ರಾಜಕೀಯ ಸೇರುವುದು ದೈವೇಚ್ಚೆ : ಕುತೂಹಲ ಹೆಚ್ಚಿಸಿದ ರಜನಿ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Rajni-n

ಚೆನ್ನೈ, ಮೇ 17 -ಕಾಲ ಕೂಡಿ ಬಂದಾಗ ರಾಜಕೀಯ ರಂಗ ಪ್ರವೇಶಿಸುವುದಾಗಿ ಖ್ಯಾತ ಚಿತ್ರನಟ ರಜನಿಕಾಂತ್ ಹೇಳಿದ್ದಾರೆ. ಇದರೊಂದಿಗೆ ತಲೈವಾ ರಾಜಕಾರಣ ಪ್ರವೇಶಿಸುವುದು ಬಹುತೇಕ ನಿಶ್ಚಿತವಾದಂತಾಗಿದೆ.  ಚೆನ್ನೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೂಕ್ತ ಸಮಯದಲ್ಲಿ ಈ ಬಗ್ಗೆ ನಾನು ನಿರ್ಧಾರ ಕೈಗೊಳ್ಳುತ್ತೇನೆ. ಇದಕ್ಕೂ ಮುನ್ನ ನನ್ನ ಅಭಿಮಾನಿಗಳು ಮತ್ತು ಆತ್ಮೀಯರನ್ನು ಭೇಟಿ ಮಾಡಿ ರಾಜಕೀಯ ರಂಗಕ್ಕೆ ಬರುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದರು. ರಾಜಕೀಯ ಸೇರುವುದು ದೈವೇಚ್ಚೆ. ಭಗವಂತನ ಪ್ರೇರಣೆಯಂತೆ ನಾನು ನಡೆದುಕೊಳ್ಳುತ್ತೇನೆ ಎಂದು ರಜನಿ ಪುನರುಚ್ಚರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin