ರಸ್ತೆ ದಾಟುವ ಧಾವಂತದಲ್ಲಿ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡ ಆನೆ

ಈ ಸುದ್ದಿಯನ್ನು ಶೇರ್ ಮಾಡಿ

elephant

ಮಾಗಡಿ, ಸೆ.12-ರಸ್ತೆ ದಾಟುವ ಧಾವಂತದಲ್ಲಿ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದ ಆನೆ ಸಿದ್ಧನ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ಮಂಚನಬೆಲೆ ಹಿನ್ನೀರಿನಲ್ಲಿ ವಿರಮಿಸುತ್ತಿರುವ ಸಲಗದ ಕಾಲು ಕೊಳೆಯುತ್ತಾ ಬಂದಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಕಳೆದ 30ರಂದು ತಾವರೆಕರೆ ಹೋಬಳಿಯ ಗೋಪಾಲ ನಗರ ಬಳಿ ರಸ್ತೆ  ದಾಟುವ ಧಾವಂತದಲ್ಲಿ ಗಾಬರಿಯಿಂದ ಓಡಿದ್ದು, ಈ ಸಂದರ್ಭದಲ್ಲಿ ಕಾಲು ಜಾರಿಗೆ ಕಾಲುವೆಗೆ ಬಿದ್ದ ಪರಿಣಾಮ ಬಲಗಾಲು ಮುರಿದು ಗಾಯವಾಗಿತ್ತು.ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಔಷಧೋಪಚಾರ ಮಾಡಿ ಕಾಡಿಗೆ ಬಿಟ್ಟಿದ್ದರು. ಅಂದಿನಿಂದ ಸಾವನದುರ್ಗ ತಪ್ಪಲಿನ ಅವೇರಹಳ್ಳಿ ಬಳಿಯ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ವಿರಮಿಸುತ್ತಿದೆ. ನೀರಿನಲ್ಲೇ ಇರುವುದರಿಂದ ಜಲಚರಗಳು ಗಾಯವನ್ನು ತಿನ್ನುತ್ತಾ ಬಂದಿದ್ದು, ಆರೋಗ್ಯ ಸ್ಥಿತಿ ತೀವ್ರ ಬಿಗಡಾಯಿಸಿದೆ.

ಇದನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ, ಚಿಕಿತ್ಸೆ ನೀಡಲು ಆಗುತ್ತಿಲ್ಲ. ಏಕೆಂದರೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಲು ಬಂದರೆ ಜಲಾಶಯಕ್ಕೆ ಮಧ್ಯಭಾಗಕ್ಕೆ ಹೋಗುತ್ತದೆ, ಜನರನ್ನು ಕಂಡರೆ ನೀರಿನಲ್ಲೇ ಓಡಾಡುವುದರಿಂದ ಅದನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ತೀವ್ರ ಕಷ್ಟಕರವಾಗಿದೆ. ಇದನ್ನು ಹೊರತರಲು ಅರಣ್ಯ ಇಲಾಖೆ ಹರಸಾಹಸ ಪಟ್ಟರೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾರ್ಯಾಚರಣೆ ಅರ್ಧಕ್ಕೆ ನಿಂತಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಸಿದ್ಧ ಉಳಿಯುವ ಸಾಧ್ಯತೆಗಳು ಕಡಿಮೆ ಇದೆ. ಅದು ಬದುಕಿರುವವರೆಗೂ ನಮ್ಮ ಕರ್ತವ್ಯ ಮಾಡಬೇಕು ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin