ರಣಧೀರ ಕಂಠೀರವ ಉದ್ಯಾನವನದ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

agSGDG

ಬೆಂಗಳೂರು, ಆ.6- ಈ ಹಿಂದೆ ಕನ್ನಡ ನಾಡನ್ನಾಳಿದ ರಾಜ ಮಹಾರಾಜರು ಅಜರಾಮರರಾಗಿದ್ದಾರೆ. ರಣಧೀರ ಕಂಠೀರವ, ಕೃಷ್ಣದೇವರಾಯ, ಅಮೋಘವರ್ಷ ನೃಪತುಂಗ, ವಿಷ್ಣುವರ್ಧನ ಸೇರಿದಂತೆ ನಮ್ಮನ್ನು ಆಳಿದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ, ಮೈಸೂರು ಸಂಸ್ಥಾನದ ರಾಜಮಹಾರಾಜರು ವಿರಾಜಮಾನರಾಗಿದ್ದಾರೆ. ಇದು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‍ನಲ್ಲಿ ತಲೆ ಎತ್ತಿರುವ ರಣಧೀರ ಕಂಠೀರವ ಉದ್ಯಾನವನದ ವೈಶಿಷ್ಟ್ಯ.  ವಿಭಿನ್ನ ಪರಿಕಲ್ಪನೆಯೊಂದಿಗೆ ರೂಪುಗೊಂಡಿರುವ ಕನ್ನಡ ನಾಡಿನ ಭವ್ಯ ಇತಿಹಾಸ ಮತ್ತು ರಾಜಮಹಾರಾಜರಿಗೆ ಸೇರಿದ ವಿಚಾರಗಳನ್ನು ಈ ಉದ್ಯಾನವನದಲ್ಲಿ ದಾಖಲಿಸಲಾಗಿದೆ. ವಿಶ್ವವಿಖ್ಯಾತ ಮಹಾಶಿಲ್ಪಿಗಳ ಕೈಚಳಕದಿಂದ ಮೂಡಿ ಬಂದಿರುವ ಚಿತ್ತಾಕರ್ಷಕ ಶಿಲ್ಪಕಲೆಗಳನ್ನು ಇಂದು ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಲೋಕಾರ್ಪಣೆ ಮಾಡಿದರು.  ಕನ್ನಡ ನಾಡಿನ ಸಂಸ್ಕøತಿಯನ್ನು ಬಿಂಬಿಸುವ ಈ ಕಾರ್ಯಕ್ಕೆ ಮೇಯರ್ ಮಂಜುನಾಥರೆಡ್ಡಿ ಮತ್ತು ಮಾಜಿ ಡಿಸಿಎಂ ಆರ್.ಅಶೋಕ್ ಸಾಕ್ಷಿಯಾದರು.

DGSDFGG

ಇನ್ನಿತರ ಕಡೆಗಳಲ್ಲೂ ಇಂತಹ ಪಾರ್ಕ್ ಅವಶ್ಯಕ:

ರಾಜಮಹಾರಾಜರ ಶಿಲ್ಪಕಲೆಯನ್ನು ಕಂಡು ಪುನೀತ್‍ರಾಜ್‍ಕುಮಾರ್ ಪುಳಕಿತರಾದರು. ಎಲ್ಲಾ ಶಿಲ್ಪಗಳಲ್ಲೂ ಡಾ.ರಾಜ್‍ಕುಮಾರ್ ಅವರ ಭಾವ ಇರುವುದನ್ನು ಕಂಡು ಒಂದು ಕ್ಷಣ ಗದ್ಗದಿತರಾದರು.  ನಂತರ ಮಾತನಾಡಿದ ಅವರು, ಉದ್ಯಾನನಗರಿ ಖ್ಯಾತಿಯ ಬೆಂಗಳೂರಿನಲ್ಲಿ ಹಲವಾರು ಪಾರ್ಕ್‍ಗಳಿವೆ. ಇತ್ತೀಚೆಗೆ ಥೀಮ್‍ಪಾರ್ಕ್‍ಗಳು ಹೆಚ್ಚಾಗಿವೆ. ಆದರೆ, ಕನ್ನಡ ನಾಡು, ನುಡಿ, ಸಂಸ್ಕøತಿಯನ್ನು ಹಾಗೂ ರಾಜ-ಮಹಾರಾಜರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಇಂತಹ ಅತ್ಯದ್ಭುತ ಪಾರ್ಕ್ ಇನ್ನೆಲ್ಲೂ ಇಲ್ಲ. ಇಂತಹ ಪಾರ್ಕ್‍ಗಳನ್ನು ನಗರದ ಇತರೆಡೆಗಳಲ್ಲೂ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.

