ರಾಜ್ಯದಾದ್ಯಂತ ಸರಾಸರಿ ಶೇ.72.13ರಷ್ಟು ಮತದಾನ, ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Voting--01
ಬೆಂಗಳೂರು,ಮೇ13- ಜಿದ್ದಾಜಿದ್ದಿನ ರಣರಂಗವಾಗಿದ್ದ, ವಿಧಾನಸಭೆ ಚುನಾವಣೆಯಲ್ಲಿ ಶೇ.72.13ರಷ್ಟು ಮತದಾನವಾಗಿದೆ. 2013ರ ವಿಧಾನಸಭೆ ಚುನಾವಣೆ ಹೋಲಿಸಿದರೆ ಈ ಬಾರಿ ಶೇ. 0.68ರಷ್ಟು ಹೆಚ್ಚಳವಾಗಿದೆ. 2013ರಲ್ಲಿ ಶೇ.71.45ರಷ್ಟು ಮತದಾನವಾಗಿತ್ತು. ಚುನಾವಣಾ ಆಯೋಗ ತೆಗೆದುಕೊಂಡ ಸುಧಾರಣಾ ಕ್ರಮಗಳು ಕಳೆದ ಒಂದು ತಿಂಗಳಿನಿಂದ ಮತದಾರರಲ್ಲಿ ಉಂಟು ಮಾಡಿದ ಜಾಗೃತ ಅಭಿಯಾನ ಪರಿಣಾಮ ಒಟ್ಟು ಮತದಾನದಲ್ಲಿ ಏರಿಕೆಯಾಗಿದೆ.

ಉತ್ತರ ಕರ್ನಾಟಕದ ಕೆಲವು ಕಡೆ ಮತದಾನದ ವೇಳೆ ಮಳೆ ಅಡ್ಡಿಪಡಿಸಿದ್ದರಿಂದ ಮತ ಪ್ರಮಾಣ ಇಳಿಕೆಯಾಗಿದೆ. ಇಲ್ಲದಿದ್ದರೆ ಇನ್ನು ಏರಿಕೆಯಾಗುವ ಸಂಭವವಿತ್ತು. ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆ ಈ ಬಾರಿ ಅತಿಹೆಚ್ಚು ಶೇ. 87.50 ಅತಿಹೆಚ್ಚು ಮತದಾನವಾದರೆ ಬುದ್ದಿವಂತರ ಕ್ಷೇತ್ರ ಐಟಿಬಿಟಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಅತಿ ಕಡಿವೆ 48.03ರಷ್ಟು ಮತದಾನವಾಗಿದೆ.

ನಗರ ಪ್ರದೇಶಗಳಿಗೆ ಹೋಲಿಸಿದರೆ ಈ ಬಾರಿ ಗ್ರಾಮೀಣ ಮತದಾರರೇ ಬೇಷ್ ಎನಿಸಿಕೊಂಡಿದ್ದಾರೆ. ಹಲವು ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಗ್ರಾಮೀಣ ಮತದಾರರು ಉತ್ಸುಕತೆಯಿಂದಲೇ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ಎತ್ತಿ ಹಿಡಿದಿದ್ದಾರೆ.
ಸಣ್ಣಪುಟ್ಟ ತೊಂದರೆಗಳಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ನಗರದ ಮರ್ಯಾದೆಯನ್ನು ಹರಾಜು ಹಾಕುವ ಮೇಲ್ವರ್ಗದ ಜನರು ಮನೆಯಿಂದ ಹೊರಬಂದು ಮತ ಹಾಕಲು ಮೀನಮೇಷ ಎಣಿಸುತ್ತಿದ್ದಾರೆ. ಶನಿವಾರ ರಜಾದಿನವಾದರೂ ಮತ ಹಾಕದೆ ಚುನಾವಣೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಉಳಿದಂತೆ ರಾಜ್ಯ 224 ಕ್ಷೇತ್ರಗಳಿಗೆ ನಡೆದ ಶೇಕಡವಾರು ಪ್ರಮಾಣ ಈ ಕೆಳಕಂಡಂತಿದೆ.

ಕ್ಷೇತ್ರವಾರು ವಿವರ ಇಲ್ಲಿದೆ ನೋಡಿ :

Voter1-copy

Voter2-copy

Voter3-copy

Voter4-copy

Voter5-copy

 

Facebook Comments

Sri Raghav

Admin