ರಸ್ತೆ ಅಪಘಾತದಲ್ಲಿ ಕೇಂದ್ರ ಸಚಿವ ಮನೋಜ್ ಸಿನ್ಹಾಗೆ ಕೈ ಮೂಳೆ ಮುರಿತ

ಈ ಸುದ್ದಿಯನ್ನು ಶೇರ್ ಮಾಡಿ

Manoj-Singha------------01

ಗೋರಖ್‍ಪುರ್, ಡಿ.24-ಉತ್ತರಪ್ರದೇಶದ ಗೋರಖ್‍ಪುರ್ ಬಳಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಗಾಯಗೊಂಡಿದ್ದು, ಅವರ ಎಡ ತೊಳಿನ ಮೂಳೆ ಮುರಿದಿದೆ.  ಬಾರಾಬಂಕಿಯಿಂದ ಗೋರಖ್‍ಪುರಕ್ಕೆ ಬರುತ್ತಿದ್ದಾಗ ತಪ್ತಿ ನದಿ ಸೇತುವೆ ಬಳಿ ನಿನ್ನೆ ರಾತ್ರಿ 7.15ರಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಈಶಾನ್ಯ ರೈಲ್ವೆ (ಎನ್‍ಇಆರ್) ಸಿಪಿಆರ್‍ಒ ಸಂಜಯ್ ಯಾದವ್ ತಿಳಿಸಿದ್ದಾರೆ.  ರಸ್ತೆಯಲ್ಲಿ ಅಡ್ಡಲಾಗಿ ಬಂದ ವ್ಯಕ್ತಿಗೆ ಅಪಘಾತ ಆಗುವುದನ್ನು ತಪ್ಪಿಸಿಲು ಅವರ ಬೆಂಗಾವಲಿನ ವಾಹನ ಚಾಲಕ ಹಠಾತ್ ಬ್ರೇಕ್ ಹಾಕಿದ. ಹಿಂದೆ ಬರುತ್ತಿದ್ದ ಸಚಿವರಿದ್ದ ಕಾರು ಬೆಂಗಾವಲು ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಇದರಿಂದ ಸಿನ್ಹಾ ಅವರಿಗೆ ಗಾಯಗಳಾಗಿ ಎಡಗೈ ಮೂಳೆ ಮುರಿಯಿತು.

ಗಾಯಗೊಂಡ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ರೈಲ್ವೆ ಆಸ್ಪತ್ರೆಗೆ ವರ್ಗಾಯಿಸಲಾಯಿತು. 57 ವರ್ಷದ ಮನೋಜ್ ಸಿನ್ಹಾ ಗೋರಖ್‍ಪುರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin