ರವಿಶಂಕರ್ ಗುರೂಜಿಗೆ ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Ravishankar-Guruji--01
ಲಾಸ್ ಎಂಜಿಲಿಸ್,ಏ.19- ಇಂದಿನ ಯಾಂತ್ರಿಕೃತ ಜಂಜಾಟದಲ್ಲಿ ಒತ್ತಡದ ಜೀವನ ನಡೆಸುತ್ತಿರುವ ಜನರ ನಡುವ ಸಹನೆ ಮೂಡಿಸಲು ಶ್ರಮಿಸುತ್ತಿರುವ ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿ ಶಂಕರ್ ಗುರೂಜಿ ಅವರಿಗೆ ಸೈಮನ್ ವೀಸೆನ್ತಾಲ್ ಕೇಂದ್ರ ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿ ನೀಡಿ ಗೌರವಿಸಿದೆ.
ಲಾಸ್ ಎಂಜಿಲಿಸ್‍ನ ಮ್ಯೂಸಿಯಂ ಆಫ್ ಟಾಲರೆನ್ಸ್ನಲ್ಲಿ ನೀಡಲಾಯಿತು. ಈ ಕೇಂದ್ರದ ಪ್ರಶಸ್ತಿಯನ್ನು ಹಿಂದೆ ಕೆನಡಾದ ಮಾಜಿ ಪ್ರಧಾನಿ ಸ್ಟೀಫೆನ್ ಹಾರ್ಪರ್ ಮತ್ತು ಟಾಮ್ ಕ್ರೂಸ್ ರವರಿಗೂ ನೀಡಲಾಯಿತು. ಗುರೂಜಿ ಅವರು, ಜನರ ನಡುವಿನ ಸಹನೆಯನ್ನು ಹೆಚ್ಚಿಸಲು ಗುರುದೇವರು ಶ್ರಮಿಸಿದ ಕಾರಣದಿಂದಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ನ ಅಸೊಸಿಯೇಟ್ ಡೀನ್ ಆದ ಅಬ್ರಹಾಂ ಮಾತನಾಡಿ, ಶ್ರೀ ರವಿಶಂಕರರು ಕೇವಲ ಸ್ನೇಹಿತರಲ್ಲದೆ, ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಮತ್ತು ಸಹನೆಯನ್ನು ಹರಡುವಲ್ಲಿ ನಮ್ಮ ಸಹಭಾಗಿಯಾಗಿದ್ದಾರೆ ಎಂದು ಗುರುದೇವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.
ಈ ಸಮಾರಂಭದಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ಸಃಸದರು, ನಗರಪೌರರು, ಕ್ಯಾಲಿಫೋರ್ನಿಯಾದ 28 ನಗರಗಳ ಕೌನ್ಸಿಲ್ ಸದಸ್ಯರು, ಜಪಾನ್, ಸ್ವೀಡೆನ್, ಮ್ಯಾನ್ಮಾರ್, ಬ್ರೆಜಿಲ್, ಮೆಕ್ಸಿಕೊ, ಜರ್ಮನಿ, ನೆಧಲ್ರ್ಯಾಂಡ್ಸ್, ಸ್ವಿಟ್ಜರ್ಲೆಂಡ್, ಅಜರ್ಬೈಜಾನ್, ಇಟಲಿ, ಜೆಕ್ ರಿಪಬ್ಲಿಕ್ ಮತ್ತು ತುರ್ಕಿಯ ರಾಯಭಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin