ರಾಜಧಾನಿ ದೆಹಲಿಯ ಬೇಕರಿಯೊಂದರಲ್ಲಿ ಸ್ಫೋಟ : ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

blast

ನವದೆಹಲಿ,ಆ.18- ರಾಜಧಾನಿಯ ಪೂರ್ವ ಭಾಗದ ಬೇಕರಿಯೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟು ಹಲವು ಮಂದಿ ತೀವ್ರ ಗಾಯಗೊಂಡಿದ್ದಾನೆ.   ಪೂರ್ವ ದೆಹಲಿಯ ಜಗತ್ಪುರ್ ಪ್ರದೇಶದ ಅಫ್ಲಾಟೂನ್ ಮಾರುಕಟ್ಟೆಯ ಬೇಕರಿಯ ಸ್ಟೀಲ್ ಓವನ್ ಇಂದು ಮುಂಜಾನೆ 5.20ರಲ್ಲಿ ಸ್ಫೋಟಗೊಂಡು, ಬೆಂಕಿಯ ಜ್ವಾಲೆ ಭುಗಿಲೆದ್ದು , ಈ ದುರಂತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.   ಸುದ್ದಿ ತಿಳಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದರು.   ಆರು ಮಂದಿ ಗಾಯಾಳುಗಳನ್ನು ಹೆಗ್ಡೆವಾರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin