ರಣವೀರ್‍ಗೆ ಟಾಂಗ್ ನೀಡಿದ ಶಾಹಿದ್ ಕಪೂರ್ ..!

ಈ ಸುದ್ದಿಯನ್ನು ಶೇರ್ ಮಾಡಿ

Deepikaದೀಪೀಕಾ ಪಡುಕೋಟೆ ಅಭಿಯನದ ಬಹುಕೋಟಿ ರೂ. ವೆಚ್ಚ ಅದ್ದೂರಿ  ಐತಿಹಾಸಿಕ  ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ ಕೆರಳಿಸಿದೆ. ಇದೇ ವೇಳೆ ಈ ಚಿತ್ರದ ಇಬ್ಬರು ಪ್ರಮುಖ ಪಾತ್ರಧಾರಿ ನಟರುಗಳಾದ ಶಾಹೀದ್ ಕಪೂರ್ ಮತ್ತು ರಣವೀರ್ ಸಿಂಗ್ ಸಂಬಂಧವೂ ಹಳಿಸಿದೆ. ಈ ವೈಷಮ್ಯದ ಬೆಂಕಿಗೆ ತುಪ್ಪ ಸುರಿಯುವಂತ ಹೇಳಿಕೆಯೊಂದನ್ನು ಕಪೂರ್ ನೀಡಿ ಸಿಂಗ್‍ನನ್ನು ಕೆರಳಿಸಿದ್ದಾರೆ. ಪದ್ಮಾವತಿ ಇಬ್ಬರು ನಾಯಕರ ನಟರ ಸಿನಿಮಾ ಅಲ್ಲ. ಇದರಲ್ಲಿ ಇಬ್ಬರಿಗೂ ಸರಿಸಮಾನವಾದ ಪಾತ್ರ ಇದೆ ಎಂಬ ವರದಿಗಳು ಸಹ ಸುಳ್ಳು ಎಂದು ಹೇಳುವ ಮೂಲಕ ರಣವೀರ್ ಸಿಂಗ್‍ಗೆ ಶಾಹೀದ್ ಕಪೂರ್ ಟಾಂಗ್ ನೀಡಿದ್ದಾನೆ.

ಇದು ರಾಣಿ ಪದ್ಮಾವತಿ ಕುರಿತ ಚಿತ್ರ. ಇದು ಮಹಿಳಾ ಪ್ರಧಾನ ಪಾತ್ರವೇ ಹೊರತು. ಪುರುಷ ಪ್ರಾತಿನಿಧ್ಯದ ಪಾತ್ರ ಇದರಲ್ಲಿ ಇಲ್ಲ. ಅಲ್ಲದೆ ಇದು ಇಬ್ಬರು ಹಿರೋಗಳ ಸಿನಿಮಾವಂತೂ ಅಲ್ಲವೇ ಅಲ್ಲ ಎಂದು ಸಿಂಗ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾನೆ. ಶಾಹೀದ್‍ಗೆ ಅವಕಾಶ ನೀಡುವ ಏಕೈಕ ಉದ್ದಶದಿಂದ ತನಗಿದ್ದ ಮುಖ್ಯಪಾತ್ರವನ್ನು ಬದಲಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಸಿಂಗ್‍ಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಿನಿಮಾಗೆ ಮುನ್ನವೇ ಇವರಿಬ್ಬರು ಉತ್ತರ ದಕ್ಷಿಣ ದಕ್ಕಿಲ್ಲಿರುವ ಬಗ್ಗೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆಕೆಡಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin