ರಾಜೀವ್‍ಗಾಂಧಿ -ದೇವರಾಜ ಅರಸ್ ಉತ್ತಮ ಜನನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

devaraju--arasu

ಚಿತ್ರದುರ್ಗ,ಆ.22-ದೇಶದ ಪ್ರಧಾನ ಮಂತ್ರಿಯಾಗಿ ರಾಜೀವಗಾಂಧಿ, ರಾಜ್ಯದ ಮುಖ್ಯಮಂತ್ರಿಯಗಿ ದೇವರಾಜ್ ಅರಸ್‍ರವರು ಉತ್ತಮ ಜನೋಪಯೋಗಿ ಕಾರ್ಯಕ್ರಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಮರಣೆ ಅಗತ್ಯವಾಗಿದೆ ಎಂದು ಸಂಸದ ಬಿ.ಎನ್.ಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.ಜಿಲ್ಲಾ ಕಾಂಗ್ರೆಸ ಸಮಿತಿ ಹಿಂದುಳಿದ ವರ್ಗಗಳ ವಿಭಾಗದಿಂದ ಕಾಂಗ್ರೆಸ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ದಿ. ಮಾಜಿ ಪ್ರಧಾನಿ ರಾಜೀವ್‍ಗಾಂಧಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜಅರಸುರವರ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ರಾಜೀವಗಾಂಧಿಯವರು ದೇಶದ ಪ್ರಧಾನ ಮಂತ್ರಿಯಾದಾಗ ವಿರೋಧ ಪಕ್ಷಗಳು ಟೀಕೆ ಮಾಡುವ ಮೂಲಕ ವಿಮಾನವನ್ನು ನಡೆಸಬಲ್ಲವನು ದೇಶವನ್ನು ಯಾವ ರೀತಿ ಮುನ್ನೆಡೆಸಬಲ್ಲ ಎಂದು ಟೀಕೆ ಮಾಡಿದರು. ಪ್ರದಾನಿಯಾಗಿ 6 ತಿಂಗಳಾದ ಮೇಲೆ ಅದೇ ವಿರೋಧ ಪಕ್ಷದವರು ರಾಜೀವಗಾಂಧಿಯವರ ಕಾರ್ಯ ವೈಖರಿ ನೋಡಿ ಉತ್ತಮ ಆಡಳಿತ ಎಂದು ಒಪ್ಪಿಕೊಂಡರು ಎಂದರು.ಈಗ ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ, ಫೋನ್ ಗಳು  ಹರಿದಾಡುತ್ತಿದೆ ಇಂದು ರಾಜೀವ್‍ಗಾಂಧಿಯವರ ಕೊಡುಗೆ ಕಾರಣ. ದೇಶವನ್ನು ತಂತ್ರಜ್ಞಾನದಲ್ಲಿ ಅತಿ ಎತ್ತರಕ್ಕೆ ಕೊಂಡೊಯ್ಯುವ ಮಹದಾಸೆ ಇಟ್ಟುಕೊಂಡಿದ್ದರು. ಎಲ್ಲಾ ಪಕ್ಷದವರಿಗೂ ಅವರು ಮಾದರಿಯಾಗಿದ್ದರು ಎಂದರು. ಡಿ.ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರಕಿಸಿ ಸಾಮಾಜಿಕ ಹರಿಕಾರ ಎಂದೇ ಹೆಸರು ಪಡೆದಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಡವರು, ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿದ್ದಾರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸದೃಢವಾಗಿದೆ ಮುಂದೆಯೂ ಸಿದ್ದರಾಮಯ್ಯನವರೆ ರಾಜ್ಯದ ಮುಖ್ಯಮಂತ್ರಿಗಳು ಎಂದು ಭವಿಷ್ಯ ನುಡಿದರು.ವಿಧಾನ ಪರಿಷತ ಸದಸ್ಯೆ ಜಯಮ್ಮ ಬಾಲರಾಜ ಮಾತನಾಡಿ ಇಂದಿರಾಗಾಂಧಿ ದೇಶಕ್ಕೆ ಕೊಡುಗೆಯಾಗಿ ನೀಡಿದ 20 ಅಂಶಗಳ ಕಾರ್ಯಕ್ರಮವನ್ನು ರಾಜ್ಯದ ಜನತೆಗೆ ಡಿ.ದೇವರಾಜ ಅರಸು ನೀಡಿದ್ದರು. ಅಂತಹ ಮಹಾನ್ ನಾಯಕನನ್ನು ಎಲ್ಲರೂ ನೆನಪಿಸಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಕಾಂಗ್ರೆಸ್ ಮುಖಂಡರದ ಆರ್.ಕೆ.ನಾಯ್ಡು, ಕೆ.ಪಿ.ಸಂಪತ್‍ಕುಮಾರ, ಬಿ.ಜಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಹೆಚ್.ಎನ್.ಮಂಜುನಾಥಗೊಪ್ಪೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ಟಿ.ಜಗದೀಶ , ಜಿಲ್ಲಾ ಕಾಂಗ್ರೆಸ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲರಾಜ, ಜಿಲ್ಲಾ ಕಾಂಗ್ರೆಸ  ಉಪಾಧ್ಯಕ್ಷೆ ನಜ್ಮತಾಜ ಮುಂತಾದವರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin