ರಾಜಸ್ತಾನ, ಪಶ್ಚಿಮ ಬಂಗಾಳದಲ್ಲಿ ಉಪ ಚುನಾವಣೆ ಶಾಂತಿಯುತ

ಈ ಸುದ್ದಿಯನ್ನು ಶೇರ್ ಮಾಡಿ

Punjab-Votong-01

ಜೈಪುರ/ಕೋಲ್ಕತಾ, ಜ.29-ರಾಜಸ್ತಾನ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಕೆಲವು ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದ ಉಪ ಚುನಾವಣೆ ಶಾಂತಿಯುತವಾಗಿತ್ತು. ರಾಜಸ್ತಾನದ ಅಜ್ಮೀರ್ ಮತ್ತು ಅಲ್ವಾರ್ ಲೋಕಸಭಾ ಕ್ಷೇತ್ರಗಳು ಹಾಗೂ ಮಂಡಲ್‍ಗಢ್ ವಿಧಾನಸಭಾ ಕ್ಷೇತ್ದ ಉಪ ಚುನಾವಣೆಗೆ ಬೆಳಗಿನಿಂದಲೇ ಬಿರುಸಿನ ಮತದಾನವಾಗಿದೆ. ಈ ವರ್ಷ ರಾಜಸ್ತಾನದಲ್ಲಿ ನಡೆಯುವ ವಿಧಾನಸಭೈ ಚುನಾವಣೆಗೆ ಸೆಮಿಫೈನಲ್ಸ್ ಎಂದೇ ಪರಿಗಣಿತವಾಗಿರುವ ಈ ಮೂರು ಕ್ಷೇತ್ರಗಳ ಚುನಾವಣೆ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೆ ಸತ್ವ ಪರೀಕ್ಷೆಯಾಗಿದೆ.

ಪಶ್ಚಿಮ ಬಂಗಾಳದ ಉಲುಬೆರಿಯಾ ಲೋಕಸಭೆ ಮತ್ತು ನೋವಾಪಾರಾ ವಿಧಾನಸಭೆಗೆ ಇಂದು ಉಪ ಚುನಾವಣೆ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಚಳಿಯನ್ನು ಲೆಕ್ಕಿಸದೇ ಮತದಾರರು ಉದ್ದನೆ ಸಾಲುಗಳಲ್ಲಿ ನಿಂತ ತಮ್ಮ ಮತಗಳನ್ನು ಚಲಾಯಿಸುತ್ತಿದ್ದ ದೃಸ್ಯ ಮತಕೇಂದ್ರಗಳ ಬಳಿ ಕಂಡು ಬಂದಿತು.
ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.

Facebook Comments

Sri Raghav

Admin