ರಾಜಕಾಲುವೆ ಒತ್ತುವರಿ ಸಂತ್ರಸ್ತರಿಗೆ ಬಿಡಿಎ ಅಪಾರ್ಟ್‍ಮೆಂಟ್‍ಗಳಲ್ಲಿ ಮನೆ

ಈ ಸುದ್ದಿಯನ್ನು ಶೇರ್ ಮಾಡಿ

BDA-002

ಬೆಂಗಳೂರು, ನ.5-ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಸಂದರ್ಭದಲ್ಲಿ ಮನೆ ಕಳೆದುಕೊಂಡ ಬಡವರಿಗೆ ಬಿಡಿಎನಿಂದ ಅಪಾರ್ಟ್‍ಮೆಂಟ್ ಮೀಸಲಿಡಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದರು. ಸೆಂಟ್ ಜೋಸೆಫ್ ಕಾಲೇಜಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿ ತೆರವು ಸಂದರ್ಭದಲ್ಲಿ ಸುರು ಕಳೆದುಕೊಂಡ ಬಡವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಅಪಾರ್ಟ್‍ಮೆಂಟ್‍ಗಳಲ್ಲಿ ವಸತಿ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ಇತ್ತೀಚೆಗೆ ನಗರದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಎಷ್ಟು ಜನ ಬಡವರು ಮನೆ ಕಳೆದುಕೊಂಡಿದ್ದಾರೆಯೋ ಅಷ್ಟು ಜನರಿಗೆ ಬಿಡಿಎ ಅಪಾರ್ಟ್‍ಮೆಂಟ್‍ಗಳಲ್ಲಿ ಮನೆಗಳನ್ನು ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದರು. ಆಡಳಿತಾ ಸುಧಾರಣಾ ದೃಷ್ಟಿಯಿಂದ ಬಿಬಿಎಂಪಿಯನ್ನು 8 ರಿಂದ 10 ವಲಯಗಳನ್ನಾಗಿ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ. ಹಾಲಿ 8 ವಲಯಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲು ಪಾಲಿಕೆಗೆ ಸೂಚಿಸಿದ್ದೇವೆ ಎಂದು ತಿಳಿಸಿದರು. ಜನರ ಸಮಸ್ಯೆ ಪರಿಹರಿಸಲು ಜನಸ್ಪಂದನ ಒಂದು ಒಳ್ಳೆಯ ಕಾರ್ಯಕ್ರಮ. ನಗರದ ಕಸದ ಸಮಸ್ಯೆ ನಿವಾರಣೆಗೆ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕಸದಿಂದ ವಿದ್ಯುತ್ ಉತ್ಪಾದಿಸುವ ಪ್ರಯತ್ನವನ್ನೂ ಕೂಡ ಮಾಡುತ್ತಿದೆ ಎಂದು ತಿಳಿಸಿದರು.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದರೂ ನಗರದ ಹೊರವಲಯದ ಸಂಸ್ಕರಣಾ ವಲಯದ ಸುತ್ತಲಿನ ಗ್ರಾಮಸ್ಥರು ವಿರೋಧಿಸುತ್ತಿರುವುದು ಬೇಸರ ತಂದಿದೆ. ಅವರಿಗೆ ಇದರ ಉದ್ದೇಶವನ್ನು ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು. ನಾಲ್ಕು ಸಾವಿರ ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು. ಫ್ಲೈಓವರ್ ಮತ್ತಿತರ ಕಡೆ ಕಸ ಗುಡಿಸಲು ಮೆಕ್ಯಾನಿಕಲ್ ಸ್ವೀಪರ್ ವಾಹನ ಖರೀದಿಸಲಾಗುವುದು, ಹೆಚ್ಚಿನ ವಾಣಿಜ್ಯ ಸ್ಥಳಗಳಲ್ಲಿ ಕಸದ ಬುಟ್ಟಿಗಳನ್ನು ಇಡಲು ಕ್ರಮಕೈಗೊಳ್ಳಲಾಗಿದೆ. ಅಪಾಯಕಾರಿ ನೂರು ಕ್ವಾರಿಗಳನ್ನು ಮುಚ್ಚುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

BBMP-000

ಆಟದ ಮೈದಾನ, ಉದ್ಯಾನವನ, ಆಸ್ಪತ್ರೆಗಳಿಗೆ ಮೀಸಲಿಡಲು ಹೊಸ ಸಿಡಿಪಿಯಲ್ಲಿ ಅಳವಡಿಸುತ್ತೇವೆ. ನಗರದ ಪ್ರಮುಖರಸ್ತೆಗಳ ವೈಟ್ ಟಾಪಿಂಗ್ ಕೆಲಸ ನಡೆಯುತ್ತಿದೆ. ರಾಜಕಾಲುವೆ ಅಭಿವೃದ್ಧಿಗೆ ಎರಡು ವರ್ಷಕ್ಕೆ ರಾಜ್ಯ ಸರ್ಕಾರ 900 ಕೋಟಿ ರೂ.ನೀಡಿದೆ ಎಂದು ತಿಳಿಸಿದರು. ವಾರ್ಡ್ ಮಟ್ಟದಲ್ಲಿ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುವಂತೆ ಕಾರ್ಪೊರೇಟರ್  ಮತ್ತು ಶಾಸಕರಿಗೆ ಸೂಚಿಸಿರುವುದಾಗಿ ಹೇಳಿದರು. ಮೇಯರ್ ಜಿ.ಪದ್ಮಾವತಿ ಮಾತನಾಡಿ, ಅಧಿಕಾರಿಗಳು, ರಾಜಕಾರಣಿಗಳು ಸಾರ್ವಜನಿಕರ ಸಹಪ್ರಯತ್ನದಲ್ಲಿ ಮುಂದಾದರೆ ಬೆಂಗಳೂರು ಅಭಿವೃದ್ಧಿ ಕಷ್ಟವಾಗದು. ಸದ್ಯದಲ್ಲೇ ವಾಹನ ನಿಲ್ದಾಣ ನೀತಿಗೆ ಟೆಂಡರ್ ಕರೆಯಲಾಗುವುದು. ರಸ್ತೆ ಗುಂಡಿ ಮುಚ್ಚುವ ಗುತ್ತಿಗೆದಾರರು ಒಂದು ವರ್ಷ ಅದರ ನಿರ್ವಹಣೆ ಮಾಡಬೇಕು ಎಂದರು. ಆಯುಕ್ತರಾದ ಮಂಜುನಾಥ ಪ್ರಸಾದ್ ಮಾತನಾಡಿ, ನಗರದಲ್ಲಿ ಇನ್ನು ಮೂರು ತಿಂಗಳಲ್ಲಿ 800 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ನಗರದಲ್ಲಿ ಆರಂಭಿಸುತ್ತೇವೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin