ರಸ್ತೆ ಅಪಘಾತದಲ್ಲಿ ಗುಲ್ಬರ್ಗ ಜಿಲ್ಲೆಯ ಲೋಕಾಯುಕ್ತ ಎಸ್ಪಿ ಎಂ.ಬಿ.ಪಾಟೀಲ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Acci

ಹಾವೇರಿ,ಸೆ.16-ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗುಲ್ಬರ್ಗ ಜಿಲ್ಲೆಯ ಲೋಕಾಯುಕ್ತ ಎಸ್ಪಿ ಎಂ.ಬಿ.ಪಾಟೀಲ್ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡರುವ ದುರ್ಘಟನೆ ಇಂದು ಮುಂಜಾನೆ ಹಾನಗಲ್ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‍ನ ಮುಂಭಾಗದ ಸೀಟಿನಲ್ಲಿ ಕೂತಿದ್ದ ಎಂ.ಬಿ.ಪಾಟೀಲ್ ಅವರು ಸ್ಥಳದಲ್ಲೇ ಮೃತಪಟ್ಟರೆ ಬೆಂಗಳೂರಿನ ವಿದ್ಯಾರಣ್ಯಾನಗರದ ಡಾ. ಅಂಕಿತ, ಎನ್‍ಜಿಇಎಫ್ ಲೇಔಟ್‍ನ ಚನ್ನಬಸವಯ್ಯ, ಬೆಳಗಾವಿಯ ಗಂಗಾಧರ ನಗರದ ಶ್ರೀಕಾಂತ ಹಾವನೂರು ಸೇರಿದಂತೆ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತರೆ 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ತಕ್ಷಣ ಹಾವೇರಿಯ ಜಿಲಾಸ್ಪತ್ರೆಗೆ ದಾಖಲಿಸಲಾಗಿದೆ.  ಎರಡು ವಾಹನಗಳ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಕಾರ್ಖಾನೆಯೊಂದರಿಂದ ಸಕ್ಕರೆ ತುಂಬಿಕೊಂಡು ಬೆಳಗಾವಿ ಕಡೆಗೆ ಲಾರಿ ಹೊರಟ್ಟಿತ್ತು. ಚಾಲಕನ ಅಜಾಗರೂಕತೆಗೆ ಈ ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin