ರಾಜಕಾರಣಿಗಳ ಸಂಪತ್ತಿಗೆ ನಿಯಂತ್ರಣ ಏಕಿಲ್ಲ : ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ,ಸೆ.7- ರಾಜಕೀಯ ನೇತಾರರ ಸಂಪತ್ತು ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಕ್ರಮಗಳು ಏಕಿಲ್ಲ? ಹೀಗೆಂದು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು ಸುಪ್ರೀಂಕೋರ್ಟ್ ಈ ಬಗ್ಗೆ ಕೇಂದ್ರ ಯಾಕೆ ಮೌನ ವಹಿಸಿದೆ ಎಂದು ನ್ಯಾಯಮೂರ್ತಿ ಜೆ.ಚಲ ಮೇಶ್ವರ್ ಅವರನ್ನೊಳಗೊಂಡ ನ್ಯಾಯ ಪೀಠ ಪ್ರಶ್ನಿಸಿದೆ. ಚುನಾವಣೆಯಲ್ಲಿ ಹಣ ಬಲ ಹೆಚ್ಚಾಗುತ್ತಿದೆ. ಚುನಾವಣಾ ಸುಧಾರಣೆಯಾಗಬೇಕೆಂದು ಸರ್ಕಾರವೇ ಹಲವು ಸಂದರ್ಭಗಳಲ್ಲಿ ವಾದಿಸುತ್ತಿದೆ. ಆದರೆ ರಾಜಕೀಯ ನೇತಾರರ ಸಂಪತ್ತು ವೃದ್ಧಿಯಾಗುತ್ತಿರುವ ಬಗ್ಗೆ ನಿಯಂತ್ರಣ ಹೇರದೆ ಮೌನವಾಗಿರುವುದು ಅಚ್ಚರಿ ತಂದಿದೆ ಎಂದು ನ್ಯಾ.ಚಲಮೇಶ್ವರ್ ಪ್ರಶ್ನಿಸಿದ್ದಾರೆ. ಇದುವೇ ಏನು ಸರ್ಕಾರದ ನಿಲುವು ಎಂದು ಪ್ರಶ್ನಿಸಿದ್ದಾರೆ? ಸೆ.12ರೊಳಗಾಗಿ ಕೋರ್ಟ್ಗೆ ಮಾಹಿತಿ ಬೇಕೆಂದು ನ್ಯಾಯಪೀಠ ಹೇಳಿದೆ.
Facebook Comments