ರವಿಶಂಕರ್ ಗುರೂಜಿಯವರನ್ನು ಭೇಟಿಮಾಡಿದ ಭಯೋತ್ಫಾದಕನ ತಂದೆ

ಈ ಸುದ್ದಿಯನ್ನು ಶೇರ್ ಮಾಡಿ

Ravishankar-guruji

ಬೆಂಗಳೂರು, ಆ.28-ಕಾಶ್ಮೀರದಲ್ಲಿ ಸೇನಾಪಡೆ ಗುಂಡಿಗೆ ಬಲಿಯಾಗಿ ಕಣಿವೆಯಲ್ಲಿ ವ್ಯಾಪಕ ಹಿಂಸಾಚಾರ ಮತ್ತು ಪ್ರಕ್ಷುಬ್ಧ ಪರಿಸ್ಥಿತಿಯ ಕಿಚ್ಚು ಹೊತ್ತಿಸಿದ್ದ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಫಾದಕ ಬರ್ಹರ್ ವನಿಯ ತಂದೆ ಮುಜಫರ್ ವನಿ ನಿನ್ನೆ ಉದ್ಯಾನನಗರಿಯಲ್ಲಿ ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್ ಅವರನ್ನು ಭೇಟಿ ಮಾಡಿದ್ದಾರೆ. ಇದೊಂದು ಮಾನವೀಯತೆ ಭೇಟಿ ಎಂದು ಬಣ್ಣಿಸಲಾಗಿದೆ.   ಬೆಂಗಳೂರಿನ ಆರ್ಟ್ಸ್ ಆಫ್ ಲೀವಿಂಗ್ ಆಶ್ರಮದಲ್ಲಿ ಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ ಬುರ್ಹನ್ ವನಿಯ ತಂದೆ ಮುಜಫರ್ ವನಿ ಇರುವ ಫೋಟೋವನ್ನು ನಿನ್ನೆ ಸಂಜೆ ಟ್ವೀಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ಬುರ್ಹನ್ ವನಿಯ ತಂದೆ ಮುಜಫರ್ ವನಿ ಕಳೆದ ಎರಡು ದಿನಗಳಿಂದ ನಮ್ಮ ಆಶ್ರಮದಲ್ಲೇ ಇದ್ದಾರೆ. ನಾವು ಹಲವು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ ಎಂದು ಶ್ರೀ ರವಿಶಂಕರ್ ಅವರು ಈ ಫೋಟೊಗೆ ಶೀರ್ಷಿಕೆ ಬರೆದಿದ್ದಾರೆ.

ಈ ಫೋಟೊ ಮತ್ತು ಶೀರ್ಷಿಕೆಯನ್ನು ಆಶ್ರಮ ಇನ್ನೊಮ್ಮೆ ಟ್ವೀಟ್ ಮಾಡಿದೆ. ಮುಜಫರ್ ವನಿ ಆಶ್ರಯದಲ್ಲಿ ಎರಡು ದಿನಗಳಿಂದ ಇದ್ದಾರೆ. ಶ್ರೀಗಳು ಮತ್ತು ವನಿ ಕಾಶ್ಮೀರದಲ್ಲಿ ತಲೆದೋರಿರುವ ಪ್ರಸ್ತುತ ಸನ್ನಿವೇಶ, ಜನರ ನೋವು ಹಾಗೂ ಅಲ್ಲಿ ಶಾಂತಿ ಮತ್ತು ಸಹಜ ಸ್ಥಿತಿ ನೆಲೆಸಲು ಏನು ಮಾಡಬೇಕು ಎಂಬ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದು ಸಂಪೂರ್ಣ ವೈಯಕ್ತಿಕ ಮತ್ತು ಮಾನವೀಯತೆಯ ದೃಷ್ಟಿಕೋನದ್ದು ಎಂದು ಆರ್ಟ್ ಆಫ್ ಲೀವಿಂಗ್ ಹೇಳಿದೆ.  ನಾನು ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದೇವೆ. ಕೆಲವು ಕಾಯಿಲೆಗಳ ಉಪಶಮನಕ್ಕಾಗಿ ಎರಡು ದಿನಗಳಿಂದ ಇಲ್ಲಿದ್ದೇನೆ ಎಂದು ಮುಜಫರ್ ವನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin