ರಷ್ಯಾ-ಅಮೇರಿಕಾ ಮಿತ್ರಪಡೆಗಳ ವಾಯು ದಾಳಿಯಲ್ಲಿ ಮತ್ತೆ 28 ನಾಗರಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Sirstrike

ಬೈರೂತ್, ಸೆ.13-ಇಸ್ಲಾಮಿಕ್ ಸ್ಟೇಟ್ ಉಗ್ರರ ವ್ಯಾಪಕ ಹಿಂಸಾಚಾರದಿಂದ ನಲುಗುತ್ತಿರುವ ಸಿರಿಯಾ ಡೇರ್ ಎಜರ್ ಪ್ರಾಂತ್ಯದಲ್ಲಿ ರಷ್ಯಾ ಹಾಗೂ ಅಮೆರಿಕ ಮಿತ್ರಪಡೆಗಳು ನಿನ್ನೆ ನಡೆಸಿದ ಪ್ರತ್ಯೇಕ ವಾಯುದಾಳಿಗಳಲ್ಲಿ 28 ನಾಗರಿಕರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಸೇನಾಪಡೆಗಳ ದಾಳಿಯಲ್ಲಿ ಮತ್ತೆ ಅಮಾಯಕರು ಸಾವಿಗೀಡಾಗಿದ್ಧಾರೆ ಎಂದು ಆರೋಪಿಸಿದೆ.

ಅಮೆರಿಕ ನೇತೃತ್ವದ ಮಿತ್ರ ಪಡೆ ನಡೆಸಿದ ವಾಯು ದಾಳಿಯಲ್ಲಿ ಐವರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 12 ಸದಸ್ಯರು ಮೃತಪಟ್ಟಿದ್ದಾರೆ ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರೆಹಮಾನ್ ಹೇಳಿದ್ದಾರೆ. ಐಎಸ್ ಉಗ್ರರ ವಿರುದ್ಧ ಸಿರಿಯಾ ಸರ್ಕಾರ ನಡೆಸಿದ ಕಾರ್ಯಾಚರಣೆಗೆ ಬೆಂಬಲವಾಗಿ ರಷ್ಯಾ ಕೈಗೊಂಡ ವಾಯು ದಾಳಿಯಲ್ಲಿ ಐವರು ಮಕ್ಕಳೂ ಒಳಗೊಂಡಂತೆ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ನೊಂದು ನುಡಿದಿದ್ದಾರೆ.

Facebook Comments

Sri Raghav

Admin