ರನ್‍ವೇನಲ್ಲಿ ಮುಗ್ಗರಿಸಿದ ವಿಮಾನ : ತಪ್ಪಿದ ಭಾರೀ ದುರಂತ, 15 ಪ್ರಯಾಣಿಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Plane-01 ಪಣಜಿ, ಡಿ.27-ವಿಮಾನವೊಂದು ರನ್‍ವೇನಲ್ಲಿ ದಿಕ್ಕು ಬದಲಿಸಿ ಮುಗ್ಗರಿಸಿ ಪರಿಣಾಮ 15 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಗೋವಾದ ಡಾಬೊಲಿಮ್ ವಿಮಾನನಿಲ್ದಾಣದಲ್ಲಿ ಸಂಭವಿಸಿದೆ.   ಏಳು ಸಿಬ್ಬಂದಿ ಸೇರಿದಂತೆ 161 ಪ್ರಯಾಣಿಕರಿದ್ದ ಜೆಟ್ ಏರ್‍ವೇರ್ ವಿಮಾನ ಮುಂಬೈಗೆ ತೆರಳಲು ಇಂದು ಬೆಳಗ್ಗೆ ರನ್‍ವೇನಲ್ಲಿ ಮೇಲೇರುತ್ತಿದ್ದಾಗ ಚಾಲಕನ ನಿಯಂತ್ರಣದ ತಪ್ಪಿ ದಿಕ್ಕು ಬದಲಿಸಿ ಮುಗ್ಗರಿಸಿತು. ಪ್ರಯಾಣಿಕರನ್ನು ಕೆಳಗಿಳಿಸುವ ವೇಳೆ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದುಬೈನಿಂದ ಬಂದ 9ಡಬ್ಲ್ಯು 2374 ವಿಮಾನ ಮುಂಬೈಗೆ ತೆರಳಬೇಕಿತ್ತು. ಈ ಹಂತದಲ್ಲಿ ದುರ್ಘಟನೆ ಸಂಭವಿಸಿತು. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಎಂದು ಪ್ತತ್ಯಕ್ಷದರ್ಶಿಗಳು ಹೇಳಿದ್ದಾರೆ.

Plane-02

ಗಾಯಾಳುಗಳಿಗೆ ಜೆಟ್ ಏರ್‍ವೇಸ್ ಮತ್ತು ವಿಮಾನ ಪ್ರಾಧಿಕಾರ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ ಎಂದು ಏರ್‍ಲೈನ್ಸ್ ಸಂಸ್ಥೆ ಹೇಳಿಕೆ ನೀಡಿದೆ,  ಮಧ್ಯಾಹ್ನ 12.30ರವರೆಗೆ ಇತರ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿ ಏರ್‍ಪೋರ್ಟ್‍ನನ್ನು ಬಂದ್ ಮಾಡಲಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin