ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭಾರೀ ಬೆಂಕಿ ದುರಂತ : ಮೂವರು ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire-at-delhi-m

ನವದೆಹಲಿ, ನ.2-ಭಾರಿ ಅಗ್ನಿ ಆಕಸ್ಮಿಕದಿಂದ ಕನಿಷ್ಠ ಮೂವರು ಸಜೀವ ದಹನಗೊಂಡು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ಇಂದು ಮುಂಜಾನೆ ದೆಹಲಿಯ ಮೋಹನ್ ಪಾರ್ಕ್ ಪ್ರದೇಶದ ಕಟ್ಟಡವೊಂದರಲ್ಲಿ ಸಂಭವಿಸಿದೆ.  ದೆಹಲಿಯ ಈಶಾನ್ಯ ಭಾಗದ ಶಹದಾರಾದ ಮೋಹನ್ ಪಾರ್ಕ್ ಪ್ರದೇಶದ ಮನೆಯೊಂದರಲ್ಲಿ ಇಂದು ಬೆಳಿಗ್ಗೆ 5.06ರಲ್ಲಿ ಬೆಂಕಿ ಕಾಣಿಸಿಕೊಂಡಿತು. ನಂತರ ನಾಲ್ಕು ಅಂತಸ್ತುಗಳ ಕಟ್ಟಡವನ್ನು ಜ್ವಾಲೆ ಆವರಿಸಿತು ಎಂದು ಅಗ್ನಿಶಾಮಕ ಸೇವೆಗಳ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಸುದ್ದಿ ತಿಳಿದ ಕೂಡಲೇ ಐದು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಳಿಗ್ಗೆ 6.30ರಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದರು.

ಈ ದುರಂತದಲ್ಲಿ ಮೂವರು ಸುಟ್ಟು ಕರಕಲಾಗಿದ್ದಾರೆ. ತೀವ್ರ ಗಾಯಗೊಂಡಿರುವ 10 ಮಂದಿಗೆ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  ದೆಹಲಿಯ ವಿವಿಧ ಪ್ರದೇಶಗಳಲ್ಲಿ ಇತ್ತೀಚೆಗೆ ಅಗ್ನಿ ಅವಘಡಗಳು ಸಂಭವಿಸುತ್ತಿದೆ. ಪೊಲೀಸರ ಸಮಯಪ್ರಜ್ಞೆ ಮತ್ತು ಸ್ಥಳೀಯರ ಸಕಾಲಿಕ ನೆರವಿನಿಂದ ದೀಪಾವಳಿ ವೇಳೆ ಸಂಭವಿಸಬಹುದಾಗಿದ್ದ ಘೋರ ಅಗ್ನಿ ದುರಂತವೊಂದು ತಪ್ಪಿ, 27 ಮಂದಿ ಪಾರಾದ ಘಟನೆಯನ್ನು ಇಲ್ಲಿ ಉಲ್ಲೇಖಿಸಬಹುದು.

► Follow us on –  Facebook / Twitter  / Google+

Facebook Comments

Sri Raghav

Admin