ರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

raghavendra

ಕಡೂರು, ಆ. 12-ಪಟ್ಟಣದ ಕೋಟೆಯ ಶ್ರೀ ರಾಘವೇಂದ್ರಸ್ವಾಮಿಗಳ 345ನೇ ವರ್ಷದ ಆರಾಧನ ಮಹೋತ್ಸವವು ಇದೇ 19ರಿಂದ 21ರವರೆಗೆ ನಡೆಯಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಹೆಚ್.ಪಿ ನಾಗರಾಜ್‍ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಮಹೋತ್ಸವ ಕಡೂರು ಮಠದಲ್ಲಿ ನಡೆಯುತ್ತಿರುವ 85ನೇ ವರ್ಷದ ಆರಾಧನೆಯಾಗಿದ್ದು, 19ರ ಶುಕ್ರವಾರ ಪೂರ್ವರಾಧನೆ, 20ರ ಶನಿವಾರ ಪುಣ್ಯರಾಧನೆ, 21ರ ಭಾನುವಾರ ಉತ್ತರಾರಾಧನೆ ಪ್ರಯುಕ್ತ ಬೆಳಗ್ಗೆ 10 ಘಂಟೆಗೆ ತೇರು ಬೀದಿಗಳಲ್ಲಿ ಭಜನಾ ವಾಧ್ಯ ವೈಭವದೊಂದಿಗೆ ರಥೋತ್ಸವ ಕಾರ್ಯಕ್ರಮ ಜರುಗಲಿದೆ.
22ರ ಸೋಮವಾರ ಅವಭೃತ ಸ್ನಾನದ ಅಂಗವಾಗಿ ತೇರು ಬೀದಿಗಳಲ್ಲಿ ಓಕಳಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin