ರಮೇಶ್‍ಕುಮಾರ್ ವರದಿ ಜಾರಿಗೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ee-sanje

ಚನ್ನಪಟ್ಟಣ, ಆ.10-ರಾಜ್ಯ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಸಂಘದ ಅಧ್ಯಕ್ಷರಾಗಿ ಸ್ಥಳೀಯ ಜಿಪಂ ಅಧ್ಯಕ್ಷ ಸಿ.ಪಿ.ರಾಜೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮೈಸೂರಿನಲ್ಲಿ ನಡೆದ ಜಿಪಂ ಅಧ್ಯಕ್ಷರ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ 30 ಜಿಲ್ಲೆಗಳ ಜಿಪಂ ಅಧ್ಯಕ್ಷರ ಸಭೆಯಲ್ಲಿ ರಾಜೇಶ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಜೇಶ್, ಜಿಪಂ ಅಧ್ಯಕ್ಷರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವ ಸಲುವಾಗಿ ರಮೇಶ್‍ಕುಮಾರ್ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಪಂ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನದ ಜತೆಗೆ ಅಧ್ಯಕ್ಷರ ಅಧಿಕಾರಾವಧಿ ಐದು ವರ್ಷ ಎಂದು ಹೇಳಲಾಗಿದ್ದರೂ, ಈವರೆಗೆ ಸರ್ಕಾರ 3 ಬಾರಿ ಅಧಿಸೂಚನೆ ಮಾರ್ಪಾಡು ಮಾಡಿದೆ.ಅಧ್ಯಕ್ಷರುಗಳಾಗಿ ಮೂರು ತಿಂಗಳಾದರೂ ನಮಗೆ ಡಿಸೇಲ್ ಭತ್ಯೆ ಹೊರತುಪಡಿಸಿ ಬೇರ್ಯಾವುದೇ ಸವಲತ್ತು ದೊರೆತಿಲ್ಲ ಎಂದು ದೂರಿದರು.
ಗನ್ ಮ್ಯಾನ್ ಕೊಡಿ: ರಾಜ್ಯದ 30 ಜಿಪಂ ಅಧ್ಯಕ್ಷರುಗಳ ಪೈಕಿ 18 ಮಂದಿ ಮಹಿಳಾ ಅಧ್ಯಕ್ಷರುಗಳೇ ಇದ್ದಾರೆ.

 

ಹೀಗಾಗಿ ಮಹಿಳೆಯರ ಸುರಕ್ಷತೆ ದೃಷ್ಠಿಯಿಂದ ಹಾಗೂ ಮಲೆನಾಡು ಭಾಗದಲ್ಲಿ ಕೋಲಾರ ಜಿಲ್ಲೆಯ ಆಂಧ್ರಗಡಿಯಲ್ಲಿ ನಕ್ಸಲರ ಹಾವಳಿ ಇರುವುದರಿಂದ ಪ್ರವಾಸ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಅಧ್ಯಕ್ಷರುಗಳಿಗೆ ಗನ್‍ಮ್ಯಾನ್ ನೀಡಬೇಕು ಎಂದು ಹೇಳಿದರು.ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಪಿ.ರಾಜೇಶ್‍ರವರನ್ನು ಅಭಿನಂದಿಸಲಾಯಿತು. ಜಿಪಂ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಗಂಗಾಧರ್, ಜಿಪಂ ಸದಸ್ಯರಾದ ಪ್ರಸನ್ನಕುಮಾರ್, ವೀಣಾಕುಮಾರಿ, ಸುಗುಣ ತಿಮ್ಮಪ್ಪರಾಜು, ಹರೂರು ರಾಜಣ್ಣ ಅಭಿನಂದಿಸಿದ್ದಾರೆ.

Facebook Comments

Sri Raghav

Admin