ರಾಜೀವ್ ಮಹರ್ಷಿಗೆ ಸಿಎಜಿ ಹುದ್ದೆ, ಸುನಿಲ್ ಅರೋರಾ ಚುನಾವಣಾ ಆಯುಕ್ತ

ಈ ಸುದ್ದಿಯನ್ನು ಶೇರ್ ಮಾಡಿ

Rajeev-aroara

ನವದೆಹಲಿ, ಸೆ.1-ಗೃಹ ಕಾರ್ಯದರ್ಶಿಯಾಗಿ ನಿವೃತ್ತರಾಗುತ್ತಿರುವ ರಾಜೀವ್ ಮಹರ್ಷಿ ಅವರನ್ನು ಭಾರತ ನೂತನ ಲೆಕ್ಕಪರಿಶೋಧನೆ ನಿಯಂತ್ರಕರು ಮತ್ತು ಮಹಾಲೇಖಪಾಲರ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್-ಸಿಎಜಿ) ಹುದ್ದೆಗೆ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ಇತರ 17 ಉನ್ನತಾಧಿಕಾರಿಗಳ ಹೊಣೆಗಾರಿಕೆಯನ್ನೂ ಪುನರ್ರಚಿಸಿದೆ. ಚುನಾವಣಾ ಆಯೋಗದ ಆಯುಕ್ತರ ಹುದ್ದೆಯನ್ನು ಭರ್ತಿ ಮಾಡಿರುವ ಸರ್ಕಾರ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಾಜಿ ಕಾರ್ಯದರ್ಶಿ ಸುನಿಲ್ ಅರೋರಾ ಅವರನ್ನು ಆ ಸ್ಥಾನಕ್ಕೆ ನೇಮಿಸಿದೆ.

ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಕುಮಾರ್ ಅವರನ್ನು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಲಾಗಿದೆ. ಸಿಬಿಎಸ್‍ಇ ಅಧ್ಯಕ್ಷರಾಗಿ ಅನಿತಾ ಕರ್ವಾಲ್ ನೇಮಕಗೊಂಡಿದ್ದಾರೆ.

Facebook Comments

Sri Raghav

Admin