ರವಿ ಬೆಳೆಗೆರೆ ಕುರಿತು ಅಗ್ನಿಶ್ರೀಧರ್ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Ravi-Beleger--02

ಬೆಂಗಳೂರು, ಡಿ.11- ಕ್ರೈಂ ಸುಳಿಯಲ್ಲಿ ಸಿಕ್ಕಿದ್ರೆ ಹೊರಬರೋದು ಅಷ್ಟು ಸುಲಭ ಅಲ್ಲ. ಆದರೆ, ಇದೀಗ ಆಗಿರುವ ಕಲುಷಿತ ವಾತಾವರಣವನ್ನು ಬಿಟ್ಟು ರವಿಬೆಳಗೆರೆ ಬೇಗ ಹೊರಬರಲಿ ಎಂದು ಪತ್ರಕರ್ತ ಅಗ್ನಿಶ್ರೀಧರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗೆರೆ ಅವರು ಕ್ರೈಂನ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುವುದು ಸರಿಯಲ್ಲ. ಕೆಳಕ್ಕೆ ಬಿದ್ದವರಿಗೆ ಇನ್ನೊಂದು ಕಲ್ಲು ಹಾಕಬಾರದು. ಪರದೆಯ ಬದುಕು ನಮ್ಮದು. ಆದರೆ, ಬೆಳಗೆರೆ ಅವರು ತಮ್ಮ ಮೂಲ ಉದ್ದೇಶವನ್ನೇ ಮರೆತಿದ್ದಾರೆ.

ಎರಡು ವರ್ಷದ ಹಿಂದೆ ಆದ ಒಂದು ಪ್ರಕರಣದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದ. ಮಹಿಳೆಯರ ಬಗ್ಗೆ ಬೆಳಗೆರೆ ಬಳಸುವ ಪದ ಅತ್ಯಂತ ಕೀಳಾದ್ದು, ಇಷ್ಟೆಲ್ಲಾ ಆದ ಮೇಲಾದ್ರೂ ಈಗಲಾದ್ರೂ ಬದಲಾಗಲಿ ಅನ್ನೋದೆ ನನ್ನ ಆಶಯ ಎಂದರು. ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಗೆ ಮಾತಿನ ಮೂಲಕ ಸಮಾಧಾನ ಮಾಡಬಹುದಿತ್ತು. ಆದರೆ, ದೂರವಾಣಿ ಕರೆ ಮಾಡಿ ಮಾತನಾಡಿರುವುದು ಸರಿಯಲ್ಲ. ಬೆಳಗೆರೆ ಭೂಗತ ಲೋಕದಲ್ಲಿ ಮಾಡಿಸಿದ ಕಥೆಗಳು ಹಲವು, ತಲೆ ಓಡಿದಾಗ ಸುನಿಲ್‍ಗೆ ಕೊಲೆ ಮಾಡಲು ಸುಪಾರಿ ನೀಡಿರಬಹುದು. ಕ್ರಿಮಿನಲ್ ಮತ್ತು ಕೆಡಕುಗೆ ಬಹಳ ವ್ಯತ್ಯಾಸವಿದೆ. ಒಮ್ಮೆ ಮಿಸ್ ಆದರೆ ಮತ್ತೆ ಹೊಡಿರಿ ಅನ್ನೋದು ಅವನ ಮಾನಸಿಕ ಸ್ಥಿತಿ ಹೇಗಿದೆ ಅನ್ನೋದನ್ನು ಗಮನಿಸಬಹದು. ಬೆಳಗೆರೆ ಡೆವಿಲ್ ಇದ್ದಹಾಗೆ. ಆದರೆ, ರವಿ ದೆವ್ವಗಳನ್ನು ಹುಡುಕ್ತಾಹೋಗಿದ್ದಾರೆ ಎಂದರು.

ರಸ್ತೆಗಳಲ್ಲಿ ಲಾಂಗ್, ಮಚ್ಚು ಜಳಪಿಸಿದ ಕಥೆಯನ್ನು ಕ್ರೈಂ ಡೈರಿ ಮತ್ತು ಭೀಮಾತೀರದಲ್ಲಿ ರವಿಬೆಳಗೆರೆ ತೋರಿಸ್ತಾ ಇದ್ದ. ಇದೆಲ್ಲಾ ನೋಡಿದ್ರೆ ನಂಗೆ ನಗು ಬರುತ್ತೆ ಎಂದರು. ನಾನು ಪತ್ರಿಕೆ ಆರಂಭಿಸ್ತೀನಿ ಅಂದಾಗ ಬೇಡ ಎಂದು ಕಾಲು ಎಳೆದಿದ್ದರೆಂದು ನೆನಪಿಸಿಕೊಂಡ ಶ್ರೀಧರ್ ಅವರು, ನನ್ನ ಪತ್ರಿಕೆ ವಿರುದ್ಧ ಮಾತನಾಡಿದ್ದ ಬೆಳಗೆರೆ ಪ್ರಗತಿಪರರ ಪಾಂಪ್ಲೆಟ್ ಎಂದಿದ್ದರು ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು. ಸಾಹಿತ್ಯದ ಬಗ್ಗೆ ತಿಳಿದು ಕೊಂಡಿದ್ದು ಒಂದುಕಡೆಯಾದರೆ, ಶಿಸ್ತಿಲ್ಲದ ಜೀವನವನ್ನು ಬೆಳಗೆರೆ ನಡೆಸುತ್ತಿದ್ದರು. ಒಂದೊಂದು ಕ್ಷಣಕ್ಕೂ ಒಂದೊಂದು ಮಾತನಾಡುತ್ತಾರೆ. ಬೆಳಗೆರೆ ಮಾತು ನನಗೆ ಅಸಹ್ಯ ಹುಟ್ಟಿಸುತ್ತದೆ ಎಂದು ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin