ರಾಜಕಾಲುವೆ ತೆರವಿನಿಂದ ಮನೆ ಕಳೆದುಕೊಂಡಿರುವವರಿಗೆ ಪರ್ಯಾಯ ವ್ಯವಸ್ಥೆಗೆ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Koliwad

ಬೆಂಗಳೂರು,ಆ.8-ರಾಜಕಾಲುವೆ ತೆರವು ಹಿನ್ನೆಲೆಯಲ್ಲಿ ಬಿಲ್ಡರ್ಸ್ ಹಾಗೂ ಅಧಿಕಾರಿಗಳ ವಂಚನೆಗೊಳಗಾಗಿ ಮನೆ ಕಳೆದುಕೊಂಡಿರುವ ಅಮಾಯಕರಿಗೆ   ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಗಂಭೀರ ಚಿಂತನೆ ನಡೆದಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಇಂದಿಲ್ಲಿ ತಿಳಿಸಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಯಂಗಳ, ರಾಜಕಾಲುವೆ, ಬಫರ್ ಜೋನ್‍ಗಳನ್ನು ಒತ್ತವರಿ ಮಾಡಿರುವ ಬಿಲ್ಡರ್ಸ್ ಹಾಗೂ ಇದಕ್ಕೆ ಸಹಕಾರ ನೀಡಿರುವ ಬಿಬಿಎಂಪಿ ಅಧಿಕಾರಿಗಳನ್ನು ಶಿಕ್ಷಿಸಿ ದಂಡಿಸುವ ಕುರಿತಂತೆ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಅಮಾಯಕರಿಗೆ ಯಾವ ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಕುರಿತಂತೆ ಚಿಂತನೆ ನಡೆಯುತ್ತಿದೆ.

ಸಾಧ್ಯಸಾಧ್ಯತೆಗಳನ್ನು ಪರಿಶೀಲಿಸಿ  ಅಮಾಯಕರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ರಾಜಕಾಲುವೆಯನ್ನು ಒತ್ತುವರಿಗೆ ಕಾರಣರಾದವರ ಪತ್ತೆಹಚ್ಚುವ ಕ್ರಮವನ್ನು ತೀವ್ರಗೊಳಿಸಿ ಕಾನೂನು ರೀತಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಲ್ಲದೆ ಇದಕ್ಕೆ ಕಾರಣರಾಗಿರುವ ಬಿಲ್ಡರ್ಸ್‍ಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ಆಸ್ತಿ ಮುಟ್ಟುಗೋಲು ಸೇರಿದಂತೆ ಇನ್ನಿತರ ಕ್ರಮಗಳನ್ನು ಅನುಸರಿಸಲು ಚಿಂತನೆ ನಡೆದಿದೆ ಎಂದರು.  ಇಂತಹ ಪ್ರಕರಣಗಳಲ್ಲಿ ಜನರ ನೋವಿಗೆ ಕಾರಣರಾದ ಅಧಿಕಾರಿ ಹಾಗೂ ಬಿಲ್ಡರ್ಸ್‍ಗಳಲ್ಲಿ 10 ಮಂದಿಗಾದರೂ ಶಿಕ್ಷೆಯಾದರೆ ವ್ಯವಸ್ಥೆ ಸರಿಹೋಗುತ್ತದೆ. ಈ ನಿಟ್ಟಿನಲ್ಲಿ ವರದಿ ನೋಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಗಿರುವ ಒತ್ತುವರಿ, ಒತ್ತುವರಿದಾರರ ಹೆಸರು, ಅವರಿಗೆ ನೀಡಿರುವ ನೋಟಿಸ್, ಅವರಿಂದ ಬಂದ ಉತ್ತರ, ಎಲ್ಲವೂ ಸೆರಿದಂತೆ ಒಟ್ಟು ಎಂಟು ಸಾವಿರ ದಾಖಲೆಗಳಿವೆ. ಈ ಸಂಬಂಧ ಆಡಳಿತ ಯಂತ್ರ ನಿರ್ಧಾರ ಕೈಗೊಳ್ಳಲಿದೆ ಎಂದರು. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸದಿದ್ದಲ್ಲಿ ಸುರಿಯುವ ಭಾರೀ ಮಳೆ ಸಂದರ್ಭದಲ್ಲಿ ಚೆನ್ನೈ ರೀತಿ ಬೆಂಗಳೂರು ಸಹ  ಮುಳುಗಡೆಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಇಂತಹ ಕಠಿಣ ಕ್ರಮಗಳ ಅಗತ್ಯವಿದೆ. ಬಿಬಿಎಂಪಿ ಸೇರಿದಂತೆ ಬಿಡಿಎ ಸಹ ಕೆಲವೆಡೆ ಒತ್ತುವರಿ ಮಾಡಿದೆ.  ಹಾಗಾಗಿ ಎಲ್ಲೆಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ.

ಡಾಲರ್ಸ್ ಕಾಲೋನಿಯಲ್ಲಿ ಕೆರೆ ಅಂಗಳವೇ ಇಲ್ಲದಂತೆ  ಬಿಲ್ಡರ್ಸ್‍ಗಳು ಒತ್ತವರಿ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪನವರಿಗೆ ಸೇರಿದ ನಿವೇಶನವೂ ಇಲ್ಲಿದೆ. ಇದೆಲ್ಲ ಯಾವ ರೀತಿ ನಡೆದಿದೆ. ಯಾವ ರೀತಿಯ ಕ್ರಮ ಕೈಗೊಳ್ಳಬೇಕು, ಇದರಲ್ಲಿ ಅಧಿಕಾರಿಗಳ ಪಾತ್ರವೇನು ಎಂಬ ಎಲ್ಲ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು.  ರಾಜಕಾಲುವೆ, ಕೆರೆಯಂಗಳ, ಬಫರ್ ಜೋನ್ ಸಮೀಕ್ಷೆಯ ಸಮಗ್ರ ವರದಿಯನ್ನು ಕರಡು ಸಮಿತಿ ನೀಡಲಿದ್ದು, ಈಗಾಗಲೇ ಕೆರೆ ಒತ್ತುವರಿ ಕುರಿತಂತೆ ರಚಿಸಲಾಗಿರುವ ಸದನ ಸಮಿತಿಗೆ ವರದಿ ನೀಡಲು ಈ ಕರಡು ಸಮಿತಿಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.  ಕರಡು ಸಮಿತಿ ನೀಡುವ ಸಮೀಕ್ಷೆಯ ಸಮಗ್ರ ವರದಿ ಆಧಾರದ ಮೇಲೆ ಕೆರೆ ಒತ್ತುವರಿಯಾಗಿರುವ ಕುರಿತಂತೆ ವರದಿಯೊಂದನ್ನು ತಯಾರಿಸಿ ಸದನಕ್ಕೆ ನೀಡಲಾಗುವುದು ಎಂದರು.   ಕಾನೂನು ಉಲ್ಲಂಘಿಸಿದ ಬಿಲ್ಡರ್ಸ್ ಮತ್ತು ಅಧಿಕಾರಿಗಳಿಗೆ ಶಿಕ್ಷೆ ಖಚಿತ ಎಂದ ಅವರು, ಒತ್ತುವರಿ ಮಾಡಿರುವ ಕುರಿತಂತೆ ಇನ್ನೆರಡು ತಿಂಗಳಲ್ಲಿ ಪೂರ್ಣ ಮಾಹಿತಿಯನ್ನು ಕೆರೆ ಒತ್ತುವರಿ ಸಮಿತಿ ನೀಡಲಿದೆ ಎಂದ ಅವರು, ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವುದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

Facebook Comments

Sri Raghav

Admin

One thought on “ರಾಜಕಾಲುವೆ ತೆರವಿನಿಂದ ಮನೆ ಕಳೆದುಕೊಂಡಿರುವವರಿಗೆ ಪರ್ಯಾಯ ವ್ಯವಸ್ಥೆಗೆ ಚಿಂತನೆ

  • August 8, 2016 at 8:55 am
    Permalink

    kmkmkmkm

Leave a Comments