‘ರಾಜಕುಮಾರ’ನನ್ನು ನೋಡಿ ಭಾವುಕರಾದ ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--014

ಬೆಂಗಳೂರು. ಮೇ.26 : ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಮಲ್ಲೇಶ್ವರಂನ ರೇಣುಕಾಂಬ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅಭಿನಯದ ‘ರಾಜಕುಮಾರ’ ಚಿತ್ರವನ್ನು ವೀಕ್ಷಿಸಿದರು. ಗೌಡರ ಜತೆ ಅವರ ಧರ್ಮಪತ್ನಿ ಚೆನ್ನಮ್ಮ ಹಾಗೂ ಚಿತ್ರ ನಿರ್ಮಾಪಕರಾದ ವಿಜಯ್, ಕಾರ್ತಿಕ್ ಸಾಥ್ ನೀಡಿದರು.  ಮೊನ್ನೆ ತಾನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರವನ್ನ ಗೌಡರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಪುನೀತ್ ಅಭಿನಯದ ರಾಜಕುಮಾರ ಚಿತ್ರವನ್ನ ವೀಕ್ಷಿಸಿದ್ದಾರೆ.


ಚಿತ್ರ ವೀಕ್ಷಿಸಿದ ದೇವೇಗೌಡರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂದಿದ್ದಾರೆ. ಕೆಲವು ದೃಶ್ಯಗಳು ತುಂಬಾ ಭಾವುಕವಾಗಿ ಮೂಡಿಬಂದಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.  ‘ರಾಜಕುಮಾರ’ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ತಮಿಳು ನಟ ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ರಂಗಾಯಣ ರಘು, ಚಿಕ್ಕಣ್ಣ, ದತ್ತಣ್ಣ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಮಾರ್ಚ್ 24 ರಂದು ಬಿಡುಗಡೆಯಾಗಿದ್ದ ‘ರಾಜಕುಮಾರ’ 50 ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಳೆದ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ‘ರಾಜಕುಮಾರ’ ಚಿತ್ರವನ್ನ ನೋಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin