“ರಾಜಕುಮಾರ”ನಿಗೆ ಫುಲ್ ಫಿದಾ ಆದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-01

ಬೆಂಗಳೂರು. ಎ.09 : ಕಳೆದ ಕೆಲದಿನಗಳಿಂದ ನಂಜನಗೂಡು- ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಸ್ವಲ್ಪ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು. ಅತ್ತ ಉಪಚುನಾವಣೆ ಮತದಾನ ಡೆಯುತ್ತಿದ್ದರೆ ಇತ್ತ ಸಿಎಂ ಸಿದ್ದರಾಮಯ್ಯ ಪುನೀತ್ ರಾಜ್ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ವೀಕ್ಷಿಸಿದರು.

ಪುನೀತ್ ಅಭಿನಯದ “ರಾಜಕುಮಾರ” ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ಧರಾಮಯ್ಯ. ಪುನೀತ್ ರಾಜಕುಮಾರ್ ನಟನೆಗೆ ಸಿಎಂ ಫುಲ್ ಫೀದಾ ಆದರು. ಸಿನಿಮಾ ಮುಗಿದ ನಂತರ ಪುನೀತ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಸಿಎಂ ಸಿದ್ಧರಾಮಯ್ಯ. ಪುನೀತ್ ನಟನೆಯನ್ನು ಹಾಡಿ ಹೊಗಳಿದರು.  ಮತ್ತೆ ಬೆಳ್ಳಿತೆರೆಯ ಮೇಲೆ ನಟಸಾರ್ವಭೌಮನನ್ನೇ ನೋಡಿದ ಹಾಗೇ ಆಯ್ತು ಎಂಬ ಮೆಚ್ಚುಗೆ ಮಾತನ್ನಾಡಿದ ಸಿಎಂ, ನಾನು ಕೂಡ ಡಾ.ರಾಜಕುಮಾರ್ ಅಭಿಮಾನಿ. ಈ ಚಿತ್ರದಲ್ಲಿ ಪುನೀತ್ ಅವರ ನಟನೆ ಮತ್ತೊಮ್ಮೆ ರಾಜ್ಕುಮಾರ್ ಅವರನ್ನು ನೆನಪಿಸಿತು ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin