ರಣೋತ್ಸಾಹದಲ್ಲಿರುವ ಉತ್ತರ ಕೊರಿಯಾದಿಂದ ಸೇನಾ ಸಾಮರ್ಥ್ಯ ಪ್ರದರ್ಶನ : ಅಮೆರಿಕಕ್ಕೆ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Amerika--012

ಪಯೊಂಗ್‍ಯಾಂಗ್, ಏ.15-ಅಮೆರಿಕದಿಂದ ಯಾವುದೇ ರೀತಿಯ ಅಣ್ವಸ್ತ್ರ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಲು ಸಿದ್ಧ ಎಂದು ಈಗಾಗಲೇ ಹಿರಿಯಣ್ಣನ ವಿರುದ್ಧ ತೊಡೆ ತಟ್ಟಿ ನಿಂತಿರುವ ಉತ್ತರ ಕೊರಿಯಾ ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಯುದ್ಧದ ಕಾರ್ಮೋಡಗಳು ದಟ್ಟವಾಗುತ್ತಿರುವ ಸನ್ನಿವೇಶದಲ್ಲೇ ಅಗಾಧ ಸೇನೆ ಬಲ ಪ್ರದರ್ಶಿಸುವ ಸೇನಾ ಕವಾಯಿತು ವೀಕ್ಷಿಸಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಾಷಿಂಗ್ಟನ್‍ಗೆ ಸಮರಕ್ಕೆ ಸರ್ವ ಸನ್ನದ್ಧ ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಅಮೆರಿಕದ ಯಾವುದೇ ದಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸಲು ತಾನು ಸಮರ್ಥವಾಗಿರುವುದಾಗಿ ಉತ್ತರ ಕೊರಿಯಾ ಘೋಷಿಸಿದ್ದ ಬೆನ್ನಲ್ಲೆ ದೇಶದ ಅಧ್ಯಕ್ಷರ ಬಲಗೈ ಬಂಟ ಮತ್ತು ದೇಶದ ಎರಡನೇ ಉನ್ನತಾಧಿಕಾರಿ ಚೋಯಿ ರೈಯೊಂಗ್ ಹಾಯಿ ಈ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.  ಯಾವುದೇ ದೇಶದ ಯಾವುದೇ ರೀತಿಯ ಅಣ್ವಸ್ತ್ರ ಆಕ್ರಮಣಗಳನ್ನು ನಮ್ಮದೇ ಶೈಲಿಯಲ್ಲಿ ಎದುರಿಸಲು ಮತ್ತು ಪ್ರತಿರೋಧ ವ್ಯಕ್ತಪಡಿಸಿಸಲು ನಾವು ಪರಿಪೂರ್ಣ ಸಿದ್ದರಿದ್ದೇವೆ ಎಂದು ಮಹಾ ಶಕ್ತಿಶಾಲಿ ರಾಷ್ಟ್ರ ಅಮೆರಿಕಕ್ಕೆ ಸವಾಲು ಹಾಕಿದ್ದಾರೆ.

ಇದೇ ವೇಳೆ ರಾಜಧಾನಿ ಪಯೊಂಗ್‍ಯಾಂಗ್‍ನಲ್ಲಿ ಅಧ್ಯಕ್ಷ ಕಿಮ್ ಇಂದು ತಮ್ಮ ದೇಶದ ಸೇನಾ ಸಾಮಥ್ರ್ಯವನ್ನು ಜಗತ್ತಿಗೆ ತಿಳಿಸುವ ಉದ್ದೇಶದ ಮಿಲಿಟರಿ ಪೆರೇಡ್ ವೀಕ್ಷಿಸಿ ಗೌರವ ರಕ್ಷೆ ಸ್ವೀಕರಿಸಿದರು.  ಈ ಸೇನಾ ಕವಾಯಿತು ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ವಿನಾಶಕಾರಿ ಜಲಾಂತರ್ಗಾಮಿ ಕ್ಷಿಪಣಿಗಳು ಕಾಣಿಸಿಕೊಂಡವು. ಅಲ್ಲದೇ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲೇ ಇಲ್ಲದ ನವೀನ ಶಸ್ತ್ರಾಸ್ತ್ರಗಳು ಪಥಸಂಚಲನದಲ್ಲಿ ಅನಾವರಣಗೊಂಡಿವೆ.   ಕಲಹಪ್ರಿಯ ರಾಷ್ಟ್ರವೆಂದೇ ಕುಖ್ಯಾತಿ ಪಡೆದಿರುವ ಉತ್ತರ ಕೊರಿಯಾ ವಿಶ್ವದ ದೊಡ್ಡಣ್ಣನಿಗೆ ನಿರ್ಭೀತ ಎಚ್ಚರಿಕೆ ನೀಡಿ ರಣೋತ್ಸಾಹದಲ್ಲಿರುವುದರಿಂದ ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಆತಂಕ ಸೃಷ್ಟಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin