ರಸ್ತೆಗೆ ಅಡ್ಡಲಾಗಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ತೆರವಿಗೆ ಆಗ್ರಹಿಸಿ ಬೆಸ್ಕಾಂಗೆ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

kolara

ಕೋಲಾರ,ಅ.19- ನಗರದ ವಾರ್ಡ್ ಸಂಖ್ಯೆ 26 ಕ್ಕೆ ಸೇರಿದ ವಸತಿ ಪ್ರದೇಶದಲ್ಲಿ ರಸ್ತೆ ಮದ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ಹಾಗೂ ಟ್ರಾನ್ಸ್‍ಫಾರ್ಮರ್‍ನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಹೊಸ ಕಂಬಗಳನ್ನು ಅಳವಡಿಸಲು ಸುಮಾರು 2 ವರ್ಷಗಳಿಂದ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಸಹ ಸ್ಪಂಧಿಸದ ಬೆಸ್ಕಾಂ ಅಧಿಕಾರಿಗಳ ವಿರುದ್ದ ಬೆಸ್ಕಾಂ ಕಛೇರಿಗೆ ವಾರ್ಡಿನ ಜನತೆಯೊಂದಿಗೆ ನಗರಸಭಾ ಸದಸ್ಯೆ ಲಕ್ಷ್ಮಮ್ಮನವರು ತಮ್ಮ ವಾರ್ಡಿನ ನೂರಾರು ಮಂದಿಯೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸದರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಅಧಿಕಾರಿಗಳು ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ ತುರ್ತಾಗಿ ಕ್ರಮ ಕೈಗೊಂಡು ಸದರಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‍ಫಾರ್ಮರ್‍ನ್ನು ತೆರವುಗೊಳಿಸಿ ಅನುಕೂಲ ಸ್ಥಳದಲ್ಲಿ ಸ್ಥಳಾಂತರಿಸುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.ಪ್ರತಿಭಟನೆಯಲ್ಲಿ ಜೆ.ಡಿ.ಎಸ್.ನ ಜಿಲ್ಲಾ ಉಪಾಧ್ಯಕ್ಷರಾದ ಎಂ.ಚಂದ್ರಮೌಳಿ, ವೆಂಕಟೇಶಪ್ಪ, ಕೃಷ್ಣಸಿಂಗ್, ಗರಾಂಡ ನಾಗರಾಜ್, ಡೆಕೋರೇಷನ್ ಕೃಷ್ಣ, ಜಗದೀಶ್, ಬಾಬು, ರವಿ, ಮುಜಾಹಿದ್‍ಪಾಷ, ಸಿರಾಜ್‍ಪಾಷಾ, ಕುಮಾರ್, ಶೇರು, ಉದಯಕುಮಾರ್, ಅಯಾಜ್, ಶ್ರೀನಾಥ್, ಗುಟ್ರಾಳ್ ನಾರಾಯಣಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin