ರಣರಂಗ ಸೃಷ್ಟಿಸಿದ್ದ ಮಹಿಳಾ ಮಣಿಗಳು ಇಂದು ಫುಲ್ ಸೈಲೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

BBMP--Women--01

ಬೆಂಗಳೂರು, ಜು.31- ಕಳೆದ ಎರಡು ಪಾಲಿಕೆ ಸಭೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಸಿಡಿದೆದ್ದು, ಸಭೆಯನ್ನೇ ತಪ್ಪಿಸಿ ಫೆನಾಯಿಲ್ ಕುಡಿದು ಆತ್ಮಹತ್ಯೆ ಪ್ರಹಸನ ನಡೆಸಿದ್ದ ಮೂವರು ಮಹಿಳಾ ಸದಸ್ಯರು ಇಂದಿನ ಸಭೆಯಲ್ಲಿ ತಣ್ಣಗಾಗಿದ್ದರು. ಎಚ್‍ಎಂಟಿ ವಾರ್ಡ್‍ನ ಆಶಾಸುರೇಶ್, ಜೆ.ಪಿ. ಪಾರ್ಕ್ ವಾರ್ಡ್‍ನ ಮಮತಾ ವಾಸುದೇವ್, ಲಗ್ಗೆರೆ ವಾರ್ಡ್‍ನ ಮಂಜುಳಾ ನಾರಾಯಣಸ್ವಾಮಿ ಅವರು ಗಳು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಅವರು ತಮಗೆ ಕೆಲಸ ಮಾಡಲು ಬಿಡುತ್ತಿಲ್ಲ.

ಇಲ್ಲಸಲ್ಲದ ಕಿರುಕುಳ ನೀಡುತ್ತಾರೆ. ಅಧಿಕಾರಿಗಳು ಶಾಸಕರ ಕೈಗೊಂಬೆ ಯಾಗಿದ್ದಾರೆ. ತಮಗೆ ನ್ಯಾಯಬೇಕು ಎಂದು ಆಗ್ರಹಿಸಿ ಕಳೆದ ಎರಡು ಸಭೆಗಳಲ್ಲೂ ರಣರಂಗವನ್ನೇ ಸೃಷ್ಟಿಸಿದ್ದರು. ಕಳೆದ ಪಾಲಿಕೆ ಸಭೆಯಲ್ಲಿ ಈ ಮೂವರು ಸದಸ್ಯರು ತಮಗೆ ನ್ಯಾಯ ದೊರೆಯವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಲ್ಲದೆ, ಫೆನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಕೂಡ ಸೃಷ್ಟಿಸಿದ್ದರು. ತಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕದೆ ಇದ್ದರೆ ಹೋರಾಟ ಮುಂದುವರೆಸುವುದಾಗಿ ಬೆದರಿಸಿದ್ದರು.

ಇವರ ಆರೋಪ ಕುರಿತು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸಂಧಾನ ಸಭೆ ನಡೆಸಿದ್ದರೂ ಕೂಡ ಏನೂ ಪ್ರಯೋಜನವಾಗಿರಲಿಲ್ಲ. ಶಾಸಕ ಮುನಿರತ್ನ ಮತ್ತು ಈ ಮೂವರು ಮಹಿಳಾ ಸದಸ್ಯರ ನಡುವಿನ ಸಮಸ್ಯೆ ಬಗೆಹರಿಸಲು ಜಾರ್ಜ್ ಕೂಡ ಅಸಹಾಯಕರಾದರು. ಹಾಗಾಗಿ ಇಂದಿನ ಸಭೆಯಲ್ಲೂ ಕೂಡ ಈ ಮೂವರು ಮಹಿಳೆಯರು ರಣರಂಗವನ್ನೇ ಸೃಷ್ಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರು ಯಾವುದೇ ಸಮಸ್ಯೆಯನ್ನೇ ಪ್ರಸ್ತಾಪಿಸದೆ ಸೈಲೆಂಟ್ ಆಗಿ ಇದ್ದರು. ಇದು ಸ್ವತಃ ಬಿಬಿಎಂಪಿ ಸದಸ್ಯರಿಗೆ ಅಚ್ಚರಿ ತಂದಿತ್ತು. ಈ ಮೂವರು ಏಕಾಏಕಿ ಹೋರಾಟವನ್ನು ಏಕೆ ಮೊಟಕುಗೊಳಿಸಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin