ರಾಜಕೀಯ ಜೀವನದ ಪುಟಗಳನ್ನು ತೆರೆದಿಟ್ಟ ಸ್ಪೀಕರ್ ರಮೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--Speaker-1

ಬೆಂಗಳೂರು, ಮೇ 25-ಜನರ ಆದೇಶವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನಕ್ಕೆ ಅಪಚಾರವಾಗದಂತೆ ನಮ್ಮ ಇತಿ-ಮಿತಿಯಲ್ಲಿ ಎಲ್ಲರಿಗೂ ನ್ಯಾಯ ದೊರಕಿಸುವಂತೆ ಕೆಲಸ ಮಾಡುತ್ತೇನೆ. ನೂತನ ಸಭಾಧ್ಯಕ್ಷರಾದ ಕೆ.ಆರ್.ರಮೇಶ್‍ಕುಮಾರ್ ಭರವಸೆ ನೀಡಿದರು. ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಅವರು, ಸದನದ ಅಭಿನಂದನೆ ಸ್ವೀಕರಿಸಿದ ನಂತರ ಮಾತನಾಡಿದರು. ನನ್ನನ್ನು ರಾಜಕೀಯಕ್ಕೆ ಕರೆತಂದದ್ದು ದೇವರಾಜ ಅರಸು ಅವರು. ರಾಜಕೀಯವಾಗಿ ಜನ್ಮ ನೀಡಿದ್ದು ಇಂದಿರಾಗಾಂಧಿಯವರು. ಮೊದಲ ಬಾರಿ ಅವಕಾಶ ಕೊಟ್ಟಿದ್ದು ದೇವೇಗೌಡರು. ರಾಜಕೀಯ ಸಂಸ್ಕಾರವನ್ನು ಹೇಳಿಕೊಟ್ಟಿದ್ದು ಕೆ.ಎಚ್.ರಂಗನಾಥ್ ಅವರು ಎಂದು ಸ್ಮರಿಸಿಕೊಂಡರು.

ಮೊದಲ ಬಾರಿಗೆ ನನ್ನನ್ನು ವಿಧಾನಸಭಾಧ್ಯಕ್ಷರನ್ನಾಗಿ ಮಾಡಿದ್ದು ದೇವೇಗೌಡರು. ಅವರಿಗೆ ನಾನು ಸದಾ ಋಣಿ. ಆ ಕಾಲದಲ್ಲಿ ನನ್ನೊಂದಿಗೆ ಚರ್ಚೆ ಮಾಡಿದ ದೇವೇಗೌಡರು ನಿಮ್ಮನ್ನು ಮಂತ್ರಿ ಮಾಡಬೇಕೆಂಬ ಆಸೆ ಇತ್ತು. ಆದರೆ ನನಗೆ ಒಬ್ಬ ನಂಬಿಕಸ್ಥರು ಬೇಕಿದ್ದಾರೆ. ಹಾಗಾಗಿ ನಿಮ್ನನ್ನು ಸಭಾಧ್ಯಕ್ಷರನ್ನಾಗಿ ಮಾಡುತ್ತಿದ್ದೇನೆ ಎಂಧು ಹೇಳಿದರು. ಈಗಿನ ಪರಿಸ್ಥಿತಿಯಲ್ಲಿ ನನ್ನ ಪಕ್ಷದ ನಾಯಕರು ಅದೇ ಮಾತನ್ನು ಹೇಳಿದ್ದಾರೆ. ಇದುನನ್ನ ಪಾಲಿಗೆ ಸಿಕ್ಕಂತಹ ಗೌರವ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ನನ್ನ ಮೇಲೆ ಅನೇಕ ಹಿರಿಯರ ಪ್ರಭಾವವಿದೆ. ಕೆ.ಎಚ್.ಪಾಟೀಲ್, ಬಸವಲಿಂಗಪ್ಪ, ಅಜೀಜ್ ಸೇಠ್ ಸೇರಿದಂತೆ ಹಲವಾರು ಮಂದಿಯಿಂದ ಕಲಿತಿದ್ದೇನೆ. ಈ ಸದನದಲ್ಲಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರಲ್ಲಿ ನಾನು ಅವರ ತಂದೆ ದಿವಂಗತ ಕೆ.ಎಚ್.ಪಾಟೀಲ್ ಅವರನ್ನುಕಾಣಲು ಪ್ರಯತ್ನ ಪಟ್ಟೆ. ಅದು ಆಗಲಿಲ್ಲ ಎಂದುಸದನದಲ್ಲಿ ನಗುವಿನ ಅಲೆ ಎದ್ದಿತು. ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ಒರಟು ಸ್ವಭಾವದವರು. ಆದರೆ ಮೋಸಗಾರ ಅಲ್ಲ. ನನ್ನ ಒಳ್ಳೆಯತನದಿಂದ ಯಡಿಯೂರಪ್ಪ ಅವರ ಒರಟುತನವನ್ನು ಮೃದು ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದರು. ರಾಜ್ಯ ಜನಸಾಮಾನ್ಯರು ಇಲ್ಲಿ ಬಂದು ತಮ್ಮ ಗೋಳು ಹೇಳಿಕೊಳ್ಳಲು ಆಗ್ಠುqವುದಿಲ್ಲ ಎಂಬ ಕಾರಣಕ್ಕೆ ಕರ್ನಾಟಕವನ್ನು 224 ಕ್ಷೇತ್ರಗಳನ್ನಾಗಿ ವಿಂಗಡಿಸಿ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಅಷ್ಟೂ ಮಂದಿ ಶಾಸಕರು ಜನಪ್ರತಿನಿಧಿಗಳಾಗಬೇಕೇ ಹೊರತು, ಬೇರೆ ಯಾವ ವಿಚಾರಗಳ ಪ್ರತಿನಿಧಿಗಳಾಗಬಾರದು ಎಂದರು.

ಪ್ರಜಾಫ್ರಭುತ್ವಕ್ಕಿಂತ ಮೊದಲುಬಲಾಢ್ಯರು, ಪುಂಡರ ಕೈಲಿ ಆಡಳಿತವಿತ್ತು. ಸ್ಛ್ವಲ್ಪ ಪುಂಡನಾಗಿದ್ದವನು ದೊರೆಯಾಗುತ್ತಿದ್ದ, ಹೆಚ್ಚು ಪುಂಡನಾದವನು ಚಕ್ರಾಧಿಪತಿಯಾಗುತ್ತಿದ್ದ. ಅವರಲ್ಲಿ ಕೆಲವರು ಒಳ್ಳೆಯವರಾಗಿದ್ದರು, ಕೆಲವರು ಕೆಟ್ಟರವರಾಗಿರುತ್ತಿದ್ದರು. ಬ್ರಿಟನ್‍ನಲ್ಲಿ ರಾಜರೊಬ್ಬರು ಐಷಾರಾಮಿ ಜೀವನಕ್ಕಾಗಿ ಹಣ ಬೇಕೆಂದಾಗಲೆಲ್ಲ ಜನರ ಮೇಲೆ ತೆರಿಗೆ ಹಾಕುತ್ತಿದ್ದರು. ಜನ ದಂಗೆ ಎದ್ದರು. ಪ್ರಾತಿನಿಧ್ಯ ಇಲ್ಲದೆ ತೆರಿಗೆ ಹಾಕಬಾರದು ಎಂಬ ಬೇಡಿಕೆ ಮೂಲಕ ಆರಂಭವಾದ ಹೋರಾಟ ಪ್ರಜಾಪ್ರಭುತ್ವಕ್ಕೆ ನಾಂದಿಯಾಯಿತು.

ಭಾರತದಲ್ಲಿ ಯಾವುದೇ ರಕ್ತ ಕ್ರಾಂತಿಯಾಗದೆ ಪ್ರಜಾಪ್ರಭುತ್ವ ಉಳಿಯಲು ಅಂಬೇಡ್ಕರ್ ಅವರ ಸಂವಿಧಾನ ಕಾರಣ ಎಂದು ರಮೇಶ್‍ಕುಮಾರ್ ಹೇಳಿದರು. ಸರ್ಕಾರದ ಹಾದಿ ಚೆನ್ನಾಗಿದೆ, ಪಾರದರ್ಶಕವಾಗಿರಬೇಕು, ಇಲ್ಲಿ ಬರುವ ಶಾಸಕರು ಶ್ರದ್ಧೆ ಮತ್ತು ಶಿಸ್ತಿನಿಂದ ಕಲಾಪದಲ್ಲಿ ಭಾಗವಹಿಸಬೇಕು. ಜನರ ದನಿಯಾಗಬೇಕು. ಕೋರಂ ಕೊರತೆಯಿಂದ ಕಲಾಪ ಆರಂಭಿಸಲು ವಿಳಂಬವಾಗುವ ಸ್ಥಿತಿ ನಿರ್ಮಾಣವಾಗಬಾರದು. ಇಲ್ಲಿ ಶಾಸಕರ ನಡವಳಿಕೆ ಜನರಲ್ಲಿ ಹೆಮ್ಮೆ ತರುವಂತೆ ಇರಬೇಕೇ ಹೊರತು ನಾಚಿಕೆ ಪಡುವಂತಿರಬಾರದು ಎಂದು ಸಲಹೆ ನೀಡಿದರು.

ನಾನು ಹೈಸ್ಕೂಲ್ ಓದಲು ಬೆಂಗಳೂರಿಗೆ ಬಂದವನು, ಕಾಲಿಗೆ ಚಪ್ಪಲಿ ಇರಲಿಲ್ಲ, ಇಂಗ್ಲೀಷ್ ಗೊತ್ತಿರಲಿಲ್ಲ. ಅಣ್ಣ ಕೊಟ್ಟ ಪ್ಯಾಕೆಟ್ ಡಿಕ್ಷನರಿಯಿಂದ ಇಂಗ್ಲೀಷ್ ಕಲಿತುಕೊಂಡೆ . ಸಾರ್ವಜನಿಕ ಜೀವನದಲ್ಲಿ 10 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೆ. ನಾಲ್ಕು ಬಾರಿ ಸೋತಿದ್ದೇನೆ. ಆರುಬಾರಿ ಗೆದ್ದಿದ್ದೇನೆ. ಇಂದು ನನ್ನ ಅವಿರೋಧ ಆಯ್ಕೆಯಾಗುತತದೆ ಎಂಬ ವಿಶ್ವಾಸವಿತ್ತು. ಬಿಜೆಪಿಯ ಯಡಿಯೂರಪ್ಪ ಮತ್ತು ನನ್ನ ನಡುವೆ ಒಂದು ಅಂಡರ್‍ಸ್ಟಾಡಿಂಗ್ ಇದೆ ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು. ಮಾತು ಮೊನಚಾಗಿರಲಿ, ನಿಮ್ಮ ಸಿಟ್ಟು, ಅಸಮಾಧಾನಗಳನ್ನು ಸಂಸದೀಯ ಭಾಷೆಯಲ್ಲೇ ಹೊರಹಾಕಿ ಎಂದುಹೇಳಿದರು.

Facebook Comments

Sri Raghav

Admin