ಪಾರ್ಕ್‍ಗಳ ಸಂಕೀರ್ಣ:

ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾರಮೇಶ್ ಮತ್ತು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರ ಪರಿಶ್ರಮದಿಂದ ಯಡಿಯೂರು ವಾರ್ಡ್ ಪಾರ್ಕ್‍ಗಳ ಸಂಕೀರ್ಣವಾಗಿ ರೂಪುಗೊಂಡಿದೆ. ಇಲ್ಲಿ ಸಂಜೀವಿನಿ ಪಾರ್ಕ್ ಮತ್ತಿತರ ಪಾರ್ಕ್‍ಗಳು ಮುಖ್ಯವಾದುದು. ಇದರ ಜತೆಗೆ  ಕನ್ನಡ ನಾಡು-ನುಡಿಗೆ ಬಿಂಬಿಸುವ  ಪಾರ್ಕ್ ಸೇರ್ಪಡೆ ಮತ್ತೊಂದು ಮೈಲಿಗಲ್ಲು ಎಂದು ಆರ್.ಅಶೋಕ್ ಅಭಿಪ್ರಾಯಪಟ್ಟರು.

ವಿಶೇಷ ಅನುದಾನ:

ಏಳು ರಾಜ-ಮಹಾರಾಜರ ಶಿಲ್ಪಕಲೆಗಳನ್ನೊಳಗೊಂಡಿರುವ ಈ ಪಾರ್ಕ್ ಬಿಬಿಎಂಪಿಗೆ ಮುಕುಟ ಪ್ರಾಯದಂತಿದೆ. ಹೀಗಾಗಿ ನಾವು ಈ ಪಾರ್ಕ್ ಗೆ ವಿಶೇಷ ಅನುದಾನ ನೀಡಿದ್ದೇವೆ. ಇದೇ ರೀತಿಯ ಪಾರ್ಕ್‍ಗಳನ್ನು ಇತರೆಡೆಯೂ ನಿರ್ಮಿಸಲು ಮೇಯರ್ ಮಂಜುನಾಥರೆಡ್ಡಿ ಭರವಸೆ ನೀಡಿದರು.

3.75 ಕೋಟಿ ವೆಚ್ಚ:

ರಣಧೀರ ಕಂಠೀರವ ಉದ್ಯಾನವನಕ್ಕೆ 6.15 ಎಕರೆ ಪ್ರದೇಶ ರೇವಜೀತು ಹಗರಣಕ್ಕೆ ಸಿಲುಕಿತ್ತು. ಸತತ 16 ವರ್ಷಗಳ ಕಾನೂನು ಹೋರಾಟದ ನಂತರ ಈ ಜಾಗವನ್ನು ಬಿಬಿಎಂಪಿ ವಶಕ್ಕೆ ಪಡೆದಿದ್ದು, ಇಂತಹ ಪ್ರದೇಶ ಚಿರಸ್ಥಾಯಿಯಾಗಿರಬೇಕೆಂಬ ಉದ್ದೇಶದಿಂದ 3.75ಕೋಟಿ  ರೂ. ವೆಚ್ಚ ಮಾಡಿ ಕನ್ನಡ ನಾಡಿನ ಸಪ್ತ ರಾಜ ಮಹಾರಾಜರ ಇತಿಹಾಸ ಹಾಗೂ ಶಿಲ್ಪಕಲೆಯನ್ನು ಇಲ್ಲಿ ನಿರ್ಮಾಣ ಮಾಡಿದ್ದೇವೆ ಎಂದು ಪಾರ್ಕ್ ನಿರ್ಮಾಣದ ರೂವಾರಿ ಎನ್.ಆರ್.ರಮೇಶ್ ತಿಳಿಸಿದರು.

Facebook Comments

Sri Raghav

Admin