ರಸ್ತೆಯಲ್ಲಿ ಹೋಗುತ್ತಿದ್ದವನ್ನು ತಡೆದು ಇರಿದು ಕೊಂದರು

ಈ ಸುದ್ದಿಯನ್ನು ಶೇರ್ ಮಾಡಿ

murder

ಬೆಂಗಳೂರು,ಮಾ.13-ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಎಚ್‍ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ರಾಜ(40) ಕೊಲೆಯಾದ ವ್ಯಕ್ತಿ. ಎಚ್‍ಎಎಲ್‍ನ ಜ್ಯೋತಿನಗರದಲ್ಲಿರುವ ಅಕ್ಕನ ಮನೆಗೆ ರಾತ್ರಿ ನಡೆದು ಹೋಗುವಾಗ ಘಟನೆ ನಡೆದಿದೆ. ರಸ್ತೆಯಲ್ಲಿದ್ದ ಇಬ್ಬರು ರಾಜ ಅವರೊಂದಿಗೆ ಜಗಳ ಮಾಡಿ ಕುತ್ತಿಗೆ, ಕೆನ್ನೆ ಬಳಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.  ಗಾಯಗೊಂಡ ರಾಜನನ್ನು ಅಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.  ಜಗಳಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin