ರವಿ ಗರಣಿಯಿಂದ ಹೊಸ ‘ಬ್ರಹ್ಮಾಸ್ತ್ರ’

ಈ ಸುದ್ದಿಯನ್ನು ಶೇರ್ ಮಾಡಿ

bramastra-1

ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿಯ ಮಧ್ಯೆ ನಡೆಯುವ ಹೊಸ ಪ್ರೇಮಕಥೆ ಬ್ರಹ್ಮಾಸ್ತ್ರ ಉದಯ ವಾಹಿನಿಯಲ್ಲಿ ಭರ್ಜರಿಯಾಗಿ ಪ್ರದರ್ಶನ ವಾಗುತ್ತಿದೆ. ಪ್ರತಿ ದಿನ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಬಿತ್ತರಗೊಳ್ಳುತ್ತಿರುವ ಈ ಧಾರಾವಾಹಿಯನ್ನು ಪ್ರಸಿದ್ಧ ನಿರ್ಮಾಪಕ, ನಿರ್ದೇಶಕರಾದ ರವಿ ಆರ್.ಗರಣಿ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಕಥಾ ನಾಯಕಿ ತೆಲುಗು ಹುಡುಗಿ ಶಿವರಂಜನಿ ಮನೆಯವರು ಪ್ರೀತಿಯ ಬದ್ಧ ವೈರಿಗಳಾಗಿದ್ದೂ, ಪ್ರೀತಿಸುವ ಪ್ರೇಮಿಗಳಿಗೆ ಬ್ರಹ್ಮಾಸ್ತ್ರವನ್ನು ಹೂಡುವ ಕಟುಕರಂತಿರುತ್ತಾರೆ.

ಆದರೆ ನಾಯಕ ಕನ್ನಡದ ಹುಡುಗ ಸಂತೋಷನ ಮನೆಯವರು ಪ್ರೀತಿಯಿಂದಲೇ ಎಲ್ಲರ ಮನಗೆಲ್ಲುವ ಗುಣದವರಾಗಿದ್ದೂ, ಪ್ರೀತಿಸುವ ಪ್ರೇಮಿಗಳಿಗೆ ಆಶ್ರಯ ನೀಡುವವರಾಗಿರುತ್ತಾರೆ. ಇಂತಹ 2 ರೀತಿಯ ವೈಮನಸ್ಸುಗಳ ನಡುವೆ ನಾಯಕ ನಾಯಕಿಯ ಪ್ರೀತಿಯ ರೋಚಕ ಕಥೆ ನಡೆಯುತ್ತದೆ ಎನ್ನುತ್ತಾರೆ ನಿರ್ದೇಶಕರು. ಪ್ರಮೋದ್, ದೀಪಾ ಹಿರೇಮಠ್ ಮುಖ್ಯ ಪಾತ್ರದಲ್ಲಿದ್ದರೆ. ತ್ರಿವೇಣಿ, ಶೈಲಶ್ರೀ, ಶಂಕರ್ ಅಶ್ವಥ್, ಸುದರ್ಶನ್, ಅಶೋಕ್ ಹೆಗ್ಗಡೆ, ವಿಜಯ್ ಕೌಂಡಿಣ್ಯ, ಮೈಸೂರು ಹರಿ, ಸಿದ್ದೇಶ್ವರ್, ರಶ್ಮಿತಾ, ಪಲ್ಲವಿ, ಪವನ್, ರಜನಿಕಾಂತ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಗರಣಿ ಪೆÇ್ರಡಕ್ಷನ್ಸ್ ವತಿಯಿಂದ ಲತಾ ಆರ್ ಗರಣಿ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಕಿರಣ್ ಅವರ ಛಾಯಾಗ್ರಹಣವಿದ್ದೂ, ತಿಲಕ್ ಆ್ಯಕ್ಷನ್‍ಕಟ್ ಹೇಳುತ್ತಿದ್ದಾರೆ.

Facebook Comments

Sri Raghav

Admin