ರಾಜ್ಯ ವಿಧಾನಸಭಾ ಚುನಾವಣೆ : ಮತದಾನದ Live Updates (64% Voting@5pm)

ಈ ಸುದ್ದಿಯನ್ನು ಶೇರ್ ಮಾಡಿ

Voting-Youth
ಬೆಂಗಳೂರು, ಮೇ12-ರಾಜ್ಯದ ಮುಂದಿನ ಐದು ವರ್ಷಗಳ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿರುವ 15ನೇ ವಿಧಾನಸಭೆ ಚುನಾವಣೆಗೆ ಇಂದು ನಡೆದ ಮತದಾನದ ವೇಳೆ ಕೆಲವು ಸಣ್ಣಪುಟ್ಟ ಘಟನೆ ಹೊರತುಪಡಿಸಿ ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಸೇರಿದಂತೆ ಕಾಂಗ್ರೆಸ್, ಬಿಜೆಪಿ ,ಜೆಡಿಎಸ್ ಪಕ್ಷಗಳ ಅನೇಕ ನಾಯಕರ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.

ಕಣದಲ್ಲಿ ಬಿಜೆಪಿ 222, ಕಾಂಗ್ರೆಸ್ 222, ಜೆಡಿಎಸ್ 201, ಬಿಎಸ್‍ಪಿ 18, ಸಿಪಿಐಎಂ 19, ಎನ್‍ಸಿಪಿ 14, ಪಕ್ಷೇತರರು 1155 ಸ್ಪರ್ಧಾ ಕಣದಲ್ಲಿದ್ದಾರೆ. ಇದರಲ್ಲಿ ಪುರುಷರು 2436 ಹಾಗೂ ಮಹಿಳೆ 219 ಸೇರಿದಂತೆ ಒಟ್ಟು ಕಣದಲ್ಲಿ 2655 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.  ಇದೇ ಮೊದಲ ಬಾರಿಗೆ ಮತದಾರರು ತಾವು ಚಲಾಯಿಸಿದ ಮತದಾನವನ್ನು ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್ ಕೂಡ ಅಳವಡಿಸಲಾಗಿತ್ತು.

CM

ಶಾಂತಿಯುತ ಮತದಾನ:
224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ವಿಧಾನಸಭಾ ಕ್ಷೇತ್ರಗಳಲ್ಲಿ (ಜಯನಗರ ಮತ್ತು ರಾಜರಾಜೇಶ್ವರಿ ನಗರ) ಹೊರತುಪಡಿಸಿ ಮತದಾನದ ವೇಳೆ ಅಲ್ಲಲ್ಲಿ ವಿದ್ಯುನ್ಮಾನ ಯಂತ್ರಗಳ ತಾಂತ್ರಿಕ ಗೊಂದಲ, ಕಾರ್ಯಕರ್ತರ ನಡುವೆ ಘರ್ಷಣೆ, ನಕಲಿ ಮತದಾನಕ್ಕೆ ಯತ್ನ ಸೇರಿದಂತೆ ಬಹುತೇಕ ಕಡೆ ಮತದಾನ ಶಾಂತಿಯುತವಾಗಿ ನಡೆದಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನಕ್ಕೆ ಪ್ರಾರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. ಎಲ್ಲೆಡೆ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ದೃಶ್ಯ ಎಲ್ಲೆಡೆ ಕಂಡುಬಂದಿತು.

Kubli

ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಳ್ಳಾರಿ, ಕಲ್ಬುರ್ಗಿ ಸೇರಿದಂತೆ ಬಹುತೇಕ ಎಲ್ಲ ಕಡೆ ನಿರೀಕ್ಷೆಗೂ ಮೀರಿದ ಮತದಾನವಾಗಿದೆ. ನಿನ್ನೆ ರಾಜ್ಯದ ನಾನಾ ಕಡೆ ಮಳೆಯಾಗಿದ್ದರಿಂದ ಮತದಾನಕ್ಕೆ ಅಡ್ಡಿಯಾಗಬಹುದೆಂಬ ಆತಂಕ ಎದುರಾಗಿತ್ತು. ಆದರೆ ಚಿಕ್ಕೋಡಿಯಲ್ಲಿ ಬೆಳಗ್ಗೆ ಜಿಟಿಜಿಟಿ ಮಳೆಯಾಯಿತಾದರೂ 9 ಗಂಟೆಯ ನಂತರ ಮತದಾನ ಪ್ರಾರಂಭವಾಯಿತು. ಉಳಿದಂತೆ ಮತದಾನಕ್ಕೆ ವರುಣಾನ ಅಡ್ಡಿಯಾಗಿರುವ ಎಲ್ಲಿಯೂ ವರದಿಯಾಗಿಲ್ಲ.

ಕೈ ಕೊಟ್ಟ ಮತಯಂತ್ರ:
ಕೆಲವು ಕಡೆ ವಿದ್ಯುನ್ಮಾನ ಯಂತ್ರ ಆರಂಭದಲ್ಲಿ ಮತದಾನಕ್ಕೆ ಅಡ್ಡಿಯಾಯಿತು. ಹಾಸನ ಜಿಲ್ಲೆ ಹೊಳೆನರಸೀಪುರದ ಪಡವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಕುಟುಂಬ ಸಮೇತ ಮತ ಚಲಾಯಿಸಲು ಹೋದಾಗ ತಾಂತ್ರಿಕ ದೋಷ ಕಂಡುಬಂದಿತು.  ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಕೂಡಲೇ ಮತಯಂತ್ರವನ್ನು ಬದಲಾಯಿಸಿದರು. ಮತಗಟ್ಟೆ ಸಂಖ್ಯೆ 197ರಲ್ಲಿ ಮತದಾನ ಮಾಡಲು ಬಂದ ವೇಳೆ ಇವಿಎಂ ಕೆಲ ಕಾಲ ಕೈ ಕೊಟ್ಟಿತು. ಬಳಿಕ ಗೌಡರು ತಮ್ಮ ಹಕ್ಕು ಚಲಾಯಿಸಿದರು.  ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ಹುಬ್ಬಳ್ಳಿಯ ಬೂತ್ ನಂ. 108ರಲ್ಲಿ ಮತದಾನ ಮಾಡಲು ಬಂದ ವೇಳೆ ಮತಯಂತ್ರ ಕೈ ಕೊಟ್ಟಿದ್ದರಿಂದ ಸುಮಾರು 20 ನಿಮಿಷಗಳ ಕಾಲ ಸರದಿಯಲ್ಲೇ ನಿಲ್ಲಬೇಕಾಯಿತು.   ನರಗುಂದದ ಮತಗಟ್ಟೆ 73ರಲ್ಲಿ ಇವಿಎಂ ಕೈ ಕೊಟ್ಟ ಕಾರಣ ಮತದಾನ ಅರ್ಧಗಂಟೆ ತಡವಾಗಿ ಆರಂಭವಾಯಿತು. ಇದರಿಂದ ಮತದಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಮತಗಟ್ಟೆ 63ರಲ್ಲಿ ಮತಯಂತ್ರ ಕೈ ಕೊಟ್ಟಿದ್ದರಿಂದ ಮತದಾನ ತಡವಾಗಿ ಪ್ರಾರಂಭವಾಯಿತು. ಹುಬ್ಬಳ್ಳಿಯ ಮತಗಟ್ಟೆ 185ರಲ್ಲಿ ಇವಿಎಂ ಜೊತೆಗೆ ವಿವಿಪ್ಯಾಟ್ ಕೂಡ ತಾಂತ್ರಿಕ ತೊಂದರೆಗೊಳಗಾಗಿದ್ದರಿಂದ ಮತದಾನ ವಿಳಂಬವಾಯಿತು.  ಮಾನ್ವಿ ತಾಲ್ಲೂಕಿನ ಜಕ್ಕಲದಿಣ್ಣೆ ಗ್ರಾಮದ ಮತಗಟ್ಟೆಯಲ್ಲಿ ಇವಿಎಂನಲ್ಲಿ ಇನ್‍ವ್ಯಾಲಿಡ್(ಅನರ್ಹ) ಎಂಬ ದೋಷ ಕಂಡುಬಂದಿತು. ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 119ರಲ್ಲೂ ತಾಂತ್ರಿಕ ದೋಷ ಉಂಟಾಗಿ ಮತದಾನ ವಿಳಂಬವಾಯಿತು.   ರಾಯಚೂರಿನ ಲಿಂಗಸೂರಿನ ಕಡದರಗಡ್ಡಿ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಬೇಕೆಂಬ ಬೇಡಿಕೆಗೆ ಜನಪ್ರತಿನಿಧಿಗಳು ಸ್ಪಂದಿಸದ ಕಾರಣ ಮತದಾರರು ಮತದಾನವನ್ನೇ ಬಹಿಷ್ಕರಿಸಿದ್ದಾರೆ.

ಮತದಾನ ನಡೆಸುವಂತೆ ಚುನಾವಣಾಧಿಕಾರಿಗಳು ಅಲ್ಲಿನ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.  ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ ಅವರಿಗೆ ರಕ್ತದೊತ್ತಡ ಉಂಟಾಗಿ ಮತಗಟ್ಟೆಯಿಂದಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಮನಗರದ ಹನುಮಂತನಗರ ಮತಗಟ್ಟೆ ಸಂಖ್ಯೆ 74ಎ ನಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಪ್ರಮುಖ ಪಕ್ಷವೊಂದರ ಕಾರ್ಯಕರ್ತರನ್ನು 50 ಸಾವಿರ ನಗದು ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.   ಚಿಕ್ಕಮಗಳೂರು ಜಿಲ್ಲೆಯ ಮೂಡಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಮತ ಚಲಾಯಿಸಲು ಬಂದಿದ್ದರು. ಆದರೆ ಇವಿಎಂ ಕೈಕೊಟ್ಟಿದ್ದರಿಂದ 20 ನಿಮಿಷ ಸರದಿಯಲ್ಲೇ ನಿಲ್ಲಬೇಕಾಯಿತು.

ಹೊಸಕೋಟೆಯಲ್ಲಿ ಮತ ಚಲಾಯಿಸಲು ಮತದಾರರು ಮತಗಟ್ಟೆಗೆ ಬಂದಿದ್ದರು. ಆದರೆ ಇವಿಎಂಗಳು ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಜನರು ಬೇಸತ್ತು ಹಿಂತಿರುಗಿರುವ ಘಟನೆಯೂ ನಡೆಯಿತು. ಬಳಿಕ ಚುನಾವಣಾ ಸಿಬ್ಬಂದಿಗಳು ಮನವೊಲಿಸುವಲ್ಲಿ ಪ್ರಯತ್ನಿಸಿದರಾದರೂ ಕೆಲವರು ಮತ ಚಲಾಯಿಸಿದರೆ, ಇನ್ನು ಕೆಲವರು ಮತದಾನ ಮಾಡದೇ ವಾಪಸ್ ಹೋದರು.

ಸಣ್ಣಪುಟ್ಟ ಗಲಾಟೆ:
ಇನ್ನು ಉಳಿದಂತೆ ಬಹುತೇಕ ಕಡೆ ಪ್ರಮುಖ ಪಕ್ಷಗಳ ಕಾರ್ಯಕರ್ತರ ನಡುವೆ ಅಲ್ಲಲ್ಲಿ ತಳ್ಳಾಟ, ನೂಕಾಟ, ಆರೋಪ, ಪ್ರತ್ಯಾರೋಪಗಳು ನಡೆದಿವೆ.

ರಾಜ್ಯದ ಒಂದೆರಡು ಕಡೆ ಇಂದೂ ಸಹ ಮತಗಳಿಸಲು ಹಣ ಹಂಚಿ ಆಮಿಷ

ಬೆಂಗಳೂರು, ಮೇ 12- ಮತಗಳಿಸಲು ಹಣ ಹಂಚಿ ಆಮಿಷ ಒಡ್ಡುವ ಪ್ರಕ್ರಿಯೆ ಮತದಾನದ ದಿನವೂ ಮುಂದುವರೆದಿದ್ದು, ರಾಜ್ಯದ ಒಂದೆರಡು ಕಡೆ ಇಂದೂ ಸಹ ಮತದಾರರಿಗೆ ಹಣ ಹಂಚಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಲಬುರ್ಗಿಯ ಬಸವನಗರದಲ್ಲಿ ಮಹಿಳಾ ಸಂಘಗಳಿಗೆ 10ಸಾವಿರ ರೂ.ನಂತೆ ರಾಜಕೀಯ ಪಕ್ಷವೊಂದರಿಂದ ಹಣ ಹಂಚಲಾಗುತ್ತಿತ್ತು. ಇದನ್ನು ಕಂಡ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ರಾಯಚೂರಿನ ಹಟ್ಟಿ ಚಿನ್ನದ ಗಣಿಯ ಕಾರ್ಮಿಕರಿಗೆ ಹಣ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆಯ ಆಜಾದ್‍ನಗರದಲ್ಲಿ ಮತದಾರರಿಗೆ 500ರೂ. ಹಂಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚ್ಚುತ್ತಿದ್ದ ಬಗ್ಗೆ ಆಕ್ರೋಶಕೊಂಡ ಇತರೆ ಪಕ್ಷಗಳ ಕಾರ್ಯಕರ್ತರು ವಿರೋಧಿಸಿದ್ದಾರೆ.

eesanje

WhatsApp Image 2018-05-12 at 1.06.38 PM

WhatsApp Image 2018-05-12 at 1.06.43 PM

WhatsApp Image 2018-05-12 at 12.56.15 PM

 

WhatsApp Image 2018-05-12 at 1.00.43 PM

WhatsApp Image 2018-05-12 at 12.52.00 PM

# ಆ್ಯಂಬುಲೆನ್ಸ್‍ನಲ್ಲಿ ತೆರಳಿ ಮತದಾನ ಮಾಡಿದ ಹಲ್ಲೆಗೊಳಗಾಗಿದ್ದ ಬಿಜೆಪಿಯ ಬಂಡಾಯ ಅಭ್ಯರ್ಥಿ

Mysuru
ಮೈಸೂರು, ಮೇ 12- ಕೆ.ಆರ್.ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವೆಂಕಟೇಶ್ ಅವರು ಆ್ಯಂಬುಲೆನ್ಸ್‍ನಲ್ಲಿ ಬಂದು ಮತಚಲಾಯಿಸಿದರು. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿರುವ ಹೊಸಹಳ್ಳಿ ವೆಂಕಟೇಶ್ ಗುರುವಾರ ರಾತ್ರಿ ಪ್ರಚಾರ ಮುಗಿಸಿ ಹಿಂದಿರುಗುವಾಗ ಹಲ್ಲೆಗೊಳಗಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ವೆಂಕಟೇಶ್ ಇಂದು ಬೆಳಗ್ಗೆ ಮತದಾನಕ್ಕಾಗಿ ಕೆ.ಆರ್.ನಗರದ ಸ್ವಗ್ರಾಮ ಹೊಸಹಳ್ಳಿಗೆ ಆ್ಯಂಬುಲೆನ್ಸ್‍ನಲ್ಲಿ ತೆರಳಿ ಮತದಾನ ಮಾಡಿದರು.

# ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..!

ಬೆಂಗಳೂರು, ಮೇ 12- ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..! ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ಖಾತರಿಪಡಿಸಿಕೊಂಡ ಮತದಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. ಇಂದು ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರಗಳ ಬಟನ್ ಒತ್ತಿದ ಕೂಡಲೇ ತಾವು ಯಾರಿಗೆ ಮತ ಒತ್ತಿದ್ದೇವೆ ಎಂಬ ಗುರುತು ಪಕ್ಕದ ವಿವಿ ಪ್ಯಾಟ್‍ನಲ್ಲಿ 7 ಸೆಕೆಂಡ್‍ಗಳ ಕಾಲ ಬಂತು. ಯಾರಿಗೆ ಬಂತು, ಅದನ್ನು ಕಂಡ ಕೂಡಲೇ ಮೊಗದಲ್ಲಿ ಸಂತಸದ ವಾತಾವರಣ ಮೂಡಿತ್ತು. ಮೊದಲ ಬಾರಿ ಇಂತಹ ಯಂತ್ರಗಳನ್ನು ಕಂಡು ಮತದಾರರು ಬಹಳ ಖುಷಿಯಾಗಿದ್ದರು. ಕಾಲಕ್ರಮೇಣ ಸುಧಾರಣೆಯಾಗುತ್ತಿರುವ ಚುನಾವಣಾ ಪದ್ಧತಿಗಳ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಮತಗಟ್ಟೆಗಳ ಮುಂದೆ ಚುನಾವಣಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡುತ್ತಿದ್ದರು.

ತುಂಬ ಚೆನ್ನಾಗಿದೆ. ನಾವು ಯಾರಿಗೆ ಮತ ಹಾಕಿದ್ದೇವೆ ಎಂಬುದು ನಮ್ಮ ಕಣ್ಣ ಮುಂದೆ ಬಂತು. ನಮಗಂತೂ ಬಹಳ ಖುಷಿಯಾಯ್ತು. ಇದುವರೆಗೆ ಯಾರಿಗೆ ಹಾಕಿದೆವೋ, ಏನಾಯ್ತೋ ಆತಂಕವಿತ್ತು. ಫಲಿತಾಂಶ ಬಂದಾಗ ಗೊಂದಲ ಉಂಟಾಗುತ್ತಿತ್ತು. ಈಗ ಆ ಗೊಂದಲ ನಮಗಿಲ್ಲ. ನಾವು ಯಾರಿಗೆ ವೋಟ್ ಹಾಕಿದ್ದೇವೆ, ನಮ್ಮ ಹಕ್ಕನ್ನು ಯಾರಿಗೆ ಚಲಾಯಿಸಿದ್ದೇವೆ ಎಂಬ ಆತ್ಮತೃಪ್ತಿ ನಮಗಿದೆ. ಅದನ್ನು ಚುನಾವಣಾ ಆಯೋಗ ಈ ರೀತಿ ಒದಗಿಸಿಕೊಟ್ಟಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ.

ದಿನೇ ದಿನೇ ಕ್ರಮಗಳು ಸುಧಾರಣೆಯಾಗುತ್ತಿವೆ. ಇನ್ನು ಮುಂದೆ ಒಳ್ಳೊಳ್ಳೆ ಕ್ರಮಗಳು ಬರುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಯಾವುದೇ ರೀತಿಯ ಅಕ್ರಮಗಳು ನಡೆಯಲು ಸಾಧ್ಯವಾಗುವುದಿಲ್ಲ. ನಾವು ಹಾಕಿರುವ ಮತ ನಮ್ಮ ಕಣ್ಣೆದುರಿಗೇ ಬರುತ್ತದೆ. ಯಾವ ಹ್ಯಾಕಿಂಗ್, ಟ್ಯಾಂಪರಿಂಗ್ ಆಗಲು ಸಾಧ್ಯವಿಲ್ಲವೆಂದೆನಿಸುತ್ತದೆ ಎಂದು ಮಾತನಾಡಿಕೊಳ್ಳುತ್ತಿರುವುದು ಮತಗಟ್ಟೆಗಳ ಬಳಿ ಕೇಳಿಬಂತು.
ಮಹಿಳೆಯರು, ಹಿರಿಯ ನಾಗರಿಕರು ಸಾಕಷ್ಟು ಜನ ವಿವಿ ಪ್ಯಾಟ್‍ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದು ಕೇಳಿಬಂತು. ಬೊಂಬಾಟಾಗಿದೆ. ನಾವು ಯಾರಿಗೆ ವೋಟ್ ಹಾಕಿದ್ದೇವೆ ಎಂಬುದು ನಮಗೇ ಗೊತ್ತಾಗುತ್ತಿದೆ. ಹೋಗಿ ಹೋಗಿ ವೋಟ್ ಹಾಕಿ, ಹೊರಗೆ ಏನೂ ಕೇಳ್ಬೇಡಿ. ನೀವ್ಯಾರಿಗೆ ಹಾಕಿದ್ದೀರಿ ಎಂಬುದು ನಿಮಗೇ ಗೊತ್ತಾಗುತ್ತೆ ಅಂತ ಮಾತನಾಡಿಕೊಳ್ಳುತ್ತಿದ್ದರು.

# ಎಲೆಕ್ಷನ್ ಫೈಟ್ : ಬಿಬಿಎಂಪಿ ಸದಸ್ಯನ ಮೇಲೆ ಹಲ್ಲೆ
ಬೆಂಗಳೂರು, ಮೇ 12- ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಘರ್ಷಣೆಯಲ್ಲಿ ಹಂಪಿನಗರ ವಾರ್ಡ್‍ನ ಬಿಬಿಎಂಪಿ ಸದಸ್ಯ ಆನಂದ್ ಹೊಸೂರ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಆರ್‍ಪಿಸಿ ಬಡಾವಣೆಯಲ್ಲಿರುವ ವಿರೂಪಾಕ್ಷೇಶ್ವರ ಸ್ವಾಮಿ ಎಜುಕೇಷನ್ ಸೊಸೈಟಿಯಲ್ಲಿ ಸ್ಥಾಪಿಸಲಾಗಿರುವ 135, 136, 137 ಮತ್ತು 138 ಮತಗಟ್ಟೆ ಸಮೀಪ ಈ ಘಟನೆ ನಡೆದಿದೆ.

ಮತಗಟ್ಟೆಯ ನೂರು ಮೀಟರ್ ಗಡಿಯಲ್ಲಿ ಕೆನಾಪಿ ಹಾಕುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.  ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಹಂಪಿನಗರ ವಾರ್ಡ್‍ನ ಬಿಜೆಪಿ ಬಿಬಿಎಂಪಿ ಸದಸ್ಯ ಆನಂದ್‍ಹೊಸೂರ್ ಎಂಬುವವರ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಆನಂದ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಈ ಸಂಜೆಗೆ ತಿಳಿಸಿದ್ದಾರೆ.

ಘರ್ಷಣೆಯಲ್ಲಿ ಆನಂದ್‍ಹೊಸೂರ್ ಅವರಿಗೆ ರಕ್ತಗಾಯವಾಗಿದ್ದು, ಪೊಲೀಸರು ಹೊಯ್ಸಳ ವಾಹನದಲ್ಲಿ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಜೆಪಿ ಅಭ್ಯರ್ಥಿ ಎಚ್.ರವೀಂದ್ರ ಮತ್ತಿತರ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಮತದಾನ ಶಾಂತಿಯುತವಾಗಿ ಮುಂದುವರಿದಿದೆ.  ಬಿಬಿಎಂಪಿ ಸದಸ್ಯ ಆನಂದ್‍ಹೊಸೂರ್ ಅವರ ಮೇಲೆ ಹಲ್ಲೆ ನಡೆಸಿರುವ ಕುರಿತಂತೆ ದೂರು ಬಂದರೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.

+ ಮತಗಟ್ಟೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ
ಹಾವೇರಿ,ಮೇ12-ಆಸ್ತಿ ಕಲಹದಿಂದ ಬೇಸತ್ತಿದ್ದ ವೃದ್ಧೆಯೊಬ್ಬರ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತಗಟ್ಟೆ ಎದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ದೇವಗಿರಿ ಮತಗಟ್ಟೆಯಲ್ಲಿ ನಡೆದಿದೆ.ಪಾರ್ವತಮ್ಮ(60) ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ. ಕೌಟುಂಬಿಕ ಕಲಹ ಮತ್ತು ಆಸ್ತಿ ಕಲಹದಿಂದ ಬೇಸತ್ತಿದ್ದ ಪಾರ್ವತಮ್ಮ ಅವರು ಮತಗಟ್ಟೆ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅಧಿಕಾರಿಗಳು ಮತ್ತು ಸ್ಥಳೀಯರು ಅಜ್ಜಿಯನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ.

+ 20 ಆಟೋಗಳು ಜಪ್ತಿ
ರಾಯಚೂರು, ಮೇ 12- ಮತದಾರರನ್ನು ಕರೆದೊಯ್ಯುತ್ತಿದ್ದಾರೆಂಬ ಆರೋಪದಡಿ 20 ಆಟೋಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ವಶಕ್ಕೆ ಪಡೆದಿರುವ 20 ಆಟೋಗಳು ಆಂಧ್ರ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ. ಅಭ್ಯರ್ಥಿ ಬಸವನಗೌಡ ತುರುವೇಹಾಳ್ ಕಡೆಯವರು ಮತದಾರರನ್ನು ಮತಗಟ್ಟೆಗೆ ಕರೆದೊಯ್ಯುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

+ ಮತಗಟ್ಟೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ
ಹಾವೇರಿ,ಮೇ12-ಆಸ್ತಿ ಕಲಹದಿಂದ ಬೇಸತ್ತಿದ್ದ ವೃದ್ಧೆಯೊಬ್ಬರ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತಗಟ್ಟೆ ಎದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ದೇವಗಿರಿ ಮತಗಟ್ಟೆಯಲ್ಲಿ ನಡೆದಿದೆ.ಪಾರ್ವತಮ್ಮ(60) ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ. ಕೌಟುಂಬಿಕ ಕಲಹ ಮತ್ತು ಆಸ್ತಿ ಕಲಹದಿಂದ ಬೇಸತ್ತಿದ್ದ ಪಾರ್ವತಮ್ಮ ಅವರು ಮತಗಟ್ಟೆ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅಧಿಕಾರಿಗಳು ಮತ್ತು ಸ್ಥಳೀಯರು ಅಜ್ಜಿಯನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ.

+ ರಾಜ್ಯದಾದ್ಯಂತ ಮತದಾನ ಶಾಂತಿಯುತವಾ ನಡೆಯುತ್ತಿದೆ : ಕಮಲ್‍ಪಂಥ್
ಬೆಂಗಳೂರು, ಮೇ 12- ರಾಜ್ಯದಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಕಮಲ್‍ಪಂಥ್ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಅಲ್ಲಲ್ಲಿ ಸಣ್ಣಪುಟ್ಟ ಘಟನೆ ಹೊರತುಪಡಿಸಿದಂತೆ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ಈತನಕ ನಡೆದಿಲ್ಲ ಎಂದು ಹೇಳಿದರು.

ಮತಗಟ್ಟೆಗಳ ಸಮೀಪ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದರು. ಆರಂಭದಲ್ಲಿ ಕೆಲವು ಮತಗಟ್ಟೆಗಳ ಮತಯಂತ್ರಗಳಲ್ಲಿ ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತದಾನ ತಡವಾಗಿ ಶುರುವಾಯಿತು. ಈಗ ಎಲ್ಲಾ ಮತಗಟ್ಟೆಗಳಲ್ಲೂ ಸುಲಲಿತವಾಗಿ ಮತದಾನ ನಡೆಯುತ್ತಿದೆ ಎಂದು ಅವರು ಹೇಳಿದರು. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ನಾವು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಸ್ಥಳೀಯ ಪೊಲೀಸರ ಜತೆಗೆ ನೆರೆ ರಾಜ್ಯಗಳ ಪೊಲೀಸರು ಹಾಗೂ ಕೇಂದ್ರ ಪಡೆಗಳನ್ನು ಸಹ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

+ ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕರ್ತರ ಘರ್ಷಣೆ, ಲಘು ಲಾಠಿ ಪ್ರಹಾರ
ಮಂಡ್ಯ, ಮೇ 12- ಮತಗಟ್ಟೆ ಸಮೀಪ ಪ್ರಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಲಘುಲಾಠಿ ಪ್ರಹಾರ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಕ್ಕರೆಹುಂಡಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ಕೊಕ್ಕರೆಹುಂಡಿ ಗ್ರಾಮದ ಮತಗಟ್ಟೆ ಬಳಿ ಪ್ರಚಾರ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಕ್ರಮವನ್ನು ಜೆಡಿಎಸ್ ಕಾರ್ಯಕರ್ತರು ಆಕ್ಷೇಪಿಸಿದ್ದರಿಂದ ಪರಸ್ಪರ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಸ್ಥಳೀಯ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಮನೆ ಬಾಗಿಲಿಗೆ ಹಣ:
ಮತದಾರರನ್ನು ಆಕರ್ಷಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದ ಅಭ್ಯರ್ಥಿಗಳು ಲಕೋಟೆಯೊಂದರಲ್ಲಿ ಹಣ ಹಾಕಿ ಮತದಾರರ ಮನೆ ಮುಂದೆ ಇಟ್ಟು ಹೋಗಿರುವ ಘಟನೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಳೇನಹಳ್ಳಿಯಲ್ಲಿ ನಡೆದಿದೆ. ಸುಮಾರು 2ಸಾವಿರ ಹಣವನ್ನು ಮಂಜುನಾಥಸ್ವಾಮಿ ಭಾವಚಿತ್ರವಿರುವ ಲಕೋಟೆಯಲ್ಲಿ ಇಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.  ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಮಾಡುತ್ತಿರುವ ತಂತ್ರಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯ ನಗರದ ಹೊಸಹಳ್ಳಿ ಶಾಲೆಯ ಮತಗಟ್ಟೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದು ವಿಶೇಷವಾಗಿತ್ತು.

+ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ
ವಿಜಯಪುರ, ಮೇ 12- ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವ ಪ್ರಕರಣ ಎರಡು ಮತಗಟ್ಟೆಗಳಲ್ಲಿ ನಡೆದಿದೆ. ಮತ ಚಲಾಯಿಸಲು ಮತಗಟ್ಟೆಗೆ ಬಂದ ಮತದಾರರು ತಮ್ಮ ಹೆಸರಿಲ್ಲದೆ ಪರದಾಡುವಂತಾಯಿತು. ಸುಮಾರು 50 ಮಂದಿ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮತಚಲಾಯಿಸಲು ಬಂದವರು ಮತಗಟ್ಟೆ ಬಳಿಯೇ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಅಧಿಕಾರಿಗಳನ್ನು ಕೇಳಿದರೂ ಪ್ರಯೋಜನವಾಗಲಿಲ್ಲ.

+ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ರಾಯಚೂರು. ಮೇ. 12 : ತಮ್ಮ ನಡುಗಡ್ಡೆಗೆ ಸೇತುವೆ ಸಂಪರ್ಕ ಕಲ್ಪಿಸಿ ಹಾಗೂ ಊರಲ್ಲಿ ಒಂದು ನ್ಯಾಯಬೆಲೆ ಅಂಗಡಿ ಆರಂಭಿಸುವಂತೆ ಆಗ್ರಹಿಸಿ ಲಿಂಗಸಗೂರು ತಾಲ್ಲೂಕಿನ ನಡುಗಡ್ಡೆ ಗ್ರಾಮ ಕಡದರಗಡ್ಡೆ ಜನ ಮತದಾನ ಬಹಿಷ್ಕರಿಸಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂಬುದು ಜನರ ಆಗ್ರಹ ಸ್ಥಳಕ್ಕೆ ಬಂದ ತಹಶೀಲ್ದಾರ ಗ್ರಾಮದಲ್ಲಿನ ಸರಕಾರಿ ನೌಕರರು ಹಾಗೂ ಪಂಚಾಯ್ತ ಉದ್ಯೋಗಿಗಳನ್ನು ಒತ್ತಾಯ ಪೂರ್ವಕವಾಗಿ ಮತಹಾಕಿಸಿದರು. ಇದು ತಿಳಿಯುತ್ತಿದ್ದಂತೆಯೇ ಇಡೀ ಗ್ರಾಮದ ಜನ ಆಕ್ರೋಶ ಗೊಂಡಿದ್ದು ತಹಶಿಲ್ದಾರರನ್ನು ಗ್ರಾಮದಲ್ಲಿ ಕೂಡಿಹಾಕಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

WhatsApp Image 2018-05-12 at 12.16.29 PM(1)

WhatsApp Image 2018-05-12 at 12.16.30 PM

WhatsApp Image 2018-05-12 at 12.38.12 PM

WhatsApp Image 2018-05-12 at 12.38.16 PM

 

leela

53a23c0d502fee500b78fd1960f4c5c9

WhatsApp Image 2018-05-12 at 11.38.20 AM

WhatsApp Image 2018-05-12 at 11.17.46 AM

WhatsApp Image 2018-05-12 at 11.38.19 AM

+ ಮತದಾನ ಕೇಂದ್ರದ ಹಂಚು ತೆಗಿಸಿ ಮತದಾನ ಮಾಡಿದ ಚಲುವರಾಯಸ್ವಾಮಿ
ಮಂಡ್ಯ, ಮೇ 12-ಮತದಾನ ಕೇಂದ್ರದಲ್ಲಿ ಬೆಳಕಿನ ಸಮಸ್ಯೆ ಎದುರಾಗಿದ್ದರಿಂದ ಚಲುವರಾಯಸ್ವಾಮಿ ಅವರು ಹೆಂಚು ತೆಗೆಸಿದ ಪ್ರಸಂಗ ಇಂದು ನಡೆದಿದೆ. ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲ ಘಟ್ಟದಲ್ಲಿ ಮತದಾನ ಮಾಡಲು ಬಂದ ಚೆಲುವರಾಯಸ್ವಾಮಿ ಅವರು ಮತ ಕೇಂದ್ರದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದಿದ್ದರಿಂದ ತಮ್ಮ ಕಾರ್ಯಕರ್ತರಿಗೆ ಹೇಳಿ ಹೆಂಚು ತೆಗೆಸಿ ಬೆಳಕಿಗೆ ಅವಕಾಶ ಮಾಡಿಕೊಟ್ಟರು.
ಈ ಹಂತದಲ್ಲಿ ಭದ್ರತಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದರು.

+ ರಾಘವೇಂದ್ರ ರಾಜ್ ಕುಮಾರ್ ಕುಟುಂಬ , ಲೂಸ್ ಮಾದ ಯೋಗಿ , ಸುಧಾರಣಿ , ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಹರ್ಷಿಕಾ ಪೂಣಚ್ಚ , ಹಾಗೂ ಹಿರಿಯ ನಟಿ ಬಿ. ಸರೋಜಾದೇವಿ ಸೇರಿದಂತೆ ಕಿರುತೆರೆ , ಹಿರಿತೆರೆ ಕಲಾವಿದರು ಓಟನ್ನು ಮಾಡಿದ್ದಾರೆ.

raagu

+  ಜೆಡಿಎಸ್‍ ಗುರುತು ತೋರಿಸು ಎಂದ ವೃದ್ಧೆಗೆ ಕಾಂಗ್ರೆಸ್ ಗುರುತು ತೋರಿಸಿ ಚುನಾವಣಾ ಸಿಬ್ಬಂದಿ ..!
ತುಮಕೂರು, ಮೇ 12-ಮತಯಂತ್ರದಲ್ಲಿ ಜೆಡಿಎಸ್‍ನ ಗುರುತು ತೋರಿಸುವಂತೆ ವೃದ್ಧೆಯೊಬ್ಬರು ಚುನಾವಣಾ ಸಿಬ್ಬಂದಿ ಕೇಳಿದಾಗ ಆತ ಕಾಂಗ್ರೆಸ್ ಗುರುತು ತೋರಿಸಿ ಮತ ಹಾಕಿಸಿದ್ದರಿಂದ ಗ್ರಾಮಸ್ಥರು ಕೆಂಡಾಮಂಡಲರಾದ ಘಟನೆ ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಕಾಟಗೊಂಡನಹಳ್ಳಿ ಮತಗಟ್ಟೆ 55ರಲ್ಲಿ ನಡೆದಿದೆ.

ಇಂದು ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವೃದ್ಧೆ ತಿಪ್ಪಮ್ಮ ಅವರು ಮತದಾನ ಮಾಡಲು ಮತಗಟ್ಟೆಗೆ ಬಂದಿದ್ದು, ನನಗೆ ಕಣ್ಣು ಕಾಣಿಸುವುದಿಲ್ಲ, ದಯವಿಟ್ಟು ಜೆಡಿಎಸ್ ಗುರುತು ತೋರಿಸಿ ಎಂದು ಚುನಾವಣಾ ಸಿಬ್ಬಂದಿ ದೊಡ್ಡರಂಗೇಗೌಡ ಅವರನ್ನು ಕೇಳಿದ್ದಾರೆ. ಆಗ ಆತ ಕಾಂಗ್ರೆಸ್ ಚಿಹ್ನೆ ತೋರಿಸಿ ಮತ ಹಾಕಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಚುನಾವಣಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಮತಗಟ್ಟೆ ಬಳಿ ಗದ್ದಲ, ಗಲಾಟೆ ನಡೆಯಿತು. ಕೊನೆಗೆ ಪೊಲೀಸರು ಗ್ರಾಮಸ್ಥರ ಮನವೊಲಿಸಿದರು.

+ 111ರ ಇಳಿವಯಸ್ಸಿನಲ್ಲಿಯೂ ಮತದಾನ ಮಾಡಿ ಮಾದರಿಯಾದ ಸಿದ್ಧಗಂಗಾ ಶ್ರೀಗಳು

WhatsApp Image 2018-05-12 at 10.31.51 AM

ತುಮಕೂರು. ಮೇ.12 : 111 ರ ಇಳಿವಯಸ್ಸಿನಲ್ಲಿಯೂ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮತದಾನ ಮಾಡಿ ಮಾದರಿ ಎನಿಸಿದರು. ಮಠದ ಆವರಣದಲ್ಲಿರುವ ಸಿದ್ದಲಿಂಗೇಶ್ವರ ಪಾಥಮಿಕ ಶಾಲೆಯ ಸಂಖ್ಯೆ 113 ರಲ್ಲಿ ಬೆಳಿಗ್ಗೆ ಮತದಾನ ಮಾಡಿದ ಅವರು ಎಂದಿನಂತೆ ಲವಲವಿಕೆಯಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಸಾರ್ವತ್ರಿಕ ಚುನಾವಣೆ ಪ್ರಾರಂಭವಾದಾಗಿನಿಂದ ಚಾಚು ತಪ್ಪದೆ ಶ್ರೀಗಳು ಮತದಾನ ಮಾಡುತ್ತಿದ್ದಾರೆ. ಮುಕ್ತ ಮತದಾನ ಮಾಡಿ ಉತ್ತಮ ಅಭ್ಯರ್ಥಿಗಳನ್ನ ಆಯ್ಕೆ ಮಾಡುವಂತೆ ಮತದಾರಿಗೆ ಶ್ರೀಗಳ ಕರೆ ನೀಡಿದರು. ಈ ಚುನಾವಣೆಯಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಮೌಲ್ಯ ಹೆಚ್ಚಿಸಲು ಶ್ರೀಗಳು ಕರೆ ನೀಡಿದರು.

+ ಮತಗಟ್ಟೆ ಬಳಿಯೇ ಮತದಾರ ಸಾವು..!
ದಕ್ಷಿಣ ಕನ್ನಡ, ಮೇ 12- ಮತದಾನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮತಗಟ್ಟೆ ಬಳಿಯೇ ಸಾವನ್ನಪ್ಪಿರುವ ಘಟನೆ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಾರಿಗೆದಡಿ ನಿವಾಸಿ ಅಣ್ಣಿ ಆಚಾರ್ಯ (70) ಮೃತಪಟ್ಟ ವ್ಯಕ್ತಿ. ಮತದಾನದ ಹಕ್ಕನ್ನು ಚಲಾಯಿಸಲು ಬೆಳ್ಳಂಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿದ ಅಣ್ಣಿ ಆಚಾರ್ಯ ಅವರು ಎದೆನೋವಿನಿಂದ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

+ ಮತದಾರರ ಸೋಗಿನಲ್ಲಿದ್ದ ವಿದ್ಯಾರ್ಥಿಗಳು
ಬಾಗಲಕೋಟೆ, ಮೇ 12- ಮತದಾರರ ಸೋಗಿನಲ್ಲಿದ್ದ ವಿದ್ಯಾರ್ಥಿಗಳು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಕ್ಕಿಬಿದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣಚರಂತಿಮಠ ಅವರು ಕಾರ್ಯಾಧ್ಯಕ್ಷರಾಗಿರುವ ಕಾಲೇಜಿನ ವಿದ್ಯಾರ್ಥಿಗಳು ಮತದಾನ ಮಾಡಲು ಬಂದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ನಕಲಿ ಮತದಾರರನ್ನು ಬಿಜೆಪಿ ಅಭ್ಯರ್ಥಿ ವೀರಣ್ಣಚರಂತಿಮಠ ಅವರು ಕರೆತಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.  ಈ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ.

+ ಸಿಎಂ ಸಿದ್ದರಾಮಯ್ಯ, ಶ್ರೀರಾಮುಲು ತಾವು ಸ್ಪರ್ಧಿಸಿದ ಕ್ಷೇತ್ರದಲ್ಲಿ ಮತದಾನ ಮಾಡುತ್ತಿಲ್ಲ

ಬೆಂಗಳೂರು, ಮೇ 12- ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ಅವರ ಮತಗಳು ಎರಡೂ ಕ್ಷೇತ್ರಗಳಲ್ಲಿ ಇಲ್ಲದಿರುವುದು ವಿಪರ್ಯಾಸ. ಬಾದಾಮಿ, ಚಾಮುಂಡೇಶ್ವರಿ ಎರಡೂ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ತಮ್ಮ ಮತ ಇಲ್ಲ. ತಮ್ಮ ಮತವನ್ನು ತಾವೇ ಹಾಕಿಕೊಳ್ಳಲು ಅವರಿಗೆ ಅವಕಾಶವಿಲ್ಲ. ಅವರ ಮತ ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಇದೆ. ಅವರು ಅಲ್ಲಿ ಮತ ಚಲಾಯಿಸಿದರು.

ಅದೇ ರೀತಿ ಶ್ರೀರಾಮುಲು ಬಾದಾಮಿ ಹಾಗೂ ಮೊಳಕಾಲ್ಮೂರು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಅವರ ಮತ ಇಲ್ಲ. ಅವರ ಮತ ಇರುವುದು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ. ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಬಾದಾಮಿ ಹಾಗೂ ಮೊಣಕಾಲ್ಮೂರಿನಲ್ಲಿ ಶ್ರೀರಾಮುಲು ಅವರ ಮತ ಇಲ್ಲ. ಅವರು ತಮ್ಮ ಸ್ವಕ್ಷೇತ್ರ ಬಳ್ಳಾರಿ ಗ್ರಾಮೀಣದಲ್ಲಿ ಮತ ಚಲಾಯಿಸಿದರು.  ಬಾದಾಮಿ, ಚಾಮುಂಡೇಶ್ವರಿ ಹೈ ವೋಲ್ಟೇಜ್ ಕ್ಷೇತ್ರಗಳಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಾದಾಮಿಯಲ್ಲಿ ಶ್ರೀರಾಮುಲು ಪೈಪೋಟಿ ನೀಡಿದರೆ, ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ ಅವರು ತೀವ್ರ ಸ್ಪರ್ಧೆಯೊಡ್ಡಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಮತದಾರರು ಯಾರ ಕೈ ಹಿಡಿದಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆಡೆಯಾಗಿದ್ದು, ಮೇ 15ರಂದು ಫಲಿತಾಂಶ ಹೊರಬೀಳಲಿದೆ.

+ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಸಿಎಂ ಸಿದ್ದರಾಮಯ್ಯರ ಸಹೋದರ
ಮೈಸೂರು, ಮೇ 12- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಅವರು ಸರದಿ ಸಾಲಿನಲ್ಲಿ ನಿಂತು ಇಂದು ಮತ ಚಲಾಯಿಸಿದ್ದಾರೆ.ವರುಣಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮಯ್ಯನ ಹುಂಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 82ನೆ ಬೂತ್‍ನಲ್ಲಿ ಸಿದ್ದೇಗೌಡ ತಮ್ಮ ಹಕ್ಕನ್ನು ಚಲಾಯಿಸಿದರು. ಎನ್‍ಆರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಚಿವ ತನ್ವೀರ್‍ಸೇಠ್ ಇಂದು ತಮ್ಮ ಪತ್ನಿ, ತಾಯಿ ಹಾಗೂ ಮಗಳೊಂದಿಗೆ ಬನುಮಯ್ಯ ಶಾಲೆಯ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಚಾಮರಾಜ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಾಸು ಅವರು ಮತದಾನ ಮಾಡಿದರು.

+ ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತದಾನ
ಮೈಸೂರು, ಮೇ 12- ಮತದಾರರ ಜಾಗೃತಿ ರಾಯಭಾರಿಯಾದ ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಇಂದು ನಗರದಲ್ಲಿ ಮತದಾನ ಮಾಡಿದರು. ತಮ್ಮ ಹುಟ್ಟುಹಬ್ಬದ ದಿನವಾದ ಇಂದು ನಿವೇದಿತಾಗೌಡ ಬೆಳಗ್ಗೆ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ದಟ್ಟಗಳ್ಳಿಯ ರೋಟರಿ ಶಾಲೆಯ ಮತಗಟ್ಟೆಗೆ ತೆರಳಿ ಮೊದಲ ಬಾರಿಗೆ ಮತ ಚಲಾಯಿಸಿದರು.  ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಇದೇ ಮೊದಲ ಬಾರಿ ನಾನು ಮತ ಚಲಾಯಿಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದರು.  ಜಿಲ್ಲೆಯ ಮತದಾರರ ಜಾಗೃತಿ ರಾಯಭಾರಿಯಾಗಿ ಹಲವಾರು ಮಂದಿಯನ್ನು ಸಂಪರ್ಕಿಸಿ ಮನೆ, ವ್ಯಾಪಾರದ ಸ್ಥಳ ಮತ್ತಿತರೆಡೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದೇನೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದ್ದೇನೆ ಎಂದರು.

hasan

IMG-20180512-WA0275

WhatsApp Image 2018-05-12 at 10.51.55 AM

WhatsApp Image 2018-05-12 at 10.52.04 AM

+ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು ಹಲವೆಡೆ ಮತದಾನ ಬಹಿಷ್ಕಾರ
ಬೆಂಗಳೂರು, ಮೇ 12- ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು ರಾಜ್ಯದ ವಿವಿಧ ಗ್ರಾಮಗಳಲ್ಲಿ ಇಂದು ಮತದಾರರು ಮತದಾನ ಬಹಿಷ್ಕರಿಸಿದ ಘಟನೆಗಳು ವರದಿಯಾಗಿವೆ. ಮೈಸೂರು: ಮೈಸೂರಿನ ಹರಿನಹಳ್ಳಿಗೆ ಜನಪ್ರತಿನಿಧಿಗಳು ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮತದಾರರು ಮತದಾನ ಬಹಿಷ್ಕರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಹುಲ್ಲೂಡು ಪಂಚಾಯಿತಿಯ ರೂರಲ್ ಗುಡಿಬಂಡೆ ಮತಗಟ್ಟೆ ಸಂಖ್ಯೆ 229ರಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.  ನಮ್ಮ ಗ್ರಾಮಕ್ಕೆ ಜನಪ್ರತಿನಿಧಿಗಳು ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆಯನ್ನಂತೂ ಕೇಳುವವರಿಲ್ಲ. ಚುನಾವಣೆ ಬಂದಾಗ ಜನಪ್ರತಿನಿಧಿಗಳು ಕೈಯನ್ನೂ ಹಿಡಿಯುತ್ತಾರೆ, ಕಾಲನ್ನೂ ಹಿಡಿಯುತ್ತಾರೆ. ಗೆದ್ದ ಮೇಲೆ ಈ ಕಡೆ ತಲೆನೇ ಹಾಕಲ್ಲ. ಹಾಗಾಗಿ ಈ ಬಾರಿ ನಾವು ಮತದಾನವನ್ನು ಬಹಿಷ್ಕರಿಸಿದ್ದೇವೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

+ ಮತದಾನ ಮಾಡಿದ ಸಂಜೀವ್‍ಕುಮಾರ್
ಬೆಂಗಳೂರು, ಮೇ 12- ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು. ಕ್ಷೇತ್ರದ ಎಚ್‍ಎಸ್‍ಆರ್ ಲೇಔಟ್‍ನ ಲಾರೆನ್ಸ್ ಆಂಗ್ಲ ಶಾಲೆಯ ಮತಗಟ್ಟೆಯಲ್ಲಿ ಅವರು ಇಂದು ಮತದಾನ ಮಾಡಿದರು.

WhatsApp Image 2018-05-12 at 9.50.22 AM

WhatsApp Image 2018-05-12 at 10.31.51 AM

WhatsApp Image 2018-05-12 at 10.31.52 AM

WhatsApp Image 2018-05-12 at 10.33.28 AM

WhatsApp Image 2018-05-12 at 10.33.29 AM

Live Updates :  

ಕೈಕೊಟ್ಟ ಮತಯಂತ್ರ, ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾದು ನಿಂತ ಮತದಾರರು
ಚಿಕ್ಕಮಗಳೂರು, ಮೇ 12-ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಮತದಾರರು ತಮ್ಮ ಅವಕಾಶಕ್ಕಾಗಿ ಕಾದು ಕುಳಿತ ಪ್ರಸಂಗ ಶಾಂತಿನಗರ(ಉಪ್ಪಳ್ಳಿ) 116ರಲ್ಲಿ ನಡೆದಿದೆ.  ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಬೇಕಿದ್ದ ಮತದಾನ ಇವಿಎಂ ಯಂತ್ರ ಕೈಕೊಟ್ಟಿದ್ದರಿಂದ ಸರಿಯಾದ ಸಮಯಕ್ಕೆ ಮತದಾನ ಆರಂಭವಾಗಲಿಲ್ಲ. ಬೆಳಗ್ಗೆ 7 ಗಂಟೆಯಿಂದ ಮತಗಟ್ಟೆಯಲ್ಲೇ ಕಾದು ಕುಳಿತ ಮತದಾರರು ಮತದಾನಕ್ಕೆ ಅವಕಾಶವಿಲ್ಲದೆ ನಿಲ್ಲುವಂತಹ ಪರಿಸ್ಥಿತಿ ಎದುರಾಯಿತು.
ದಾವಣಗೆರೆ:
ಮತಯಂತ್ರದಲ್ಲಿ ಕಂಡು ಬಂದ ದೋಷದಿಂದ ತಾಲ್ಲೂಕಿನ ಭಾವಿಹಳನ ಬರಾಕ್ 123ರಲ್ಲಿ ಮತದಾನಕ್ಕೆ ತೊಂದರೆ ಎದುರಾಗಿತ್ತು. ಬೆಳಗ್ಗೆ 7ರಿಂದ ಆರಂಭವಾಗಬೇಕಿದ್ದ ಮತದಾನ ಇವಿಎಂ ದೋಷದಿಂದ ಸಮಯಕ್ಕೆ ಸರಿಯಾಗಿ ಆರಂಭವಾಗಿರಲಿಲ್ಲ. ಮತದಾರರು ಮತದಾನ ತಡವಾಗಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬಾಗಲಕೋಟೆ:
ಮತಯಂತ್ರ ಕೈಕೊಟ್ಟಿದ್ದರಿಂದ ಮತದಾರರು 2 ಗಂಟೆಗೂ ಹೆಚ್ಚುಕಾಲ ಕಾದು ಕುಳಿತ ಘಟನೆ ಜಮಖಂಡಿ ತಾಲ್ಲೂಕಿನ ಬುದ್ನಿ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ.  ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ 9 ಗಂಟೆಯಾದರೂ ಆರಂಭವಾಗದ ಕಾರಣ ಮತದಾರರು ಕಾದು ಕುಳಿತು ಬೇಸರಗೊಂಡು ಆಕ್ರೋಶ ವ್ಯಕ್ತಪಡಿಸಿದರು.  ಇವಿಎಂ ಯಂತ್ರದ ದೋಷದಿಂದ ಮತದಾನಕ್ಕೆ ಅಡಚಣೆಯಾದರೂ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.

IMG-20180512-WA0156

WhatsApp Image 2018-05-12 at 9.32.59 AM

WhatsApp Image 2018-05-12 at 10.11.46 AM

WhatsApp Image 2018-05-12 at 10.17.28 AM

 

WhatsApp Image 2018-05-12 at 9.33.01 AM

WhatsApp Image 2018-05-12 at 9.33.42 AM

+ಪಿಂಕ್ ಮತಗಟ್ಟೆಗೆ ಉತ್ಸಾಹದಿಂದ ಬಂದ ಮಹಿಳೆಯರು 
ತುಮಕೂರು, ಮೇ 12- ಈ ಬಾರಿ ವಿಧಾನಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು 11 ಪಿಂಕ್ ಮತಗಟ್ಟೆಯನ್ನು ತೆರೆಯಲಾಗಿದ್ದು, ಮಹಿಳೆಯರು ಬೆಳಗ್ಗೆ ಏಳು ಗಂಟೆಗೆ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.  ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಸುಧಾಕರ್‍ಲಾಲ್ ಪಿಂಕ್ ಮತಗಟ್ಟೆಗೆ ತೆರಳಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‍ಲಾಲ್, ಕೊರಟಗೆರೆ ಕ್ಷೇತ್ರದಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಿದರು.

ಕಳೆದ ಮೂರ್ನಾಲ್ಕು ದಿನಗಳಿಂದ ಕೋಟಿಗಟ್ಟಲೆ ಹಣ ಹಂಚಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೂ ಪ್ರಜ್ಞಾವಂತ ಮತದಾರರು ಇದಕ್ಕೆ ಬಲಿಯಾಗುವುದಿಲ್ಲ. ಇದಕ್ಕೆ ಇದೇ 15ರಂದು ಉತ್ತರ ಸಿಗಲಿದೆ ಎಂದರು. ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರ ಕಾಳಜಿ, ಬಿಎಸ್‍ಪಿಯೊಂದಿಗಿನ ಮೈತ್ರಿ ನಮಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.

WhatsApp Image 2018-05-12 at 9.35.31 AM

WhatsApp Image 2018-05-12 at 9.41.35 AM

 

WhatsApp Image 2018-05-12 at 9.46.11 AM

WhatsApp Image 2018-05-12 at 9.46.44 AM

WhatsApp Image 2018-05-12 at 9.50.22 AM

WhatsApp Image 2018-05-12 at 10.07.08 AM

WhatsApp Image 2018-05-12 at 10.08.17 AM

WhatsApp Image 2018-05-12 at 10.08.33 AM

 

+ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸರದಿ ಸಾಲಲ್ಲಿ ನಿಂತು ಮತ ಹಾಕಿದರು

IMG-20180512-WA0098

+ ಪಿಂಕ್ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸಾಲುಗಟ್ಟಿ ನಿಂತ ಮಹಿಳೆಯರು

WhatsApp Image 2018-05-12 at 9.29.40 AM

+ ಬಾಳೆಹೊನ್ನೂರು ಧರ್ಮ ಪೀಠದಲ್ಲಿ ಪೂಜೆ ಸಲ್ಲಿಸಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಮತದಾನ ಮಾಡಿದರು.

WhatsApp Image 2018-05-12 at 9.06.24 AM

+ ಮಾಜಿ ಪ್ರಧಾನಿ ದೇವೇಗೌಡರು  ಕುಟುಂಬ  ಸಮೇತ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.

WhatsApp Image 2018-05-12 at 9.06.44 AM

WhatsApp Image 2018-05-12 at 9.05.32 AM

WhatsApp Image 2018-05-12 at 9.05.31 AM

+ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿ ಶ್ರೀ ಕೆ ಗೋಪಾಲಯ್ಯ ನವರು ವ್ರಷಭಾವತಿ ನಗರದಲ್ಲಿನ ಅಮರವಾಣಿ ಶಾಲೆ ಯಲ್ಲಿ ತಮ್ಮ ಕುಟುಂಬದ ಸದಸ್ಯರುಗಳೊಂದಿಗೆ ಮತ ಚಲಾಯಿಸಿದರು.

WhatsApp Image 2018-05-12 at 8.31.14 AM

WhatsApp Image 2018-05-12 at 8.32.04 AM

+ ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಗಂಗಾಧರೇಶ್ವರನ ಆಶೀರ್ವಾದ ಪಡೆದರು.

WhatsApp Image 2018-05-12 at 8.57.50 AM

WhatsApp Image 2018-05-12 at 8.57.51 AM

ಬೆಂಗಳೂರು, ಮೇ 12- ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಇಂದು ಬೆಳಗ್ಗೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಅವರೊಂದಿಗೆ ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮುಂದಿನ ಐದು ವರ್ಷಕ್ಕೆ ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ರಾಜ್ಯದ ಮತದಾರರ ಮೇಲಿದೆ. ಇಂದು ಆ ಜವಾಬ್ದಾರಿಯನ್ನು ನಿರ್ವಹಿಸುವ ಪ್ರಮುಖ ದಿನ . ತಾವು ಮತದಾನ ಮಾಡುವ ಮುನ್ನ ಆದಿಚುಂಚನಗಿರಿ ಮಠದ ಶ್ರೀ ಕಾಲಭೈರವೇಶ್ವರ ಸ್ವಾಮೀಜಿ ಹಾಗೂ ಶ್ರೀಗಳ ಆಶೀರ್ವಾದ ಪಡೆಯಲು ಆಗಮಿಸಿದ್ದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಹೆಚ್ಚಿನ ರೀತಿಯಲ್ಲಿ ಮತದಾನದಲ್ಲಿ ಪಾಲ್ಗೊಂಡು ಉತ್ತಮ ಆಡಳಿತ ಮಾಡುವ ಪಕ್ಷ ಹಾಗೂ ಸರ್ಕಾರವನ್ನು ಆಯ್ಕೆ ಮಾಡಬೇಕೆಂದು ಇದೇ ವೇಳೆ ಮನವಿ ಮಾಡಿದರು. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಈ ಚುನಾವಣೆಯಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದು, ಅದಕ್ಕೆ ಶಕ್ತಿ ತುಂಬಬೇಕು ಎಂದು ಜನರಲ್ಲಿ ಕೋರಿರುವುದಾಗಿ ಹೇಳಿದರು.

ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ ಪರಿಣಾಮಕಾರಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಸಫಲವಾಗಿಲ್ಲ. ಬಹುತೇಕ ಎಲ್ಲಾ ಪಕ್ಷಗಳು ಹಣ ಹಂಚಿವೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಹಣ ದೊರೆತಿದೆ. ಇದು ಯಾರ ಹಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಲಿದೆ. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಹಣ ಹಂಚಿಕೆ ನಡೆದಿದೆ ಎಂದು ಆರೋಪಿಸಿದರು.

ರಾಜರಾಜೇಶ್ವರಿನಗರದಲ್ಲಿ ದೊರೆತ ಮತದಾರರ ಗುರುತಿನ ಚೀಟಿ ಸಂಗ್ರಹದಂತಹ ಪ್ರಕರಣಗಳು ರಾಜ್ಯದ ಸುಮಾರು 20 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದೆ. ಇದರಲ್ಲಿ ಸರ್ಕಾರ ಭಾಗಿಯಾಗಿದ್ದು, ಚುನವಾಣಾ ಆಯೋಗ ಬೆಳಕಿಗೆ ತರುವಲ್ಲಿ ಯಡವಿದೆ ಎಂದು ದೂರಿದರು. ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬಿಜೆಪಿ ಅಭ್ಯರ್ಥಿಗಳ ಮನೆಗಳ ಮೇಲೆ ನಡೆಯಲಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮನೆಗಳ ಮೇಲೆ ನಡೆದಿದೆ ಎಂದು ಟೀಕಿಸಿದರು.

+ ಯಗ್ಗೇರೆ ಸರ್ಕಾರಿ ಪ್ರಾಥಮಿಕ ಶಾಲೆ, ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಡಾ. ಜಿ. ಪರಮೇಶ್ವರರವರು ಮತದಾನ ಮಾಡಿದರು

WhatsApp Image 2018-05-12 at 9.16.49 AM

+ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಜಿಟಿ ದೇವೇಗೌಡ ಮತದಾನ ಮಾಡಿದ್ದಾರೆ.  ಜೆಡಿಎಸ್ ಅಭ್ಯರ್ಥಿಯೂ ಆಗಿರುವ ಶಾಸಕ ಜಿ.ಟಿ. ದೇವೇಗೌಡ ಅವರು ಸ್ವಗ್ರಾಮ ಗುಂಗ್ರಾಲ್‌ ಛತ್ರ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ.   ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದ್ದಾರೆ. ಪತ್ನಿ ಹಾಗೂ ಸೊಸೆಯೊಂದಿಗೆ ಬಂದು ಮತ ಚಲಾಯಿಸಿದ್ದಾರೆ. ಸುತ್ತೂರು ಶ್ರೀಗಳು ಕೂಡ ಬಂದು ಮತದಾನ ಮಾಡಿದ್ದಾರೆ.

IMG-20180512-WA0090

H.Vishwanath

IMG-20180512-WA0100

tumklur-1

+ ರಾಜಾಜಿನಗರದ  ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಅವರು ಸರದಿಯಲ್ಲಿ ನಿಂತು ಮತದಾನ ಮಾಡಿದರು
ಆರಂಭದಲ್ಲೇ ಬಿಜೆಪಿ ಸಿಎಂ ಅಭ್ಯರ್ಥಿ ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಗಣ್ಯರು ಮತ ಚಲಾಯಿಸಿದ್ದಾರೆ.
+ ಕೆಲವೆಡೆ ಕೈಕೊಟ್ಟ ಮತಯಂತ್ರಗಳು, ಬೆಳಗಾವಿ ಜಿಲ್ಲೆಯ ಹಲವೆಡೆ ಮಳೆ ಅಡ್ಡಿ

ಹೈಲೈಟ್ಸ್ ಏನಿದೆ :
+ 2 ,52,05,820 ಪುರುಷ ಹಾಗೂ 2,23,15,727 ಮಹಿಳಾ ಮತದಾರರು, ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 5,12,24,351 ಮತದಾರರು ಮತ ಚಲಾಯಿ ಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ ಸೈನಿಕರು, ಅನಿವಾಸಿ ಭಾರತೀಯರಿಗೆ ಅಂಚೆ ಮೂಲಕ ಮತದಾನ ಮಾಡುವ ಅವಕಾಶವನ್ನು ಆಯೋಗ ಕಲ್ಪಿಸಿದೆ.

+ ರಾಜ್ಯಾದ್ಯಂತ 60 ಪಿಂಕ್ ಮತಗಟ್ಟೆ ಸೇರಿದಂತೆ ಒಟ್ಟಿ 58,808 ಮತಗಟ್ಟೆಗಳನ್ನು ತೆರೆಯಲಾಗಿದ್ದು 73,185 ನಿಯಂತ್ರಣ ಘಟಕಗಳು, 87,819 ಬ್ಯಾಲೆಟ್ ಘಟಕಗಳು, 1503 ಚೆಕ್‍ಪೋಸ್ಟ್ , 1361 ವಿಶೇಷ ಘಟಕಗಳನ್ನು ತೆರೆಯಲಾಗಿದೆ.

+ ಬಿಜೆಪಿ 223, ಕಾಂಗ್ರೆಸ್ 222, ಜೆಡಿಎಸ್ 201, ಬಿಎಸ್‍ಪಿ 18, ಸಿಪಿಐಎಂ 19, ಎನ್‍ಸಿಪಿ 14, ಪಕ್ಷೇತರರು 1155 ಸ್ಪರ್ಧಾ ಕಣದಲ್ಲಿದ್ದಾರೆ. ಇದರಲ್ಲಿ ಪುರುಷರು 2436 ಹಾಗೂ ಮಹಿಳೆ 219 ಸೇರಿದಂತೆ ಒಟ್ಟು ಕಣದಲ್ಲಿ 2655 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

+ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ರಾಜ್ಯಾದ್ಯಂತ ಸಿಆರ್‍ಪಿಎಫ್, ಬಿಎಸ್‍ಎಫ್, ಕೆಎಸ್‍ಆರ್‍ಪಿ, ಆರ್‍ಎಎಫ್ ಸೇರಿದಂತೆ 56,696 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

+ ಇದರಲ್ಲಿ ರಾಮನಗರ, ಕನಕಪುರ, ಶಿಕಾರಿಪುರ, ಮೊಳಕಾಲ್ಮೂರು, ಬಾದಾಮಿ, ಬೆಳಗಾವಿ ಗ್ರಾಮಾಂತರ, ಗೋವಿಂದರಾಜನಗರ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಅತಿಸೂಕ್ಷ್ಮ ಕ್ಷೇತ್ರಗಳೆಂದು ಘೋಷಣೆ ಮಾಡಲಾಗಿದೆ. ಈ ಕ್ಷೇತ್ರಗಳಿಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

+ ನಕ್ಸಲ್ ಪೀಡಿತ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಮಲೆನಾಡಿನ ಭಾಗಗಳಲ್ಲಿ ವಿಶೇಷ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಮತದಾನಕ್ಕೆ ಅಡ್ಡಿ ಪಡಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.

+ ಪ್ರಮುಖ ಮೂರು ಪಕ್ಷಗಳು ಸೇರಿದಂತೆ ಅನೇಕ ನಾಯಕರ ಹಣೆಬರಹವನ್ನು ಮತದಾರರ ಬರೆಯಲಿದ್ದಾನೆ. ಬಹುತೇಕ ಕೊನೆಯ ಚುನಾವಣೆಯ ಹೊಸ್ತಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಇದು ಕೊನೆಯ ಚುನಾವಣೆಯಾಗಲಿದೆ. ಇನ್ನು ಕಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್(ಹುಬ್ಬಳ್ಳಿ-ಧಾರವಾಡ ಕೇಂದ್ರ), ಎಚ್.ಡಿ.ಕುಮಾರಸ್ವಾಮಿ (ರಾಮನಗರ -ಚನ್ನಪಟ್ಟಣ) ಕಣದಲ್ಲಿರುವ ಪ್ರಮುಖರು.

+ ಇದೇ ರೀತಿ ಸಚಿವರಾದ ರಾಮಲಿಂಗಾ ರೆಡ್ಡಿ (ಬಿಟಿಎಂ ಲೇಔಟ್), ಡಿ.ಕೆ.ಶಿವಕುಮಾರ್(ಕನಕಪುರ), ಕೆ.ಜೆ.ಜಾರ್ಜ್ (ಸರ್ವಜ್ಞ ನಗರ), ಎಚ್.ಸಿ.ಮಹದೇವಪ್ಪ (ತೀನರಸೀಪುರ), ಎಂ.ಕೃಷ್ಣಪ್ಪ(ವಿಜಯನಗರ), ಟಿ.ಬಿ.ಜಯಚಂದ್ರ(ಶಿರಾ), ಎಚ್.ಆಂಜನೇಯ(ಹೊಳಲ್ಕೆರೆ), ಎಂ.ಬಿ.ಪಾಟೀಲ್ (ಬಬಲೇಶ್ವರ), ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್(ಕೊರಟಗೆರೆ), ಶ್ರೀರಾಮುಲು( ಬಾದಾಮಿ-ಮೊಳಕಾಲ್ಮೂರು), ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ), ಶಾಮನೂರು ಶಿವಶಂಕರಪ್ಪ(ದಾವಣಗೆರೆ ಉತ್ತರ) ಸೇರಿದಂತೆ ಅನೇಕ ನಾಯಕರ ಭವಿಷ್ಯ ಇಂದು ಮತ ಪೆಟ್ಟಿಗೆಯಲ್ಲಿ ತೀರ್ಮಾನವಾಗಲಿದೆ.

+ ಅಲ್ಲದೆ ಮಾಜಿ ಸಚಿವರಾದ ಎಚ್.ಡಿ. ರೇವಣ್ಣ, ವಿ.ಸೋಮಣ್ಣ , ಎಂ.ಪಿ. ರೇಣುಕಾ ಚಾರ್ಯ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್, ಎ.ರಾಮದಾಸ್, ಅಪ್ಪಚ್ಚು ರಂಜನ್ ಮತ್ತಿತರರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಪ್ರಮುಖವಾಗಿ ಈ ಚುನಾವಣೆಯಲ್ಲಿ ರಾಜ್ಯದಲ್ಲೇ ಅತ್ಯಂತ ಹೈವೋಲ್ಟೇಜ್ ಕ್ಷೇತ್ರಗಳೆನಿಸಿರುವ ಚಾಮುಂಡೇಶ್ವರಿ, ರಾಮನಗರ, ಶಿಕಾರಿಪುರ, ಮೊಳಕಾಲ್ಮೂರು, ಬಾದಾಮಿ ಕ್ಷೇತ್ರಗಳಲ್ಲಿ ಮತದಾರನ ಚಿತ್ತ ಯಾರತ್ತ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.

+ ಮತದಾರ ಯಾರ ಕೈ ಹಿಡಿಲಿದ್ದಾರೆ ಎಂಬುದು ಮೇ 15ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ನಿರ್ಧಾರವಾಗಲಿದೆ.

+ ಈ ಬಾರಿ ಕ್ರಿಟಿಕಲ್ ಪೋಲಿಂಗ್ ಸ್ಟೇಷನ್ ಮತ್ತು ನಾರ್ಮಲ್ ಪೋಲಿಂಗ್ ಸ್ಟೇಷನ್ ಎಂದು ವಿಂಗಡಿಸಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 1595, ಬೆಳಗಾವಿ 891, ಮೈಸೂರು 632, ತುಮಕೂರು 528, ದಕ್ಷಿಣ ಕನ್ನಡ 483 ಸೇರಿದಂತೆ ರಾಜ್ಯದಲ್ಲಿ 12,002 ಕ್ರಿಟಿಕಲ್ ಪೋಲಿಂಗ್ ಸ್ಟೇಷನ್‍ಗಳೆಂದು ಗುರುತಿಸಲಾಗಿದ್ದು, ಇವುಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಮತಗಟ್ಟೆಯ 100 ಮೀಟರ್ ಸುತ್ತಳತೆಯಲ್ಲಿ ಯಾವುದೇ ಪ್ರಚಾರ ಮಾಡುವಂತಿಲ್ಲ.

Facebook Comments

Sri Raghav

Admin