ಚಮತ್ಕಾರದಿಂದ ರಾಣಾ (28ರನ್, 6 ಬೌಂಡರಿ)ರನ್ನು ಎಲ್‍ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಂತರ ಬಂದ ರಿತೀಶ್ ಪಂಥ್ (9 ರನ್) ಹಾಗೂ ಉನ್ಮುಕ್ತ್ ಚಾಂದ್ (38 ರನ್, 6ಬೌಂಡರಿ, 1 ಸಿಕ್ಸರ್)ರಿಗೂ ಕೂಡ ಪೆವಿಲಿಯನ್ ದಾರಿ ತೋರಿಸಿದರು.

ಚಾಂದ್ ಔಟ್ ಆದ ವರುಣ್ ಸುಧ್ (41 ರನ್, 6 ಬೌಂಡರಿ, 1 ಸಿಕ್ಸರ್) ಕೊನೆಯವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದರೂ ಕೂಡ ದೆಹಲಿ 164 ರನ್‍ಗಳಿಗೆ ಸರ್ವಪತನ ಕಂಡು ಇನ್ನಿಂಗ್ಸ್ ಸೋಲು ಅನುಭವಿಸಿತು. ಕರ್ನಾಟಕ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕೆ.ಗೌತಮ್ 5 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥನ್, ಶ್ರೇಯಾಸ್ ಗೋಪಾಲ್ ತಲಾ 2 ವಿಕೆಟ್ ಹಾಗೂ ಅರವಿಂದ್ ಶ್ರೀನಾಥ್ 1 ವಿಕೆಟ್ ಅನ್ನು ಕೆಡವಿದರು.

► Follow us on –  Facebook / Twitter  / Google+

Facebook Comments

Sri Raghav

Admin