ರಣಜಿ ಫಾಸ್ಟೆಸ್ಟ್ ಸೆಂಚುರಿ : ಮೆಕಲುಂ ದಾಖಲೆ ಮುರಿದ ರಿಷಭ್ ಪಂಥ್

ಈ ಸುದ್ದಿಯನ್ನು ಶೇರ್ ಮಾಡಿ

Ranji

ತಿರುವನಂತಪುರಂ, ನ.8– ಜಾರ್ಖಂಡ್ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ನವ ದೆಹಲಿಯ ಬ್ಯಾಟ್ಸ್‍ಮನ್ ರಿಷಭ್ ಪಂಥ್ ಅವರು ನ್ಯೂಜಿಲೆಂಡ್‍ನ ಮಾಜಿ ಟೆಸ್ಟ್ ನಾಯಕ ಬ್ರೆಂಡಂ ಮೆಕಲಂ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಬ್ರೆಡಂ ಮೆಕಲಂ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಇಂದಿನ ರಣಜಿ ಪಂದ್ಯದಲ್ಲಿ ರಿಷಭ್ ಪಂತ್ 48 ಎಸೆತಗಳಲ್ಲೇ ಶತಕವನ್ನು ಬಾರಿಸುವ ಮೂಲಕ ಆ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ರಿಷಭ್ ಪಂತ್ ಪ್ರಸಕ್ತ ರಣಜಿ ಋತುವಿನಲ್ಲಿ ಆರು ಶತಕಗಳನ್ನು ಬಾರಿಸಿರುವುದೇ ಅಲ್ಲದೆ ಜಾರ್ಖಂಡ್ ವಿರುದ್ಧದ ಈ ಪಂದ್ಯದ ಎರಡೂ ಇನ್ನಿಂಗ್ಸ್‍ನಲ್ಲಿ ಶತಕ ಗಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin