ರಮ್ಯಾ ಪರ ನಿಂತ ಆಸ್ಕರ್ ಫರ್ನಾಂಡೀಸ್

ಈ ಸುದ್ದಿಯನ್ನು ಶೇರ್ ಮಾಡಿ

FERNANDIS
ಬೆಂಗಳೂರು, ಆ.27- ಮಂಗಳೂರನ್ನು ನರಕ ಎಂದು ಮಾಜಿ ಸಂಸದೆ ರಮ್ಯಾ ನೀಡಿರುವ ಹೇಳಿಕೆಯನ್ನು ನಾನು ಕೇಳಿಲ್ಲ. ಆದರೆ, ಮಂಗಳೂರು ಜನ ಒಳ್ಳೆಯವರು. ಅದು ಸ್ವರ್ಗ ಎಂದು ಹೇಳಿರುವುದನ್ನು ಗಮನಿಸಿದ್ದೇನೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್ ರಮ್ಯಾ ಪರ ಬ್ಯಾಟ್ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಜನ ಒಳ್ಳೆಯವರು. ನಮ್ಮ ಪಾಲಿಗೆ ಅದು ಸ್ವರ್ಗ. ಆದರೆ, ಇತ್ತೀಚೆಗೆ ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಬೇಕೋ ಗೊತ್ತಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮಂಗಳೂರು ಜನ ಸಾಮರಸ್ಯದಿಂದ ಬದುಕಿದವರು. ಇತ್ತೀಚೆಗೆ ಹರೀಶ್‌ಪೂಜಾರಿ ಮತ್ತು ಪ್ರವೀಣ್‌ಪೂಜಾರಿ ಎಂಬುವರ ಹತ್ಯೆಗಳಾಗಿವೆ. ಇದಕ್ಕೆ ಏನು ಉತ್ತರ ಕೊಡಬೇಕೋ ಗೊತ್ತಾಗುತ್ತಿಲ್ಲ ಎಂದರು.  ಇದೇ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಸಚಿವ ರಮಾನಾಥರೈ ಅವರು, ಮನುಷ್ಯರನ್ನು ಪ್ರೀತಿಸದವರು ದೇವರನ್ನು ಪ್ರೀತಿಸುವುದಿಲ್ಲ. ಗೋರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಮಂಗಳೂರು ನರಕ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ರಮ್ಯಾ ಅವರು ಆ ರೀತಿ ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.
ಕರಾವಳಿ ಜಿಲ್ಲೆಗಳಲ್ಲಿ ಇಬ್ಬರು ಅಮಾಯಕರನ್ನು ಗೋರಕ್ಷಣೆ ಹೆಸರಿನಲ್ಲಿ ಹೊಡೆದು ಸಾಯಿಸಲಾಗಿದೆ. ಇದು ಸಾಮಾಜಿಕ ಬದಕಿನಲ್ಲಿರುವ ನನಗೆ ತೀವ್ರ ನೋವು ತಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin