ರಹಸ್ಯ ಯುದ್ಧನೌಕೆಗಳಿಗಾಗಿ ರಷ್ಯಾ ಜೊತೆ ಭಾರತ ಮಹತ್ವದ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

India-rassia

ನವದೆಹಲಿ, ಸೆ.8-ವಿಶ್ವದ ಶಕ್ತಿಶಾಲಿ ದೇಶಗಳೊಂದಿಗೆ ಮಹತ್ವದ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಗೊಳಿಸುತ್ತಿರುವ ಭಾರತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಾಲ್ಕು ಶತಕೋಟಿ ಡಾಲರ್ ಮೊತ್ತದ ರಹಸ್ಯ ಯುದ್ಧನೌಕೆಗಳನ್ನು ಹೊಂದಲು ರಷ್ಯಾ ಜೊತೆ ರಕ್ಷಣಾ ಸಹಕಾರ ಮಾತುಕತೆ ನಡೆಸಿದೆ.   ರಾಜಧಾನಿಯಲ್ಲಿ ನಿನ್ನೆಯಿಂದ ಆರಂಭವಾಗಿರುವ ಎರಡು ದಿನಗಳ ಉನ್ನತ ಮಟ್ಟದ ಭಾರತ-ರಷ್ಯಾ ಸೇನಾ ತಾಂತ್ರಿಕ ಸಹಕಾರ ಕಾರ್ಯನಿರ್ವಹಣಾ ಸಮೂಹ (ಎಂಟಿಸಿ-ಡಬ್ಲ್ಯುಜಿ) ಸಭೆಯಲ್ಲಿ ಈ ಕುರಿತು ಮಹತ್ವದ ಸಮಾಲೋಚನೆಗಳು ನಡೆದಿವೆ.   ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ಷಿಪಣಿಗಳೂ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ದೂರ ಸಂವೇದಿ ಮಾಹಿತಿ ಸಾಧನಗಳಿರುವ ನಾಲ್ಕು ಬಹು ಉದ್ದೇಶಿತ ರಹಸ್ಯ ಸಮರನಾವೆಗಳಿಗೆ ಒಂದು ತಾಂತ್ರಿಕ-ವಾಣಿಜ್ಯ ಪ್ರಸ್ತಾವನೆಯನ್ನು ಮಾಸ್ಕೋ ಸಲ್ಲಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಈ ಪ್ರಸ್ತಾವನೆ ಅಡಿ ರಷ್ಯಾದಿಂದ ಎರಡು ಯುದ್ಧನೌಕೆಗಳು ಬರಲಿದ್ದು, ಇನ್ನೆರಡು ನಾವೆಗಳನ್ನು ಭಾರತದಲ್ಲಿ ನಿರ್ಮಿಸಲಾಗುವುದು. ದರ ಹಾಗೂ ಅಂತರ್-ಸರ್ಕಾರಿ ಒಪ್ಪಂದ ಕುರಿತು ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ರಕ್ಷಣಾ ಸಚಿವಾಲಯವು ಕೆಲವು ಸ್ಪಷ್ಟೀಕರಣವನ್ನು ಕೇಳಿರುವುದಾಗಿ ಮೂಲಗಳು ಹೇಳಿವೆ.

► Follow us on –  Facebook / Twitter  / Google+

Facebook Comments

Sri Raghav

Admin