ರಾಜಕಾರಣಿ ಮಗನ ಕ್ರೌರ್ಯ : ಯುವಕನನ್ನು ಕಾರಿಗೆ ಕಟ್ಟಿ ಕಿಲೋಮೀಟರ್ ದೂರ ಎಳೆದ್ಯೊಯ್ದು ಕೊಂದ.!

ಈ ಸುದ್ದಿಯನ್ನು ಶೇರ್ ಮಾಡಿ

Vareendar--01

ಚಂಡೀಗಢ, ಮಾ.15-ಕ್ಷುಲ್ಲಕ ಜಗಳದಿಂದ ಕುಪಿತಗೊಂಡ ರಾಜಕಾರಣಿಯೊಬ್ಬ ಪುತ್ರ ತನ್ನ ಸಹಚರರ ನೆರವಿನಿಂದ ಯುವಕನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ, ಕಾರಿಗೆ ಕಟ್ಟಿ ಒಂದು ಕಿಲೋಮೀಟರ್ ಎಳೆದ್ಯೊಯ್ದು ಹತ್ಯೆ ಮಾಡಿರುವ ಘಟನೆ ಹರ್ಯಾಣದ ಪಂಚಕುಲ ನಗರದಲ್ಲಿ ನಡೆದಿದೆ.
ವರೀಂದರ್ ಸಿಂಗ್ ಸಂಧು(26) ಕಗ್ಗೊಲೆಯಾದ ದುರ್ದೈವಿ. ಈ ಸಂಬಂಧ ಇಂಡಿಯನ್ ನ್ಯಾಷನಲ್ ಲೋಕ್ ದಳದ ಕಾರ್ಪೊರೇಟರ್ ಗುರ್‍ಪ್ರೀತ್ ಕೌರ್ ವರೈಚ್ ಅವರ ಪುತ್ರ ಮನ್ಮೀತ್ ಸಿಂಗ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಕ್ರಿಕೆಟ್ ಆಡುವ ಸಂದರ್ಭದಲ್ಲಿ ವರೀಂದರ್ ಮತ್ತು ಇನ್ನೊಂದು ಗುಂಪಿನ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕಾಗಿ ಮನ್ಮೀತ್ ಆರು ಮಂದಿ ಸಹಚರರೊಂದಿಗೆ ಪಂಚಕುಲದಲ್ಲಿನ ವರೀಂದರ್ ಮನೆಗೆ ನುಗ್ಗಿ ಊಟ ಮಾಡುತ್ತಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ನಂತರ ಕಾರಿನಲ್ಲಿ ಒಂದು ಕಿಲೋಮೀಟರ್ ದೂರ ಎಳೆದೊಯ್ದರು.   ದುಷ್ಕರ್ಮಿಗಳ ಕೌರ್ಯದಿಂದ ವರೀಂದರ್ ಮುಖ ಗುರುತಿಸಲಾಗದಷ್ಟು ವಿರೂಪಗೊಂಡಿದೆ.  ಪಂಚಕುಲ ಪೊಲೀಸರು ಆರೋಪಿ ಮನ್ಮೀತ್ ಸಿಂಗ್ ಮತ್ತು ಸಹಚರರನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin