ರಾಜಸ್ತಾನದ ಆಸ್ಪತ್ರೆಯಲ್ಲೂ 49 ನವಜಾತ ಮಕ್ಕಳ ಮಾರಣ ಹೋಮ

ಈ ಸುದ್ದಿಯನ್ನು ಶೇರ್ ಮಾಡಿ

Baby

ಫರೂಕಾಬಾದ್, ಸೆ.2-ಉತ್ತರಪ್ರದೇಶದ ಆಸ್ಪತ್ರೆಗಳಲ್ಲಿ ಮಕ್ಕಳ ಸರಣಿ ಸಾವಿನ ಪ್ರಕರಣಗಳು ಮುಂದುವರಿದಿದ್ದು, ಫರೂಕಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಲ್ಲಿ 49 ನವಜಾತ ಶಿಶುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.  ಸರ್ಕಾರಿ ಒಡೆತನದ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯರ ಪಕಾರ, ಈ ಕಂದಮ್ಮಗಳ ಸಾವಿಗೆ ಮುಖ್ಯ ಕಾರಣ ಶಿಶುಗಳು ಜನಿಸುವಾಗ ತೀರಾ ಕಡಿಮೆ ತೂಕ ಹೊಂದಿದ್ದು, ಗಂಭೀರ ಸ್ಥಿತಿಯಲ್ಲಿದ್ದವು. ಅಲ್ಲದೇ ತುಂಬಾ ತಡವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

30 ಮಕ್ಕಳು ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿವೆ. ಇತರ 19 ಶಿಶುಗಳು ಹೆರಿಗೆ ಸಂದರ್ಭದಲ್ಲಿ ಅಥವಾ ಹೆರಿಗೆಯಾದ ನಂತರ ಕೆಲವೇ ಗಂಟೆಗಳಲ್ಲಿ ಅಸುನೀಗಿವೆ ಎಂದು ಮೂಲಗಳು ಹೇಳಿವೆ.  ಮಕ್ಕಳ ಸಾವಿನ ಬಗ್ಗೆ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ತನಿಖೆಗೆ ಆದೇಶ ನೀಡಿದ್ದಾರೆ.  ಉತ್ತರಪ್ರದೇಶದ ಗೋರಖ್‍ಪುರ್‍ನ ಬಿಆರ್‍ಡಿ ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಮಕ್ಕಳು ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕಿನಿಂದ ಮೃತಪಟ್ಟು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕಳಂಕ ತಂದಿರುವಾಗಲೇ ಫರೂಕಾಬಾದ್ ಆಸ್ಪತ್ರೆಯಲ್ಲಿ 49 ಕಂದಮ್ಮಗಳು ಬಲಿಯಾಗಿರುವುದು ಮತ್ತಷ್ಟು ತೊಡಕಾಗಿ ಪರಿಣಮಿಸಿದೆ.

ರಾಜಸ್ತಾನದಲ್ಲಿ 86 ಮಕ್ಕಳ ಬಲಿ : ರಾಜಸ್ತಾನದ ಬನಸ್ವಾರ್ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿನಿಂದ 86 ಶಿಶುಗಳು ಮೃತಪಟ್ಟಿವೆ. ಇವುಗಳಲ್ಲಿ 37 ಮಕ್ಕಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin