ರಾಜ್ಯಕ್ಕಾಗಮಿಸುತ್ತಿರುವ ಅಮಿತ್ ಷಾ ಅವರ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah-BJP

ಬೆಂಗಳೂರು,ಆ.11-ಮೂರು ದಿನಗಳ ಪ್ರವಾಸಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಗರಕ್ಕೆ ಆಗಮಿಸುತ್ತಿದ್ದು , ಅವರು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕೋರ್ ಕಮಿಟಿ ಸದಸ್ಯರು, ನಾಡಿನ ವಿವಿಧ ಮಠಾಧೀಶರು, ವಿಚಾರವಾದಿಗಳು ಸೇರಿದಂತೆ ಹಲವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಅಮಿತ್ ಷಾ ಅವರ ಕಾರ್ಯಕ್ರಮಗಳ ಪಟ್ಟಿ ಈ ಕೆಳಕಂಡಂತಿದೆ:

ಬೆಳಗ್ಗೆ 10.40 ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ.
10.45ಕ್ಕೆ ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿ ಪ್ರಮುಖರಿಂದ ಸ್ವಾಗತ.
11 ಗಂಟೆಗೆ ಟೋಲ್‍ಗೇಟ್ ಬಳಿ ಕಾರ್ಯಕರ್ತರಿಂದ ಭವ್ಯ ಸ್ವಾಗತ.
11.30ಕ್ಕೆ ಸಾರ್ವಜನಿಕ ಸಮಾವೇಶ.
ಮಧ್ಯಾಹ್ನ 1 ಗಂಟೆಗೆ ಮಲ್ಲೇಶ್ವರಂನ ಬಿಜೆಪಿ ಕಾರ್ಯಾಲಯಕ್ಕೆ ಆಗಮನ. ಗ್ರಂಥಾಲಯ ಉದ್ಘಾಟನೆ
2ರಿಂದ 3.30 ಶಾಸಕರು, ವಿಧಾನ ಪರಿಷತ್ ಸದಸ್ಯರ ಜೊತೆ ಸಭೆ.
3ರಿಂದ 4.30 ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಮಾಲೋಚನೆ ಸಭೆ
6.30ರಿಂದ 8 ಐಟಿಸಿ ಗಾರ್ಡೇನಿಯಾದಲ್ಲಿ ಬರಹಗಾರರು, ಚಿಂತಕರು, ಸಾಹಿತಿಗಳು, ಕೈಗಾರಿಕೋದ್ಯಮಿಗಳು, ವೈದ್ಯರು ಸೇರಿದಂತೆ ವಿಚಾರವಾದಿಗಳ ಜೊತೆ ಚಿಂತನಮಂಥನ.
ಸಂಜೆ ಕುಮಾರಕೃಪ ಅತಿಥಿ ಗೃಹದಲ್ಲಿ ವಿಶ್ರಾಂತಿ.

ಭಾನುವಾರದ ಕಾರ್ಯಕ್ರಮ :
11.30ಕ್ಕೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಕ್ಕೆ ಭೇಟಿ.
12 ಗಂಟೆ ಬಾಲಗಂಗಾಧರನಾಥ ಶ್ರೀಗಳ ಕುರಿತ ಸ್ಟೋರಿ ಆಫ್ ಗುರು ಪುಸ್ತಕ ಬಿಡುಗಡೆ.
1.30ರಿಂದ 2.30 ನಿರ್ಮಲಾನಂದನಾಥ ಶ್ರೀಗಳ ಜೊತೆ ಮಾತುಕತೆ
2.30ರಿಂದ 3.30 ಆದಿಚುಂಚನಗಿರಿಯ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ.
4.30ಕ್ಕೆ ಜಿಂದಾಲ್‍ನಲ್ಲಿ ಪಕ್ಷದ ಜಿಲ್ಲಾ ಮುಖಂಡರ ಭೇಟಿ
7 ಗಂಟೆಗೆ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲೀವಿಂಗ್‍ನ ಶ್ರೀ ರವಿಶಂಕರ್ ಗುರೂಜಿ ಹಾಗೂ ಆಶೀರ್ವಾದ.

ಸೋಮವಾರ 10 ಗಂಟೆಗೆ ಆರ್‍ಎಸ್‍ಎಸ್ ಮುಖಂಡರ ಭೇಟಿ
ಮಧ್ಯಾಹ್ನ 1.30 ಹೋಟೆಲ್ ತಾಜ್ ವೆಸ್ಟೆಂಡ್‍ನಲ್ಲಿ ಪತ್ರಿಕಾಗೋಷ್ಠಿ.
3ರಿಂದ 5 ಗಂಟೆ ಎಸ್ಸಿ-ಎಸ್ಟಿ , ಒಬಿಸಿ ಸೇರಿದಂತೆ ವಿವಿಧ ಮುಖಂಡರ ಜೊತೆ ಸಮಾಲೋಚನಾ ಸಭೆ.
7.30ಕ್ಕೆ ದೆಹಲಿಗೆ ನಿರ್ಗಮನ

Facebook Comments

Sri Raghav

Admin