ರಸ್ತೆ ಅಭಿವೃದ್ಧಿಗೆ 8 ಕೋಟಿ ರೂ.

ಈ ಸುದ್ದಿಯನ್ನು ಶೇರ್ ಮಾಡಿ

ತುರುವೇಕೆರೆ, ಜ.14- ವಿಧಾನಸಭಾ ಕ್ಷೇತ್ರದ ರಸ್ತಗಳ ಅಭಿವೃದ್ದಿಗಾಗಿ 8 ಕೋಟಿ ರೂ ಗಳನ್ನು ಸರ್ಕಾರವು ಬಿಡುಗಡೆ ಮಾಡಿದೆ ಎಂದು ಕೆ.ಪಿ.ಸಿ.ಸಿ ಸದಸ್ಯೆ ಗೀತಾರಾಜಣ್ಣ ತಿಳಿಸಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ ಅವರು, ಬೋಚಿಹಳ್ಳಿ ದಬ್ಬೇಘಟ್ಟ ರಸ್ತೆಗೆ 2 ಕೊಟಿ, ತುರುವೇಕೆರೆ ಹುಲ್ಲೆಕೆರೆ ರಸ್ತೆಗೆ 1.5 ಕೋಟಿ, ಶಿರಾ ನಂಜಗೂಡು ರಸ್ತೆಯಿಂದ ಚಟ್ಟನಹಳ್ಳಿ, ಯರದಹಳ್ಳಿ ಸೀಗೇಹಳ್ಳಿ ರಸ್ತೆಗೆ 1.5 ಕೋಟಿ, ತಾಳಕೆರೆ ಬ್ಯಾಡರಹಳ್ಳಿ ರಸ್ತೆ ಯಿಂದ ಹೊಣಕೆರೆ ಮುತ್ತುಗದಹಳ್ಳಿ ರಸ್ತೆ 50 ಲಕ್ಷ, ಯಡಿಯೂರು ತಿಪಟೂರು ರಸ್ತೆ ಅಭಿವೃದ್ದಿ 1 ಕೋಟಿ, ಹಂಚಿಹಳ್ಳಿ ಹಂಬಲದೇವರಹಳ್ಳಿ ರಸ್ತೆಯ ಸೇತುವೆ ನಿರ್ಮಾಣಕ್ಕೆ 25 ಲಕ್ಷ ನಿಟ್ಟೂರು ರಸ್ತೆ ಸೇತುವೆ ನಿರ್ಮಾಣಕ್ಕೆ 25 ಲಕ್ಷ, ಲೋಕೋಪಯೋಗಿ ಕಛೇರಿಯ ಮೊದಲನೇ ಹಂತದ ಕಾಮಗಾರಿಗೆ 50 ಲಕ್ಷ ತುರುವೇಕೆರೆ ವಕೀಲ ಸಂಘದ ಮೊದಲನೇ ಮತ್ತು ಎರಡನೇ ಅಂತಸ್ತಿನ ಕಾಮಗಾರಿಗೆ 50 ಲಕ್ಷ, ಒಟ್ಟು 8 ಕೋಟಿ ರೂಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಕಾಂಗ್ರೆಸ್ ಪಕ್ಷ ಅಭಿವೃದ್ದಿ ಪರ ಎಂಬುದು ಕ್ಷೇತ್ರದ ಜನತೆ ಮನಗಾಣಬೇಕು. ನಮ್ಮ ಕೋರಿಕೆ ಮೇಲೆ ಸರ್ಕಾರ ಈ ಹಣವನ್ನು ಬಿಡುಗಡೆ ಮಾಡಿದ್ದು, ಲೋಕೋಪಯೋಗಿ ಇಲಾಖೆಯಿಂದ ಶೀಘ್ರದಲ್ಲೆ ಕಾಮಗಾರಿಗಳು ಪ್ರಾರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕೋಪಯೋಗಿ ಇಲಾಖೆ ಸಚಿವ ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.ಕೆಪ್ಸ್ ನಿರ್ದೇಶಕ ರಾಜಣ್ಣ, ಮುಖಂಡ ಈಶ್ವರ್ ಮತ್ತಿತರರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin