ರಷ್ಯಾ ಸಂಸತ್ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಜಯಭೇರಿ

ಈ ಸುದ್ದಿಯನ್ನು ಶೇರ್ ಮಾಡಿ

Putin

ಮಾಸ್ಕೊ, ಸೆ. 19 – ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ ಪಾರ್ಟಿ ಸಂಸತ್ ಚುನಾವಣೆಯಲ್ಲಿ ಭಾರೀ ಬಹುಮತ ಗಳಿಸಿದ್ದು, ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ರಷ್ಯಾ ಸಂಸತ್ ಡ್ಯುಮಗೆ ನಡೆದ ಚುನಾವಣೆಯಲ್ಲಿ ಚಲಾಯಿಸಲಾದ ಮತಗಳಲ್ಲಿ ಶೇ.90ರಷ್ಟು ಎಣಿಕೆ ಕಾರ್ಯ ನಡೆದಿದ್ದು, ಪುಟಿನ್ ಬೆಂಬಲಿಸುವ ಪಕ್ಷಗಳು ಶೇ.54.3ರಷ್ಟು ಮತ ಗಳಿಸಿವೆ. 450 ಸದಸ್ಯ ಬಲದ ಸಂಸತ್‍ನಲ್ಲಿ 338 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.  ಭಾರೀ ಗೆಲುವಿನೊಂದಿಗೆ ರಷ್ಯಾ ಅಧ್ಯಕ್ಷರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin