ರವಿ ಪೂಜಾರಿ ಗ್ಯಾಂಗ್‍ನಿಂದ ಸಲ್ಮಾನ್ ವಕೀಲರಿಗೆ ಪ್ರಾಣ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ravi-Poojari-1

ಮುಂಬೈ,ಏ.6- ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲರಿಗೆ ಅಂಡರ್ ವಲ್ರ್ಡ್ ನಿಂದ ಬೆದರಿಕೆ ಕರೆ ಹಾಗೂ ಸಂದೇಶಗಳು ಬರುತ್ತಿವೆ.   ಸಲ್ಮಾನ್ ಖಾನ್ ಪರ ವಕೀಲ ಮಹೇಶ್ ಬೋರಾ ಅವರಿಗೆ ದುಬೈ ಹಾಗೂ ಆಸ್ಟ್ರೇಲಿಯಾದಿಂದ ಬೆದರಿಕೆ ಕರೆಗಳು ಬರುತ್ತಿವೆ. ಉದ್ದೇಶಪೂರ್ವಕವಾಗಿ ರವಿ ಪೂಜಾರಿ ಗ್ಯಾಂಗ್‍ನವರು ಪ್ರಕರಣವನ್ನು ಕೈ ಬಿಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ. 1998 ರ ಕೃಷ್ಣ ಮೃಗ ಬೇಟೆ ಪ್ರಕರಣ ಸಂಬಂಧ ನಿನ್ನೆ ಸಲ್ಮಾನ್ ಖಾನ್ ಗೆ ಕೋರ್ಟ್ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

Facebook Comments

Sri Raghav

Admin