ರಾಖಿ ಸಾವಂತ್ ಹೊಸ ಕಾಂಟ್ರವರ್ಸಿ : ಈ ಬಿಚ್ಚಮ್ಮ ಮಾಡಿದ್ದೇನು ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

Modi-Rakhi-Savanth

ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯ ಸದ್ದು ಮಾಡುತ್ತಿರುವ ಬಾಲಿವುಡ್ ಐಟಂ ನಂಬರ್ ತಾರೆ ರಾಖಿ ಸಾವಂತ್ ಮತ್ತೆ ಕಾಂಟ್ರವರ್ಸಿಗೆ ಒಳಗಾಗಿದ್ದಾಳೆ. ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗಳಿಗೆ ಗುರಿಯಾಗುತ್ತಿದ್ದ ಈ ಬಿಚ್ಚಮ್ಮ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಚಿತ್ರಗಳಿರುವ ಉಡುಪನ್ನು ಧರಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ರಾಖಿಯ ಉಬ್ಬು-ತಗ್ಗುಗಳಲ್ಲಿ ಮೋದಿಯ ಚಿತ್ರ ರಾರಾಜಿಸುತ್ತಿರುವುದನ್ನು ನೋಡಿ ಕೇಸರಿ ಪಕ್ಷದವರು ಕೆಂಡಾಮಂಡಲವಾಗಿದ್ದಾರೆ.  ಮೋದಿಯವರ ಚಿತ್ರಗಳಿರುವ ಬಿಗಿಯಾದ ಉಡುಪು ಧರಿಸಿ ಪೋಸು ನೀಡಿರುವ ರಾಖಿ ವಿರುದ್ಧ ರಾಜಸ್ತಾನದ ಕನ್‍ಕ್ರೋಲಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ದೇಶದ ಪ್ರಧಾನಿಯವರ ಚಿತ್ರಗಳಿರುವ ಆಶ್ಲೀಲ ಉಡುಪು ಧರಿಸಿ ಮೋದಿಯವರಿಗೆ ಅಪಮಾನ ಮಾಡಿದ್ದಾಳೆ ಎಂದು ದೂರನಲ್ಲಿ ಆರೋಪಿಸಲಾಗಿದೆ.

ಕಳೆದ ಆಗಸ್ಟ್‍ನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ರಾಖಿ ಈ ಉಡುಪು ಧರಿಸಿ ಛಾಯಾಗ್ರಾಹಕರಿಗೆ ಪೋಸ್ ನೀಡಿದ್ದಳು. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊಗಳು ಪ್ರಕಟವಾದ ಆಧಾರದ ಮೇಲೆ ಸ್ಥಳೀಯ ವಕೀಲ ಪ್ರಜೀತ್ ತಿವಾರಿ ದೂರು ದಾಖಲಿಸಿದ್ದಾರೆ.  ಆಕೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಗೊರೆ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಂಡಿದ್ದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದ ರಾಖಿ, ತನ್ನ ಚಿತ್ರಗಳಿಗೆ ಎ ಸರ್ಟಿಫಿಕೇಟ್ ನೀಡುತ್ತಿದ್ದ ಸೆನ್ಸಾರ್ ಬೋರ್ಡ್ ಅಧ್ಯಕ್ಷರ ಮೇಲೆ ಕೂಗಾಡಿ ವಿವಾದಕ್ಕೆ ಗುರಿಯಾಗಿದ್ದಳು. ಈಗ ಮೋದಿ ಚಿತ್ರಗಳಿರುವ ಉಡುಪಿನಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ರಾಖಿ ನಿಂಗೆ ಇವೆಲ್ಲಾ ಬೇಕಿತ್ತಾ ?

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin