ರಾಜಕಾಲುವೆ ಒತ್ತುವರಿಗೆ ಸಹಕರಿಸಿದ ಆರೋಪ : ವಿಚಾರಣೆಗೆ ಹಾಜರಾದ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Rajakaluve-3

ಬೆಂಗಳೂರು, ಆ.18-ರಾಜಕಾಲುವೆ ಒತ್ತುವರಿಗೆ ಸಹಕರಿಸಿದ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡಿರುವ 20 ಮಂದಿ ಬಿಬಿಎಂಪಿ ಅಧಿಕಾರಿಗಳಲ್ಲಿ 10 ಮಂದಿ ಇಂದು ಬಿಎಂಟಿಎಫ್ ಮುಂದೆ ವಿಚಾರಣೆಗೆ ಹಾಜರಾದರು. ನಮ್ಮ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮನ್ನು ಸೇವೆಯಿಂದ ಅಮಾನತುಗೊಳಿಸಿರುವ ಕ್ರಮಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೆಲ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.  ಅಧಿಕಾರಿಗಳ ವಾದಕ್ಕೆ ಮನ್ನಣೆ ನೀಡದ ನ್ಯಾಯಾಲಯ, ನೀವು ಬಿಎಂಟಿಎಫ್ ಮುಂದೆ ವಿಚಾರಣೆಗೆ ಹಾಜರಾದರೆ ಬಂಧನದಿಂದ ವಿನಾಯ್ತಿ ನೀಡಲಾಗುವುದು ಎಂದು ನ್ಯಾಯಾಧೀಶರು ಭರವಸೆ ನೀಡಿದ್ದರು.

ನ್ಯಾಯಾಲಯದ ಆದೇಶದ ಮೇರೆಗೆ ಇಂದು ಅಮಾನತುಗೊಂಡ ಅಧಿಕಾರಗಳಾದ ಮೋಹನ್ ಕೃಷ್ಣ, ಗುರುಪ್ರಸಾದ್, ಶಶಿಧರ್, ಮುನಿಕೃಷ್ಣ, ಗೋವಿಂದರಾಜ, ಚೌಡೇಗೌಡ, ಲಕ್ಕಯ್ಯ, ಗಂಗಪ್ಪ, ಸುನಿತಾ ಮತ್ತು ಲಿಯಾಕತ್ ಎಂಬುವರು ಇಂದು ಬಿಎಂಟಿಎಫ್ ಎಸ್ಪಿ ದೇವರಾಜ್ ಮುಂದೆ ವಿಚಾರಣೆಗೆ ಹಾಜರಾದರು.  ಅಧಿಕಾರಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ ಬಿಎಂಟಿಎಫ್ ಪೊಲೀಸರು ಹಲವಾರು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದರು. ಉಳಿದ ಅಧಿಕಾರಿಗಳು ನಾಳೆ ಬಿಎಂಟಿಎಫ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.

► Follow us on –  Facebook / Twitter  / Google+

Facebook Comments

Sri Raghav

Admin