ರವಿಚಂದ್ರನ್ ಅಶ್ವಿನ್ ಮೇಲೆ ಹೆಚ್ಚಿನ ಒತ್ತಡ ಹೇರುವುದು ಸರಿಯಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Sourav-Ganguly

ರಾಜ್‍ಕೋಟ್, ನ.11- ಟೀಂ ಇಂಡಿಯಾದ ಅದ್ಭುತ ಸ್ಪಿನ್ನರ್ ಎಂದೇ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಮೇಲೆ ಹೆಚ್ಚಿನ ಒತ್ತಡ ಹೇರುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗ ಸೌರವ್‍ಗಂಗೂಲಿ ಅವರು ತಿಳಿಸಿದ್ದಾರೆ.ಇತ್ತೀಚೆಗೆ ನಡೆದ ಎಲ್ಲಾ ಸರಣಿಗಳಲ್ಲೂ ಅಶ್ವಿನ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ.ಆದರೆ ಎಲ್ಲಾ ಪಂದ್ಯಗಳಲ್ಲೂ ರವಿಚಂದ್ರನ್ ಅಶ್ವಿನ್ 5 ವಿಕೆಟ್‍ಗಳನ್ನು ಪಡೆಯಲು ಸಾಧ್ಯವಿಲ್ಲ ಹಾಗೂ ಎದುರಾಳಿ ಬ್ಯಾಟ್ಸ್‍ಮನ್‍ಗಳ ಮೇಲೆ ಕಡಿವಾಣ ಹಾಕಲು ಸಾಧ್ಯವಿಲ್ಲ.

ದಕ್ಷಿಣ ಆಫ್ರಿಕಾ, ನ್ಯೂಜಿ ಲೆಂಡ್, ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ಅಶ್ವಿನ್ ತಮ್ಮ ಬೌಲಿಂಗ್ ಚಮತ್ಕಾರ ದಿಂದ ಭಾರತ ತಂಡವು ಸರಣಿ ಗೆಲುವು ಸಾಧಿಸುವಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಆದರೆ ರಾಜ್‍ಕೋಟ್ ಪಿಚ್ ವೇಗಿಗಳಿಗೆ ಹೆಚ್ಚು ಅನುಕೂಲವಾಗಿದೆ ಆದ್ದರಿಂದ ಈ ಪಂದ್ಯದಲ್ಲಿ ಅವರು 167 ರನ್‍ಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಕೂಡ ಗಂಗೂಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ವೇಗಿಗಳಿಗೆ ಅನುಕೂಲವಾಗುವ ಪಿಚ್‍ಗಳಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರಾಜಾಡೇಜಾರಂತಹ ಸ್ಪಿನ್ನರ್‍ಗಳ ಮೇಲೆ ಹೆಚ್ಚು ಒತ್ತಡ ತರದೆ ಉಮೇಶ್‍ಯಾದವ್, ಮೊಹಮ್ಮದ್ ಶಮಿರಂತಹ ಅದ್ಭುತ ವೇಗಿಗಳು ಕೂಡ ಎದುರಾಳಿ ಬ್ಯಾಟ್ಸ್‍ಮನ್‍ಗಳಿಗೆ ಕಡಿವಾಣ ಹಾಕಬೇಕು ಎಂದರು.ರಾಜ್‍ಕೋಟ್ ಪಿಚ್‍ನಲ್ಲಿ ಮೂವರು ಸ್ಪಿನ್ನರ್‍ಗಳನ್ನು ಕಣಕ್ಕಿಳಿಸುವ ಬದಲು ಉಮೇಶ್‍ಯಾದವ್, ಇಶಾಂತ್‍ಶರ್ಮ ಹಾಗೂ ಮೊಹಮದ್ ಶಮಿಯನ್ನು ಬಳಸಿಕೊಳ್ಳಬಹುದಾಗಿತ್ತು ಎಂದು ಗಂಗೂಲಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin