ರಷ್ಯಾ ರಾಯಭಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ 6 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Rassian--01

ಅಂಕಾರಾ, ಡಿ.21- ರಷ್ಯಾ ರಾಯಭಾರಿ ಆಂಡ್ರ್ಯೂ ಕರ್ಲೋವ್‍ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಟರ್ಕಿ ಪೊಲೀಸರು ಬಂಧಿಸಿದ್ದಾರೆ. ರಷ್ಯಾ ರಾಯಭಾರಿ ಹತ್ಯೆ ಪ್ರಕರಣದ ನಂತರ ಹಂತಕನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆಗಾಗಿ ಆತನ ತಂದೆ-ತಾಯಿ, ಸೋದರಿಯರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ.   ರಾಜಧಾನಿ ಅಂಕಾರಾದಲ್ಲಿ ಅಮೆರಿಕ ರಾಯಭಾರಿ ಕಚೇರಿ ಮೇಲೂ ಗುಂಡಿನ ದಾಳಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಮತ್ತು ಸುರಕ್ಷಿತ ದೃಷ್ಟಿಯಿಂದ ಕಾರ್ಯಾಲಯವನ್ನು ಬಂದ್ ಮಾಡಲಾಗಿತ್ತು.

ನಿನ್ನೆ ತಡರಾತ್ರಿ ಅಂಕಾರಾದಲ್ಲಿನ ಅಮೆರಿಕ ರಾಯಭಾರಿ ಕಚೇರಿ ಮುಖ್ಯದ್ವಾರದ ಬಳಿ ಬಂದ ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿ ಪರಾರಿಯಾದ. ಈ ಘಟನೆ ನಂತರ ಅಂಕಾರಾ, ಇಸ್ತಾನ್‍ಬುಲ್ ಮತ್ತು ಅಡಾನದಲ್ಲಿನ ರಾಯಭಾರಿ ಮತ್ತು ರಾಜತಾಂತ್ರಿಕ ಕಚೇರಿಗಳನ್ನು ಪರಿಸ್ಥಿತಿ ಸುಧಾರಿಸುವ ತನಕ ಬಂದ್ ಮಾಡಲಾಗಿದೆ ಎಂದು ರಾಯಭಾರಿ ಕಚೇರಿ ಹೇಳಿಕೆ ನೀಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin